ಯುವಕನ ಟಾರ್ಚರ್‌ಗೆ ಬೇಸತ್ತು ನವ ವಿವಾಹಿತೆ ಆತ್ಮಹತ್ಯೆ, ಡೆತ್‌ನೋಟ್‌ನಲ್ಲಿತ್ತು ಅಸಲಿ ಕಾರಣ!

ಕೊಡಗು: ಯುವಕನ ಟಾರ್ಚರ್‌ಗೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.

ಮಡಿಕೇರಿಯ ಡೈರಿ ಫಾರ್ಮ್ ನಿವಾಸಿ ದಿವ್ಯಜ್ಯೋತಿ(19) ಮೃತ ದುರ್ದೈವಿ.

ತಂದೆ ತಾಯಿಗೆ ತಿಳಿಸದೆ ದಿವ್ಯಜ್ಯೋತಿ ಮತ್ತು ಬ್ರಿಜೇಶ್ ಎಂಬಿಬ್ಬರು ರಿಜಿಸ್ಟರ್‌ ಮದುವೆ ಮಾಡಿಕೊಂಡಿದ್ದರು. ದಿವ್ಯಜ್ಯೋತಿಗೆ ಪರಿಚಯಸ್ಥನಾಗಿದ್ದ ಪವನ್‌ ಎಂಬಾತ ಇವರಿಬ್ಬರ ಬೆನ್ನು ಬಿದ್ದಿದ್ದ. ಇವರಿಬ್ಬರ ಮದುವೆ ಆಗಲು ಬಿಡುವುದಿಲ್ಲ ಎಂದು ಟಾರ್ಚರ್ ಮಾಡುತ್ತಿದ್ದ. ಈತನ ಕಾಟಕ್ಕೆ ಬೇಸತ್ತ ದಿವ್ಯಜ್ಯೋತಿ ಡೆತ್‌ನೋಟ್‌ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

ಪವನ್‌ನಿಂದ ಟಾರ್ಚರ್ ಇದೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟು ದಿವ್ಯಜ್ಯೋತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಟಾರ್ಚರ್ ಕೊಟ್ಟ ಪವನ್ ಮತ್ತು ರಿಜಿಸ್ಟರ್ ಮದುವೆ ಆಗಿದ್ದ ಬ್ರಿಜೇಶ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *