ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸಿ

ಬೈಲಹೊಂಗಲ: ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸುವುದು ಅವಶ್ಯಕವಾಗಿದೆ ಎಂದು ಖಾನಾಪುರದ ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಶೇಖರ ತಾಬೋಜಿ ಹೇಳಿದ್ದಾರೆ.

ಪಟ್ಟಣದ ಹೊಸೂರ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ವಿಭಾಗದ ವಿಶೇಷ ಉಪನ್ಯಾಸ ಕಾರ್ಯಕ್ರಮ ಮತ್ತು ಇತಿಹಾಸ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಚಾರ್ಯ ಆರ್.ಎಸ್.ಮರಿಗೌಡರ ಮಾತನಾಡಿ, ಪ್ರತಿ ವಿಷಯಕ್ಕೂ ಇತಿಹಾಸವಿದೆ. ಇತಿಹಾಸದ ಆಳ ಅಪಾರವಾದದ್ದು.

ಆಧುನಿಕ ಯುಗದಲ್ಲಿ ಇತಿಹಾಸಿಕ ಸ್ಥಳಗಳಿಗೆ ಭೇಟಿ ಕೊಡುವುದು ಅವಶ್ಯಕವಾಗಿದೆ ಎಂದರು. ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ.ಶಿವಲೀಲಾ ಮುಕುಂದ ಇತರರು ಇದ್ದರು. ಪ್ರೊ. ಪ್ರಸನ್ನಸಿಂಗ್ ಹಜೇರಿ ಪರಿಚಯಿಸಿದರು. ಪೂರ್ಣಿಮಾ ಹೂಗಾರ ಸ್ವಾಗತಿಸಿದರು. ಹೊಂಗಲ ನಿರೂಪಿಸಿದರು. ವಿಜಯಲಕ್ಷ್ಮೀ ಪಾಟೀಲ ವಂದಿಸಿದರು.