ಯಲಬುರ್ಗಾ: ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದು ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿಎಂ ಈಶ್ವರ ಅಟಮಾಳಗಿ ಹೇಳಿದರು.
ತಾಲೂಕಿನ ತಲ್ಲೂರು ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೋತ್ಸವ ಅಂಗವಾಗಿ ಕಾಶಿ ವಿಶ್ವನಾಥ ಕ್ರಿಕೆಟ್ ಕ್ಲಬ್‌ನಿಂದ ಮಂಗಳವಾರ ಆಯೋಜಿಸದ್ದ ಟಿಪಿಎಲ್ ಸೀಸನ್-2 ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ, ಹಬ್ಬ ಹರಿದಿನಗಳ ಅಂಗವಾಗಿ ಕ್ರೀಡೆಗಳನ್ನು ಆಯೋಜಿಸುವುದರಿಂದ ಸಾಮಾಜಿಕ ಸಾಮರಸ್ಯ ಮೂಡಲಿದೆ. ಯುವಕರು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ದೈಹಿಕ ಸದೃಢತೆಗೆ ಒತ್ತು ಕೊಡಬೇಕು. ಕ್ರೀಡೆಯಲ್ಲಿ ಸೋಲು ಗೆಲುವನ್ನು ಲೆಕ್ಕಿಸದೇ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಶರಣಪ್ಪ ಕೊಪ್ಪದ, ತಾಪಂ ಮಾಜಿ ಸದಸ್ಯ ಓಬಳೆಪ್ಪ ಕುಲಕರ್ಣಿ, ಪ್ರಮುಖರಾದ ಅಂದಾನಯ್ಯ ಹಿರೇಮಠ, ತಿರುಪತಿ ಬಸರಗಿಡದ, ಶರಣಪ್ಪ ಪೊಲೀಸ್ ಪಾಟೀಲ್, ಶರಣಪ್ಪ ತೋಟದ, ನಾಗರಾಜ ತಲ್ಲೂರು, ಓಬಳೆಪ್ಪ ಶ.ಕುಲಕರ್ಣಿ, ಫಕೀರಪ್ಪ ಅಡವಿಗೌಡ್ರ, ಜಗದೀಶ ಪೊಲೀಸ್ ಪಾಟೀಲ್, ಪರಶುರಾಮಗೌಡ ಪಾಟೀಲ್, ದೇವಪ್ಪ ಅಡಿವಿಗೌಡ್ರ ಇತರರಿದ್ದರು.