ಜಮೀರ್‌ ಮತ್ತು ರೋಷನ್‌ ಬೇಗ್‌ ಕಳ್ಳೆತ್ತುಗಳು; ಜಮೀರ್‌ಗೆ ಕುಳ್ಳ ನಂಬರ್ 123 ಎಂದು ಕರೆಯಬೇಕು ಎಂದ ಕಟ್ಟಾಸುಬ್ರಹ್ಮಣ್ಯ ನಾಯ್ಡು!

ಬೆಂಗಳೂರು: ಜಮೀರ್ ಮತ್ತು ರೋಷನ್ ಬೇಗ್ ಕಳ್ಳೆತ್ತುಗಳು. ಜಮೀರ್‌ಗೆ ಕಳ್ಳೆತ್ತು ಎಂದು ಕರೆದರೆ ಅಷ್ಟೇ ಸಾಲದು. ಕುಳ್ಳ ನಂಬರ್ 123 ಎಂದು ಕರೆಯಬೇಕು ಎಂದು ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.

ಜಮೀರ್ ಮತ್ತು ರೋಷನ್ ಮನೆ ಮುಂದೆ ಪ್ರತಿಭಟಿಸಲು ನಾವು ಸಿದ್ಧ. ಐಎಂಎ ಮೋಸಕ್ಕೆ ಒಳಗಾದವರು ಬಂದರೆ ಜಮೀರ್ ಮನೆ ಮುಂದೆ ಪ್ರತಿಭಟನೆ ಮಾಡೋಣ. ಅಬ್ದುಲ್ ಅಜೀಂ ನೇತೃತ್ವದಲ್ಲಿ ಈ ಪ್ರತಿಭಟನೆ ಕೈಗೊಳ್ಳೋಣ ಎಂದು ಬಿಜೆಪಿಯಿಂದ ನಡೆಸಲಾಗುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಜಮೀರ್ ಅಹಮದ್ ವಂಚಕರಿಗೆ ಆಶ್ರಯ ನೀಡುತ್ತಿದ್ದಾರೆ. ಬೆಂಗಳೂರಿಗೆ ಬರುವ ಫ್ರಾಡ್‌ಗಳಿಗೆ ಆಶ್ರಯ ನೀಡುತ್ತಿರುವುದೇ ಸಚಿವ ಜಮೀರ್ ಅಹಮದ್. ಅವರಿಗೆ ಬಿರಿಯಾನಿ ತಿನ್ನಿಸ್ತಾರೆ. ನಾನು ದೆಹಲಿಗೆ ಹೋದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡುತ್ತೇನೆ ಎಂದರು.

ನಾವೆಲ್ಲ ಸಂಸದರು ಇದೇ ಜೂ.17ಕ್ಕೆ ಪ್ರಧಾನಿ ಹಾಗೂ ಕೇಂದ್ರ ಗೃಹಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸ್ತೇವೆ. SIT ಮೂಲಕ ರಾಜ್ಯ ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕುತ್ತದೆ. ಹಾಗಾಗಿ ಪ್ರಕರಣದ ತನಿಖೆಯನ್ನು CBI ಗೆ ವಹಿಸಲೇಬೇಕು ಎಂದು ಒತ್ತಾಯಿಸುತ್ತೇವೆ. ಈಗಾಗಲೇ ಜಾರಿ ನಿರ್ದೇಶನಾಲಯವು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *