More

    ಯುವರತ್ನ ಚಿತ್ರತಂಡದಿಂದ ಪುನೀತ್​ ಅಭಿಮಾನಿಗಳಿಗೆ ಹೊಸವರ್ಷದ ಗಿಫ್ಟ್​: ಅಸ್ಥಿ ಪಂಜರ ಹೊತ್ತ ವಿಕ್ರಮಾದಿತ್ಯನಂತೆ ಬಂದ ಅಪ್ಪು​!

    ಬೆಂಗಳೂರು: ಸ್ಯಾಂಡಲ್​​ವುಡ್​ ಬಹುನಿರೀಕ್ಷಿತ “ಯುವರತ್ನ” ಚಿತ್ರದಲ್ಲಿನ ಪವರ್​ ಸ್ಟಾರ್​ ಪುನೀತ್​​ ರಾಜ್​ಕುಮಾರ್​ ಅವರ ಹೊಸ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪುನೀತ್​ ಅಭಿಮಾನಿಗಳಿಗೆ ಹೊಸ ವರ್ಷದ ಉಡುಗೊರೆ ನೀಡಿದೆ.

    ಟ್ವಿಟರ್​ ಮೂಲಕ ಹೊಸ ಲುಕ್​ ಬಿಡುಗಡೆ ಮಾಡಿರುವ ನಿರ್ದೇಶಕ ಸಂತೋಷ್​ ಆನಂದ್​ ರಾಮ್​, ನಮ್ಮ ಪುನೀತ್​ ರಾಜ್​ಕುಮಾರ್​ ಅವರ ಹೊಸ ಲುಕ್​ ಎಲ್ಲರಲ್ಲೂ ಕ್ರೇಜ್​ ಹುಟ್ಟುಹಾಕಲಿದೆ. ಎಲ್ಲ ಅಭಿಮಾನಿಗಳಿಗೂ ಹಾಗೂ ಯುವರತ್ನ ಚಿತ್ರತಂಡದ ಸ್ನೇಹಿತರಿಗೂ ಹೊಸ ವರ್ಷದ ಶುಭಾಶಯಗಳು ಎಂದು ತಿಳಿಸಿದ್ದಾರೆ.

    ಬಿಡುಗಡೆಯಾಗಿರುವ ಪುನೀತ್​ ಅವರ ಹೊಸ ಲುಕ್​ ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಸ್ಥಿ ಪಂಜರವನ್ನು ಹೊತ್ತ ವಿಕ್ರಮಾದಿತ್ಯನಂತೆ ಪುನೀತ್​ ಪೋಸ್​ ನೀಡಿದ್ದಾರೆ. ಅಲ್ಲದೆ, ಅವರ ಪಕ್ಕದಲ್ಲಿ ಡೈನೋಸಾರ್ ಅಸ್ಥಿಪಂಜರ ಇರುವುದು ಚಿತ್ರದ ಮೇಲೆ ಕುತೂಹಲ ಕೆರಳಿಸಿದೆ. ಈಗಾಗಲೇ ಪೋಸ್ಟರ್​ ನೋಡಿದವರು ಸಾಕಷ್ಟು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

    ಅಂದಹಾಗೆ ಚಿತ್ರವನ್ನು ಮಿಸ್ಟರ್​ ಆ್ಯಂಡ್​ ಮಿಸೆಸ್​​ ರಾಮಾಚಾರಿ ಹಾಗೂ ರಾಜಕುಮಾರ್​ ಖ್ಯಾತಿಯ ಸಂತೋಷ್​ ಆನಂದ್​ರಾಮ್​ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​ ಅಡಿಯಲ್ಲಿ ಚಿತ್ರ ಮೂಡಿಬರುತ್ತಿದೆ. ಎಸ್​​ ತಮನ್​ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಹಿಂದೆ ಟೀಸರ್​ನಿಂದಲೇ ಯುವರತ್ನ ಸದ್ದು ಮಾಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts