ಯುವಿ ವಿದಾಯಕ್ಕೆ ಟೀಂ ಇಂಡಿಯಾದ ಮಾಜಿ ಕೋಚ್​​ ಗ್ರೇಗ್​ ಚಾಪೆಲ್​ ವಿರುದ್ಧ ಕಿಡಿಕಾರಿದ ಯುವರಾಜ್​ ಸಿಂಗ್​ ತಂದೆ

ನವದೆಹಲಿ: ಟೀಂ ಇಂಡಿಯಾದ ಹಿರಿಯ ಆಟಗಾರ ಹಾಗೂ ಎಡಗೈ ದಾಂಡಿಗ ಯುವರಾಜ್​ ಸಿಂಗ್​ ಭಾನುವಾರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬೆನ್ನಲ್ಲೇ ತಂದೆ ಯೋಗರಾಜ್​ ಸಿಂಗ್​ ಅವರು ಈ ಹಿಂದಿನ ಟೀಂ ಇಂಡಿಯಾ ಕೋಚ್​ ಗ್ರೇಗ್​ ಚಾಪೆಲ್​ ವಿರುದ್ಧ ಕಿಡಿಕಾರಿದ್ದಾರೆ.

ಮಗನ ವಿದಾಯದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಗ್ರೇಗ್​ ಚಾಪೆಲ್​ ಟೀಂ ಇಂಡಿಯಾದ ಕೋಚ್​ ಆಗಿದ್ದಾಗ ನೆಟ್​ ಅಭ್ಯಾಸಕ್ಕೂ ಮುಂಚೆ ವಾರ್ಮ್​ ಅಪ್​ ಮಾಡಿಕೊಳ್ಳಲು ಸಾಕಷ್ಟು ಸ್ಥಳೀಯ ಆಟಗಳನ್ನು ಆಡಿಸುತ್ತಿದ್ದರು. ಖೋ ಖೋ ಆಡಿಸುವಾಗ ಯುವರಾಜ್​, ಮಂಡಿ ನೋವಿಗೆ ಒಳಗಾಗಿದ್ದರು. ಒಂದು ವೇಳೆ ಯುವಿ ನೋವಿನಿಂದ ಮುಕ್ತವಾಗಿದ್ದರೆ, ಏಕದಿನ ಹಾಗೂ ಟಿ20ಯ ಎಲ್ಲ ದಾಖಲೆಗಳನ್ನು ಮುರಿಯುತ್ತಿದ್ದರು. ಈ ವಿಚಾರದಲ್ಲಿ ನಾನು ಎಂದಿಗೂ ಚಾಪೆಲ್​ ಅವರನ್ನು ಕ್ಷಮಿಸುವುದಿಲ್ಲ ಎಂದು ಯೋಗರಾಜ್​ ಸಿಂಗ್​ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ತಂದೆಯ ಜತೆಯೇ ಮನಸ್ತಾಪ ಹೊಂದಿದ್ದ ಯುವಿ, ಎಲ್ಲವನ್ನು ಮರೆತು ಇತ್ತೀಚೆಗೆ ಇಬ್ಬರು ಚಂಡೀಗಢದಲ್ಲಿ ಅಮೂಲ್ಯ ಸಮಯವನ್ನು ಕಳೆದಿರುವುದಾಗಿ ತಂದೆ ಯೋಗರಾಜ್​ ಸಿಂಗ್​ ಹೇಳಿದ್ದಾರೆ.

ನನ್ನ ತಂದೆ ನಡುವಿನ ಮಾತುಕತೆಯಿಂದ ಅವರ ಮೇಲಿದ್ದ ಅಸಮಾಧಾನವನ್ನು ಮರೆತಿದ್ದೇನೆ. ಇದೀಗ ಅವರೊಂದಿಗೆ ಸಮಯ ಕಳೆಯಲು ಎದುರು ನೋಡುತ್ತಿದ್ದೇನೆ ಎಂದು ಯುವಿ ವಿದಾಯದ ಭಾಷಣ ವೇಳೆ ಹೇಳಿಕೊಂಡಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *