ಆಂಧ್ರಪ್ರದೇಶ: ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ( YRSCP) ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುವನ್ನು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಹಿಂದಿನ ಸರ್ಕಾರ ತಿರುಮಲ ಲಡ್ಡನ್ನು ಅಪವಿತ್ರಗೊಳಿಸಿತ್ತು ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.
ಮಂಗಳಗಿರಿಯಲ್ಲಿ ನಡೆದ ಎನ್‌ಡಿಎ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು, ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಮಲ ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ. ಇದರಿಂದಾಗಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾಗಿದೆ. ದೇವರಿಗೆ ಅರ್ಪಿಸುವ ನೈವೇದ್ಯವನ್ನು ಅಪವಿತ್ರಗೊಳಿಸಲಾಗಿದೆ . ಲಡ್ಡೂ ತಯಾರಿಕೆಗೆ ಕೆಳದರ್ಜೆಯ ವಸ್ತುಗಳನ್ನು ಬಳಸಲಾಗಿದೆ. ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ. ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಶುದ್ಧ ತುಪ್ಪ ತಂದು ಲಡ್ಡು ಪ್ರಸಾದಕ್ಕೆ ಬಳಸುತ್ತಿದ್ದಾರೆ ಎಂದು ಹೇಳುತ್ತಾ ಹಿಂದಿನ ಸರ್ಕಾರದ ಕುರಿತಾಗಿ ಆರೋಪ ಮಾಡಿದ್ದಾರೆ.
ಸುರೇಂದರ್ ರೆಡ್ಡಿ ಸಮಿತಿಯು ಈ ಹಿಂದೆ ಸರಬರಾಜು ಮಾಡಿದ ತುಪ್ಪ ಕಳಪೆ ಗುಣಮಟ್ಟದ್ದಾಗಿದೆ ಎಂದು ತೀರ್ಮಾನಿಸಿದೆ. ಲಡ್ಡುಗಳ ಗುಣಮಟ್ಟ ಕಳಪೆಯಾಗಿರುವುದರಿಂದ ಭಕ್ತರು ಲಡ್ಡುಗಳ ಬಗ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಕಡಿಮೆ ಗುಣಮಟ್ಟದ ತುಪ್ಪ ಪೂರೈಸಿದವರನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಲಡ್ಡು ಪ್ರಸಾದದ ಗುಣಮಟ್ಟವನ್ನು ಸುಧಾರಿಸಲು ಕರ್ನಾಟಕ ಹಾಲು ಒಕ್ಕೂಟದಿಂದ ನಂದಿನಿ ತುಪ್ಪವನ್ನು ಖರೀದಿಸಲು ಟಿಟಿಡಿ ಒಪ್ಪಂದಕ್ಕೆ ಸಹಿ ಹಾಕಿದೆ. ಕರ್ನಾಟಕ ಹಾಲು ಒಕ್ಕೂಟವು ಈ ಹಿಂದೆ 20 ವರ್ಷಗಳಿಂದ ಟಿಟಿಡಿಗೆ ತುಪ್ಪವನ್ನು ಪೂರೈಸುತ್ತಿದೆ ಎಂದು ಹೇಳಿದ್ದಾರೆ.
ತಿರುಮಲದಲ್ಲಿ ಭಕ್ತರಿಗೆ ಟಿಟಿಡಿ ನಿಯಮಿತವಾಗಿ ಸುಮಾರು ಮೂರೂವರೆ ಲಕ್ಷ ಲಡ್ಡೂಗಳನ್ನು ವಿತರಿಸುತ್ತದೆ. ಲಡ್ಡುವಿನ ಪಾವಿತ್ರ್ಯತೆ ಕಾಪಾಡಲು ಜನರು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅನ್ನ ಪ್ರಸಾದ ತಯಾರಿಕೆಯಲ್ಲಿ ಗುಣಮಟ್ಟದ ತುಪ್ಪ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
ಲಡ್ಡೂ ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಆರೋಪ ಭಕ್ತರನ್ನು ಕೆರಳಿಸುತ್ತಿದೆ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಕೂಗು ಕೇಳಿ ಬಂದಿದೆ.
ಬೌದ್ಧ ಸನ್ಯಾಸಿಯಾದ ಬೆಕ್ಕು! ಶಿಕ್ಷಕರ ಮಾತನ್ನು ಎಷ್ಟು ಗಮನವಿಟ್ಟು ಕೇಳುತ್ತಿದೆ ನೋಡಿ…