ಗೆಳತಿಯನ್ನು ಭೇಟಿ ಮಾಡಲು ಆಕೆಯ ಊರಿಗೆ ತೆರಳಿದ ಯುವಕನಿಗೆ ಕಾದಿತ್ತು ಶಾಕ್​!

ಪ್ರಯಾಗರಾಜ್​: ಗೆಳತಿಯನ್ನು ಭೇಟಿ ಮಾಡಲು ಆಕೆಯ ಊರಿಗೆ ತೆರಳಿದ ಯುವಕನನ್ನು ಗ್ರಾಮಸ್ಥರು ಹಿಡಿದು ಥಳಿಸಿ, ಆತನಿಂದ ಬಸ್ಕಿ ಹೊಡೆಸಿ ಹಿಂಸಿಸಿರುವ ಘಟನೆ ಉತ್ತರ ಪ್ರದೇಶದ ಮೇಜಾ ಗ್ರಾಮದಲ್ಲಿ ನಡೆದಿದ್ದು, ಯುವಕನ ತಂದೆಗೂ ಗ್ರಾಮಸ್ಥರು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಈ ಘಟನೆ ಶುಕ್ರವಾರ ಬೆಳಕಿಗೆ ಬಂದಿದ್ದು, ವಿಷಯ ತಿಳಿದ ತಕ್ಷಣವೇ ಯುಮುನಾಪುರದ ಪೊಲೀಸ್​ ವರಿಷ್ಠಾಧಿಕಾರಿ ದೀಪೇಂದ್ರನಾಥ್​ ಚೌಧರಿ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಯುವಕ ತನ್ನ ಸ್ನೇಹಿತನೊಂದಿಗೆ ಗೆಳತಿಯನ್ನು ಭೇಟಿ ಮಾಡಲು ಆಕೆಯ ಊರಿಗೆ ತೆರಳಿದಾಗ ಇಬ್ಬರನ್ನೂ ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ಈ ವೇಳೆ ಮಗನ ರಕ್ಷಣೆಗೆ ಬಂದ ತಂದೆಯನ್ನು ಹಿಡಿದು ಇಬ್ಬರನ್ನೂ ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಅಲ್ಲದೆ, ಇಬ್ಬರಿಂದ ಬಸ್ಕಿ ಹೊಡೆಸಿ ಹಿಂಸಿಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *