ಚಂದ್ರಬಾಬು ನಾಯ್ಡುಗೆ ತೀವ್ರ ಮುಖಭಂಗ: ಲೋಕಸಭೆಯ ಒಂದೂ ಕ್ಷೇತ್ರ ದಕ್ಕಲಿಲ್ಲ, ವಿಧಾನಸಭೆಯೂ ವೈಎಸ್​ಆರ್ ಕಾಂಗ್ರೆಸ್ ಪಾಲು

ಹೈದರಾಬಾದ್​: ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಎರಡೂ ಚುನಾವಣೆಯ ಫಲಿತಾಂಶವೂ ವೈ.ಎಸ್​ .ಜಗಮೋಹನ್​ರೆಡ್ಡಿ ಪರವಾಗಿ ಬಂದಿದ್ದು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಗೆ ತೀವ್ರ ಮುಖಭಂಗ ಉಂಟಾಗಿದೆ.

ಜಗಮೋಹನ್​ ರೆಡ್ಡಿಯವರ ವೈಎಸ್​ಆರ್​ ಕಾಂಗ್ರೆಸ್​ ಪಾರ್ಟಿ ಲೋಕಸಭೆಯ ಎಲ್ಲ ಹತ್ತು ಕ್ಷೇತ್ರಗಳಲ್ಲೂ ಭರ್ಜರಿ ಮುನ್ನಡೆ ಸಾಧಿಸಿದ್ದು ಗೆಲುವು ಖಚಿತವಾಗಿದೆ. ಹಾಗೇ ವಿಧಾನಸಭೆ ಚುನಾವಣೆಯ ಒಟ್ಟು 175 ಸೀಟುಗಳಲ್ಲಿ 147 ಕ್ಷೇತ್ರವನ್ನು ವೈಎಸ್​ಆರ್​ಪಿ ಬಾಚಿಕೊಂಡಿದೆ. ಒಂದು ಕ್ಷೇತ್ರ ಬಿಜೆಪಿಗೆ ದಕ್ಕಿದೆ.

2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾದಾಗಿನಿಂದಲೂ ಆಂಧ್ರಪ್ರದೇಶ ಚಂದ್ರಬಾಬು ನಾಯ್ಡು ಅವರ ಆಡಳಿತದಲ್ಲಿಯೇ ಇತ್ತು. ಈಗಿನ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರವೂ ಟಿಡಿಪಿ ಪಾಲಿಗೆ ಸಿಗಲಿಲ್ಲ. ಹಾಗೇ ಕಳೆದ ಬಾರಿಗಿಂತ 26 ವಿಧಾನಸಭಾ ಕ್ಷೇತ್ರಗಳನ್ನು ಕಳೆದುಕೊಂಡು ತೀವ್ರ ಮುಖಭಂಗಕ್ಕೆ ಒಳಗಾಗಿದ್ದು, ಇಂದು ಸಂಜೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಚಂದ್ರಬಾಬು ನಾಯ್ಡು ಎನ್​ಡಿಎ ಮೈತ್ರಿಕೂಟದಿಂದ ಕಳೆದ ವರ್ಷ ಹೊರ ಬಂದಿದ್ದಾರೆ. ಬಿಜೆಪಿಯ ಕಟ್ಟಾ ವಿರೋಧಿಯಾಗಿರುವ ಅವರು ಮಹಾಘಟ್​ಬಂಧನ್​ದ ನೇತೃತ್ವ ವಹಿಸಿದವರು.

Leave a Reply

Your email address will not be published. Required fields are marked *