ನಿಮ್ಮ ಸೌಹಾರ್ದ ನಡೆ ನಮ್ಮ ಜನರಿಗೆ ನೀಡಿದ ‘ಒಂದು ಕಪ್​ ಸಂತೋಷ’: ಪಾಕ್​ ಪ್ರಧಾನಿ ಕೊಂಡಾಡಿದ ಸಿಧು

ನವದೆಹಲಿ: ತಮ್ಮ ವಶದಲ್ಲಿರುವ ಭಾರತೀಯ ಸೇನೆಯ ವಿಂಗ್​ ಕಮಾಂಡರ್​ ಅಭಿನಂದನ್​ ಅವರನ್ನು ನಾಳೆ ಬಿಡುಗಡೆ ಮಾಡುವುದಾಗಿ ತಿಳಿಸಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಅವರ ಸೌಹಾರ್ದ ನಡೆಯನ್ನು ಕಾಂಗ್ರೆಸ್​ ಮುಖಂಡ ಹಾಗೂ ಪಂಜಾಬ್​ ಸಚಿವ ನವಜೋತ್​ ಸಿಂಗ್​ ಸಿಧು ಅವರು ಕೊಂಡಾಡಿದ್ದಾರೆ.

ತಮ್ಮ ಟ್ವೀಟ್​ ಮೂಲಕ ಪಾಕ್​ ಪ್ರಧಾನಿಗೆ ಮೆಚ್ಚುಗೆ ಸಂದೇಶ ರವಾನಿಸಿರುವ ಸಿಧು, ಪ್ರತಿ ಉತ್ತಮವಾದ ಕೆಲಸದಿಂದ ತನ್ನಷ್ಟಕ್ಕೆ ತಾನೇ ಒಳ್ಳೆಯ ದಾರಿ ತೆರೆದುಕೊಳ್ಳುತ್ತದೆ. ನಿಮ್ಮ ಸೌಹಾರ್ದ ನಡೆಯು ನಮ್ಮ ದೇಶದ ಕೋಟ್ಯಂತರ ಜನರಿಗೆ ನೀಡಿದ ಒಂದು ಕಪ್​ನ ಸಂತೋಷವಾಗಿದೆ.​ ಅಭಿನಂದನ್ ಪಾಲಕರು ಹಾಗೂ ಅವರ ಪ್ರೀತಿಪಾತ್ರರಿಗಿಂತ ಹೆಚ್ಚಿನ ಸಂತೋಷ ನನಗಾಗಿದೆ​ ಹೇಳಿದ್ದಾರೆ.

ಈ ಮೊದಲು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಮಾತನಾಡಿದ್ದ ಸಿಧು, ಇಡೀ ಪಾಕ್​ನನ್ನು ದೂಷಿಸಬೇಡಿ ಎಂದು ಹೇಳಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅವರ ಬೆನ್ನಿಗೆ ನಿಂತು ಈ ವಿಚಾರದಲ್ಲಿ ಶಾಂತಿ ಮಾತುಕತೆ ನಡೆಸಿದರೆ ಉತ್ತಮ ಎಂದು ಹೇಳಿದ್ದರು. (ಏಜೆನ್ಸೀಸ್​)