ದೇವದುರ್ಗ: ಮೊಬೈಲ್, ಟಿವಿ, ಜಾಲತಾಣದ ಹಿಂದೆ ಬಿದ್ದಿರುವ ಯುವಜನತೆ, ಸಾಹಿತ್ಯದಿಂದ ದೂರು ಉಳಿದಿದ್ದಾರೆ. ಅಂಥವರನ್ನು ಸಾಹಿತ್ಯದ ಕಡೆ ಸೆಳೆಯಲು ಕಸಾಪ ಶ್ರಮಿಸಬೇಕು ಎಂದು ಸರ್ಕಾರಿ ಅಭಿಯೋಜಕ ಕೆ.ಗೋಪಾಲರಾವ್ ಹೇಳಿದರು.
ಇದನ್ನೂ ಓದಿ: ಲೇಖಕಿ ಭುವನೇಶ್ವರಿ ಹೆಗಡೆ ಅವರಿಗೆ ದಕ ಸಾಹಿತ್ಯ ಸಮ್ಮೇಳನದ ಆಹ್ವಾನ
ಪಟ್ಟಣದಲ್ಲಿ ಸುವರ್ಣ ಕರ್ನಾಟಕ ಸಂಭ್ರಮದ ಸವಿನೆನಪಿಗಾಗಿ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ದತ್ತಿ ದಾನಿಗಳಿಗೆ ಸನ್ಮಾನ ಸಮಾರಂಭದಲ್ಲಿ ಗುರುವಾರ ಮಾತನಾಡಿದರು. ಶಾಲಾ ಕಾಲೇಜು ಹಂತದಲ್ಲಿ ಅತಿಹೆಚ್ಚು ಸಾಹಿತ್ಯ ಕಾರ್ಯಕ್ರಮ, ಗೋಷ್ಠಿ, ಉಪನ್ಯಾಸಗಳನ್ನು ಆಯೋಜಿಸಬೇಕು.
ಆ ಮೂಲಕ ಯುವಕರನ್ನು ಸಾಹಿತ್ಯದ ಕಡೆ ಸೆಳೆಯಬೇಕಿದೆ. ಸಾಹಿತ್ಯ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಜತೆಗೆ ಸಭ್ಯ ಸಮಾಜ ನಿರ್ಮಾಣ ಮಾಡಲಿದೆ. ಈ ಹಿನ್ನೆಲೆಯಲ್ಲಿ ದತ್ತಿ ಉಪನ್ಯಾಸ, ಗೋಷ್ಠಿಗಳು ಹೆಚ್ಚಾಗಿ ನಡೆಯಬೇಕು ಎಂದರು. ಹಿರಿಯ ವಕೀಲ ದಿ.ಹನುಮಂತ ರಾವ್ ಖಾನಾಪುರ ಸ್ಮರಣಾರ್ಥವಾಗಿ ಅವರ ಮಗ ಕೆ.ಗೋಪಾಲ್‌ರಾವ್ ದತ್ತಿಗಾಗಿ 25ಸಾವಿರ ರೂ. ಚೆಕ್ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗಪ್ಪ ಊರಪ್ಯಾಟಿ, ಪ್ರಮುಖರಾದ ವಿಜಯ್, ಕೆ.ರಾಘವೇಂದ್ರ ರಾವ್, ಶಾಮ್ ಖಾನಾಪುರ, ವಿಮಲಾರತ್ನ, ವಿಜಯಲಕ್ಷ್ಮೀ, ಆಕಾಶ್ ಇತರರಿದ್ದರು.