ಸಿನಿಮಾ

ನದಿಗೆ ಬಿದ್ದಾಗ ರಕ್ಷಣೆಗೆ ಹಿಡಿದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತ್ಯು

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್‌ನ ಕುಮಾರಧಾರಾ ನದಿ ತೀರದಲ್ಲಿ ನದಿಗೆ ಅಳವಡಿಸಲಾದ ಪಂಪ್‌ನ ವಿದ್ಯುತ್ ತಂತಿ ಸ್ಪರ್ಶಿಸಿ ದ್ವಿತೀಯ ಪಿಯುಸಿ ಉತ್ತೀರ್ಣನಾಗಿದ್ದ ಶರೀಪುದ್ದೀನ್(19) ಮೃತಪಟ್ಟಿದ್ದಾನೆ.

ಭಾನುವಾರ ಸಾಯಂಕಾಲ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್‌ನ ಕುಮಾರಧಾರಾ ನದಿ ಕಿನಾರೆ ಬಳಿ ಅಳವಡಿಸಲಾದ ಪಂಪಿನ ವಿದ್ಯುತ್ ಸ್ಪರ್ಶವಾಗಿದೆ. ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ನದಿ ದಡಕ್ಕೆ ಹೋಗಿದ್ದ ವೇಳೆ ನೀರಿಗೆ ಜಾರಿದ ಶರೀಪುದ್ದೀನ್ ರಕ್ಷಣೆಗಾಗಿ ಕೈಗೆ ಸಿಕ್ಕಿದ್ದ ಪಂಪ್‌ಗೆ ಅಳವಡಿಸಲಾದ ವಿದ್ಯುತ್ ತಂತಿಯನ್ನೇ ಹಿಡಿದಿದ್ದು, ಈ ಸಂದರ್ಭ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ. ಪೊಲೀಸರಿಂದ ತನಿಖೆ ನಡೆಯುತ್ತಿದೆ.

ಮೃತರ ಮಾವ ಹಿರೇಬಂಡಾಡಿ ಗ್ರಾಮದ ಪೆರಾಬೆ ನಿವಾಸಿ ಬಿ. ಹಮ್ಮಬ್ಬ ಎಂಬುವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

Latest Posts

ಲೈಫ್‌ಸ್ಟೈಲ್