25.7 C
Bangalore
Sunday, December 15, 2019

ಬೆಳಗಾವಿ: ಯುವ ಜನತೆಯೇ ದೇಶದ ಶಕ್ತಿ

Latest News

ಗಾಂಧೀಜಿಯವರ ವಿಚಾರಧಾರೆ ದಾರಿದೀಪವಾಗಲಿ

ವಿಜಯಪುರ: ಗಾಂಧೀಜಿ ಅವರ ವಿಚಾರಧಾರೆಗಳು ನಮ್ಮ ಬದುಕಿಗೆ ದಾರಿ ದೀಪವಾಗಲಿ ಎಂದು ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಂಜೀವ ಕುಲಕರ್ಣಿ ಹೇಳಿದರು.ನಗರದ...

ಬಿಎಸ್‌ವೈ ವೈಟ್‌ಡ್ರೆಸ್ ರಮೇಶ ಬ್ಲ್ಯಾಕ್ ಮಾಡ್ತಾನೆ

ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧರಿಸುವ ವೈಟ್ ಡ್ರೆಸ್‌ಅನ್ನು ಬ್ಲಾೃಕ್ ಮಾಡುತ್ತಾನೆ ಎಂದು ಶಾಸಕ ಸತೀಶ ಜಾರಕಿಹೊಳಿ...

ನಗ ನಗದುಗಳೊಂದಿಗೆ ಮಾವನ ಮನೆಯಿಂದ ರಾತ್ರೋರಾತ್ರಿ ಪರಾರಿಯಾದ ಮದುಮಗಳು; ಮದುಮಗ ಕಂಗಾಲು!

ಬದೌನ್​ (ಉತ್ತರಪ್ರದೇಶ): ಹೊಸದಾಗಿ ಮದುವೆಯಾಗಿದ್ದ ಮದುಮಗಳು ಗಂಡನ ಮನೆಯವರಿಗೆ ಆಹಾರದಲ್ಲಿ ಮತ್ತು ಬರುವ ಔಷಧ ಬೆರಸಿ ಮನೆಯಲ್ಲಿದ್ದ ನಗ ನಾಣ್ಯ ದೋಚಿ ಪರಾರಿಯಾಗಿದ್ದಾಳೆ. ಬದೌನ್​ ಜಿಲ್ಲೆಯ ಚೋಟಾ...

ಪೌರತ್ವ ತಿದ್ದುಪಡಿ ಕಾಯ್ದೆ ಶೇ.1000 ಪಟ್ಟು ಸರಿ: ಪ್ರತಿಭಟನೆಗಳಿಗೆ ಕಾಂಗ್ರೆಸ್​​ ಮಿತ್ರಪಕ್ಷಗಳು ಕಾರಣ

ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್​ ಮತ್ತು ಅದರ ಮಿತ್ರ ಪಕ್ಷಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ...

ಕಳ್ಳಬಟ್ಟಿ ಸಾರಾಯಿ ಮಾರಾಟಗಾರನ ಬಂಧನ

ರಾಯಬಾಗ: ತಾಲೂಕಿನ ಮೊರಬ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ, ಆರೋಪಿಯನ್ನು ಬಂಧಿಸಿ, ಆತನಿಂದ...

ಬೆಳಗಾವಿ: ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚಿನ ಯುವ ಸಂಪನ್ಮೂಲ ಹೊಂದಿದ ದೇಶ ಭಾರತ. ಇಲ್ಲಿನ ಜನಸಂಖ್ಯೆಯಲ್ಲಿ ಯುವ ಜನತೆಯ ಪ್ರಮಾಣವೇ ಹೆಚ್ಚಿದೆ. ಯುವಕರೇ ದೇಶದ ಶಕ್ತಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ನಗರದ ಕೆಎಲ್ಎಸ್ ಸಂಸ್ಥೆಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ 3ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ತಂತ್ರಜ್ಞಾನ ಬಳಕೆಯಿಂದ ದೇಶದಲ್ಲಿ ಕ್ರಾಂತಿ ಮಾಡಲು ಸಾಧ್ಯವಿದೆ. ನಾವೇನು ಮಾಡಬಲ್ಲೆವು? ಏನೆಲ್ಲ ಮಾಡಲು ನಾವು ಸಮರ್ಥರಿದ್ದೇವೆ ಎನ್ನುವುದನ್ನು ಅರಿತುಕೊಂಡಾಗ ಯಶಸ್ವಿಯಾಗಲು ಸಾಧ್ಯ. ಪದವಿ ಪಡೆಯುವುದರಿಂದ ಶಿಕ್ಷಣ ಪೂರ್ಣವಾಯಿತು ಎಂದು ಭಾವಿಸಬೇಡಿ. ಜೀವನದ ಉದ್ದಕ್ಕೂ ಕಲಿಯುವುದು ಇದ್ದೇ ಇರುತ್ತದೆ. ತಾಳ್ಮೆ, ಶ್ರದ್ಧೆ, ಕಠಿಣ ಪರಿಶ್ರಮದಿಂದ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯ. ಏನೂ ಇಲ್ಲದ ಸ್ಥಿತಿಯಿಂದ ಅತ್ಯಂತ ಎತ್ತರದ ಸ್ಥಾನಕ್ಕೆ ಏರಿದವರೂ ನಮ್ಮ ದೇಶದಲ್ಲಿ ಸಾಕಷ್ಟು ಜನರಿದ್ದಾರೆ. ಬದುಕಿನಲ್ಲಿ ಎಂದೂ ಮ್ಯಾನೇಜರ್ ಆಗಲು ಪ್ರಯತ್ನಿಸಬೇಡಿ, ಲೀಡರ್ ಆಗಲು ಪ್ರಯತ್ನಿಸಿ. ಉದ್ಯೋಗಿ ಆಗುವ ಬದಲು ಉದ್ಯೋಗ ನೀಡುವವರಾಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪಾಶ್ಚಿಮಾತ್ಯದ ಕೆಲ ದೇಶಗಳಲ್ಲಿ ಒಂಟಿತನಕ್ಕಾಗಿಯೇ ಪ್ರತ್ಯೇಕ ಖಾತೆ ಇದೆ. ಇಂತಹ ಪರಿಸ್ಥಿತಿ ಅಲ್ಲಿ ನಿರ್ಮಾಣ ಆಗಲು ಪಾಶ್ಚಿಮಾತ್ಯ ಸಂಸ್ಕೃತಿಯೇ ಕಾರಣ. ಎಷ್ಟು ಹಣ ಗಳಿಸುತ್ತೀರಿ ಎನ್ನುವುದಕ್ಕಿಂತ ಎಷ್ಟು ಸಂತೋಷ ವಾಗಿರುತ್ತೀರಿ ಎನ್ನುವುದು ಮುಖ್ಯ. ತಂದೆ, ತಾಯಿ ಕುಟುಂಬದ ಸದಸ್ಯರೊಂದಿಗೆ ಸದಾ ಸಂಪರ್ಕದಲ್ಲಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ನ ಗ್ಲೋಬಲ್ ಆರ್.ಎಂ.ಜಿ. ಮುಖ್ಯಸ್ಥ ಚಕ್ರವರ್ತಿ ಇ.ಎಸ್. ಮಾತನಾಡಿ, ಬೆಳಗಾವಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ದಶಕಗಳಿಂದ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ನ ವಿಶ್ವಾಸಾರ್ಹ ಪಾಲುದಾರ ಆಗಿದೆ. ಇಲ್ಲಿ ಪ್ರಾಂಶುಪಾಲರಾಗಿದ್ದ ವಿಟಿಯು ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ ಅವರು, ರಾಜ್ಯದ ಶ್ರೇಷ್ಠ ಪ್ರಾಂಶುಪಾಲರಲ್ಲಿ ಒಬ್ಬರಾಗಿದ್ದಾರೆ. ನೀವು ಯಾವ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದೀರಿ ಎಂಬ ವಿಷಯ ಕೂಡ ನಿಮ್ಮ ವೌಲ್ಯ ಹೆಚ್ಚಿಸುತ್ತದೆ. ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ನಿಮ್ಮನ್ನು ಸಮಾಜದ ಕಾಳಜಿಯುಳ್ಳ ನಾಗರಿಕರನ್ನಾಗಿ ರೂಪಿಸುತ್ತಿದೆ. ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎನ್ನುವ ವಿಷಯ ಭವಿಷ್ಯದಲ್ಲಿ ನಿಮಗೆ ಬಹಳ ಅನುಕೂಲಕರವಾಗಲಿದೆ ಎಂದರು.

ಶಿಕ್ಷಣ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಕೊಡುಗೆ ನೀಡಬಲ್ಲ ಸಾಮರ್ಥ್ಯ ನಿಮಗೆ ನೀಡುತ್ತದೆ. ದೀರ್ಘ ಕಾಲದ ಅವಕಾಶಗಳನ್ನು ಒದಗಿಸುತ್ತದೆ. ದೇಶದಲ್ಲಿ ತಾಂತ್ರಿಕತೆ ಕಾರಣದಿಂದ ಎಲ್ಲ ಉದ್ಯಮಗಳು ಪ್ರಚಂಡ ಪರಿವರ್ತನೆ ಹೊಂದುತ್ತಿವೆ. ತಂತ್ರಜ್ಞಾನಕ್ಕೆ ನೀವೆ ಮಾಲೀಕರಾಗಿದ್ದೀರಿ. ಹೀಗಾಗಿ ನಿಮಗೆ ಸಾಕಷ್ಟು ಅವಕಾಶಗಳು ಲಭ್ಯವಾಗಲಿದೆ. ದೇಶದಲ್ಲಿ ಅನಕ್ಷರತೆ ದೊಡ್ಡ ಸಮಸ್ಯೆ ಆಗಿದ್ದು, ಈ ಸಮಸ್ಯೆ ನಿವಾರಣೆಗೆ ಶ್ರಮಿಸಿ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಎಸ್ ಸೊಸೈಟಿ ಅಧ್ಯಕ್ಷ ಅನಂತ ಮಂಡಗಿ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆಎಲ್‌ಎಸ್‌ನ ಎಂ.ಆರ್.ಕುಲಕರ್ಣಿ, ಆಡಳಿತ ಮಂಡಳಿ ಚೇರ್ಮನ್ ಯು.ಎನ್.ಕಾಲಕುಂದ್ರಿಕರ, ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಡಿ.ಎ.ಕುಲಕರ್ಣಿ, ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ, ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ ಇದ್ದರು. 46 ರ‌್ಯಾಂಕ್ ವಿಜೇತರು ಸೇರಿದಂತೆ ಒಟ್ಟು 1100 ಬಿ.ಇ. ಹಾಗೂ ಎಂ.ಬಿ.ಎ, ಎಂ.ಸಿ.ಎ ಮತ್ತು ಮಾಸ್ಟರ್ ಇನ್ ಟೆಕ್ನಾಲಜಿ(ಎಂ.ಟೆಕ್.)ಗಳ ಸ್ನಾತಕೋತ್ತರ ಪದವಿಧರರಿಗೆ ಪದವಿ ಪ್ರದಾನ ಮಾಡಲಾಯಿತು.

10 ಸಾವಿರದಲ್ಲಿ ಉದ್ಯಮ ಆರಂಭಿಸಿ ಯಶಸ್ವಿಯಾದೆ

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು, ಉದ್ಯಮಶೀಲತೆ ಬಗ್ಗೆ ತಮ್ಮ ಜೀವನದ ಉದಾಹರಣೆಯನ್ನೇ ವಿದ್ಯಾರ್ಥಿಗಳಿಗೆ ಹೇಳಿದರು. ಪದವಿ ಮುಗಿಸಿ ಎಲ್‌ಎಲ್‌ಬಿ ಶಿಕ್ಷಣ ಪಡೆದ ಮೇಲೆ ಉದ್ಯಮ ಪ್ರಾರಂಭಿಸುವುದಾಗಿ ಮನೆಯಲ್ಲಿ ಹೇಳಿದಾಗ ಮನೆಯಲ್ಲಿ ತಂದೆ,ತಾಯಿ ಆಕಾಶ ಕಳಚಿ ಬಿದ್ದಂತೆ ಮಾಡಿದರು. ಎಲ್ಲಿಯಾದರೂ ಉಪನ್ಯಾಸಕನಾಗಿ ನೌಕರಿ ಕೊಡಿಸುವುದಾಗಿ ತಂದೆ ಹೇಳಿದರು. ಆದರೆ, ಕೊನೆಗೂ ಪಟ್ಟು ಬಿಡದೇ ಇದ್ದಾಗ ಒಪ್ಪಿ, 10 ಸಾವಿರ ರೂ. ನೆರವು ನೀಡಿದರು. ನಾನು ಉದ್ಯಮ ಪ್ರಾರಂಭಿಸಿ, ಸಂಸದನಾಗುವ ಮುನ್ನವೇ 600 ಜನರಿಗೆ ಉದ್ಯೋಗ ನೀಡಿದ್ದೆ. ಈಗಲೂ 800 ಜನರಿಗೆ ಉದ್ಯೋಗ ನೀಡುತ್ತಿದ್ದೇನೆ ಎಂದರು.

ದೇಶದ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ಜನಧನ ಖಾತೆ, ಆಧಾರ್ ಹಾಗೂ ಮೊಬೈಲ್ ಲಿಂಕ್ ಮಾಡುವ ಮೂಲಕ ನೇರವಾಗಿ ಲಾನುಭವಿಗಳ ಖಾತೆಗೆ ಹಣ ಜಮಾ ಮಾಡುತ್ತಿರುವುದರಿಂದ ಮೊದಲು ನಡೆಯುತ್ತಿದ್ದ 125 ಸಾವಿರ ಕೋಟಿ ರೂ. ಗಳಷ್ಟು ಬೃಹತ್ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ.
|ಪ್ರಲ್ಹಾದ ಜೋಶಿ ಸಚಿವ,  ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...