ಬೆಂಗಳೂರು: ಇತ್ತೀಚೆಗಷ್ಟೇ ಕೋರಿಯೋಗ್ರಾಫರ್ ಧನಶ್ರೀ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡು ಐಪಿಎಲ್ನಲ್ಲಿ ಆಡಲು ಸಜ್ಜಾಗುತ್ತಿರುವ ಸ್ಪಿನ್ನರ್ ಯಜುವೇಂದ್ರ ಚಾಹಲ್, ಆರ್ಸಿಬಿ ತಂಡವನ್ನು ಕೂಡಿಕೊಂಡು ಬೆಂಗಳೂರಿನಲ್ಲಿ ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ. ಈ ನಡುವೆ ಕ್ವಾರಂಟೈನ್ನಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಮೂಲಕ ಚಾಹಲ್ ಸುದ್ದಿಯಾಗಿದ್ದಾರೆ. ಆದರೆ ಇದೊಂದು ತಮಾಷೆಯ ಪ್ರಸಂಗವಾಗಿದೆ ಎಂಬುದು ಗಮನಾರ್ಹ.
ಲಾಕ್ಡೌನ್ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ಪೋಸ್ಟ್ಗಳ ಮೂಲಕ ಸುದ್ದಿಯಲ್ಲಿದ್ದ ಚಾಹಲ್ ಅವರು ಇದ್ದಲ್ಲಿ ನಗುವಿಗೆ ಯಾವುದೇ ಕೊರತೆ ಇರುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಯುಎಇಗೆ ಪ್ರಯಾಣ ಬೆಳೆಸುವುದಕ್ಕೆ ಪೂರ್ವಭಾವಿಯಾಗಿ ಆರ್ಸಿಬಿ ತಂಡ ಬೆಂಗಳೂರಿನಲ್ಲಿ ಹೋಟೆಲ್ ಕ್ವಾರಂಟೈನ್ಗೆ ಒಳಪಟ್ಟಿದೆ. ಈ ವೇಳೆ ಚಾಹಲ್ ಹೋಟೆಲ್ ಕೋಣೆಯಿಂದ ಹೊರಹೋಗಲು ತಮಗೆ ಅವಕಾಶ ನೀಡುವಂತೆ ಕೇಳಿಕೊಳ್ಳುತ್ತಿರುವ ಮತ್ತು ಕ್ವಾರಂಟೈನ್ನಿಂದ ತಪ್ಪಿಸಿಕೊಳ್ಳಲು ಯತ್ನಿಸುವ ರೀತಿಯ ತಮಾಷೆಯ ವಿಡಿಯೋದ ಮೂಲಕ ಗಮನಸೆಳೆದಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾಗಿಂತ ಸಿಎಸ್ಕೆ ಪರ ರೈನಾ ಹೆಚ್ಚು ಮಿಂಚಿರುವುದೇಕೆ? ಕಾರಣ ನೀಡಿದ ದ್ರಾವಿಡ್!
ಚಾಹಲ್ ಅವರ ಈ ತುಂಟಾಟದ ವಿಡಿಯೋವನ್ನು ಆರ್ಸಿಬಿ ಫ್ರಾಂಚೈಸಿ ತನ್ನ ಟ್ವಿಟರ್ ಪುಟದಲ್ಲಿ ಪ್ರಕಟಿಸಿದೆ. ಕ್ವಾರಂಟೈನ್ ಮುಗಿಯಲು ತನಗೆ ಇನ್ನೂ 4 ದಿನಗಳಿವೆ ಎಂದು 30 ವರ್ಷದ ಚಾಹಲ್ ಈ ವಿಡಿಯೋದಲ್ಲಿ ತಿಳಿಸಿದ್ದಾರೆ. ಕ್ವಾರಂಟೈನ್ನಲ್ಲಿರುವುದು ಎಷ್ಟರ ಮಟ್ಟಿಗೆ ಕಷ್ಟದ ಕೆಲಸ ಎಂದೂ ಚಾಹಲ್ ಈ ಮೂಲಕ ತೋರಿಸಿಕೊಟ್ಟಿದ್ದಾರೆ.
‘Quarantine Yuzi’ has his countdown priorities sorted. Never a dull moment when @yuzi_chahal is around! 😂😁#PlayBold #BoldDiaries #IPL2020 pic.twitter.com/MEED3v2YCL
— Royal Challengers Bangalore (@RCBTweets) August 17, 2020