ಅಪಘಾತ, ಬೈಕ್ ಸವಾರ ಸಾವು

ಝುಳಕಿ: ರಾಷ್ಟ್ರೀಯ ಹೆದ್ದಾರಿ 13ರ ಶಿರನಾಳ ಕ್ರಾಸ್ ಬಳಿ ಶುಕ್ರವಾರ ನಸುಕಿನ ಜಾವ ಬೈಕ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ನಿವರಗಿ ಗ್ರಾಮದ ಚನ್ನಪ್ಪ ಲಾಯಪ್ಪ ಕರ್ಜಗಿ (27) ಮೃತ ದುರ್ದೈವಿ. ಚನ್ನಪ್ಪ ಮಹಾರಾಷ್ಟ್ರದ ಇಂಚೂರದಿಂದ ಸ್ವಗ್ರಾಮ ನಿವರಗಿ ಕಡೆಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಝುಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.