ಚಂದ್ರ ಗ್ರಹಣಕ್ಕಿದೆ ಸಂಗಾತಿಯೊಡನೆ ಬಿಕ್ಕಟ್ಟು ಸೃಷ್ಟಿಸುವ ಶಕ್ತಿ: ಗ್ರಹಣ ಪ್ರಭಾವದಿಂದ ತಪ್ಪಿಸಿಕೊಳ್ಳಲು ಈ ರಾಶಿಯವರು ಹೀಗೆ ಮಾಡಿ…

ಕೇತುಗ್ರಸ್ತ (ಸರ್ಪದ ಬಾಲದಿಂದ ಆಕ್ರಮಣಕ್ಕೊಳಗಾದ) ಚಂದ್ರಗ್ರಹಣದ ಫಲ ಗುರುತರವಾಗಿ ಉತ್ತರಾಷಾಢ ನಕ್ಷತ್ರದವರ ಜಾತಕದ ಒಟ್ಟಾರೆ ವಿಶ್ಲೇಷಣೆಯ ಮೇಲೇ ಗ್ರಹಿಸಬೇಕು. ಇತರ ನಕ್ಷತ್ರದವರ ಫಲಾಫಲ ಸೂರ್ಯ, ಚಂದ್ರ ಹಾಗೂ ಇತರ ಗ್ರಹಗಳ ಗೋಚಾರ(ಸದ್ಯದ) ಫಲ ರಾಹುಕೇತುಗಳ ನೆರಳಡಿಯಲ್ಲಿ ಹೇಗೆ ಎಂಬುದನ್ನು ವಿಶ್ಲೇಷಿಸಿ ಹೇಳಬೇಕು. ಗ್ರಹಣ ನೆರವೇರಿರುವಂತೆಯೇ ಸೂರ್ಯ, ಚಂದ್ರರು ಕ್ರಮವಾಗಿ ಇದ್ದಿರುವ ಮಿಥುನ, ಧನುರ್ ರಾಶಿಯನ್ನು ಬಿಟ್ಟು ಕಟಕ, ಮಕರ ರಾಶಿಯನ್ನು ಪ್ರವೇಶಿಸುತ್ತಿರುವ ಚಮತ್ಕಾರ ಈ ಗ್ರಹಣದ ವಿಶೇಷ!

ಮೇಷ: ಅವಸರ ಮತ್ತು ಹಟದ ಸ್ವಭಾವದಿಂದ ಬರಲಿರುವ, ಪ್ರಾಪ್ತಿಗೆ ಸಾಧ್ಯವಿರುವ ವಿಚಾರಗಳನ್ನು ವಿಳಂಬಕ್ಕೆ ದೂಡಿಕೊಳ್ಳುವ ತಪ್ಪು ಮಾಡಿಕೊಳ್ಳು ತ್ತಾರೆ. ಬೌದ್ಧಿಕವಾದ ಸೂಕ್ಷ್ಮತೆಯನ್ನು ಗಲಿಬಿಲಿ ಇಲ್ಲದೆ ಪ್ರದರ್ಶಿಸಲು ಮುಂದಾಗಿ.

ವೃಷಭ: ರವಿ ಮತ್ತು ರಾಹುಗಳ ನಡುವೆ ದುಃಸ್ಥಾನದಲ್ಲಿ ಸ್ಥಿತನಾದ ಶುಕ್ರನಿಂದ ಒಳ್ಳೆಯದಾಗಿ ಇರಬೇಕಾದ ಆರೋಗ್ಯ ಬಾಧೆಗೊಳಗಾದೀತು. ತೀವ್ರವಾದ ಒತ್ತಡದಲ್ಲಿ ಕೆಲಸ ಕಾರ್ಯ ನಡೆಸುವ ವಿಚಾರ ಆಗದಿರಲಿ.

ಮಿಥುನ: ಬಾಳಸಂಗಾತಿಯೊಡನೆ ಕೆಲವು ಬಿಕ್ಕಟ್ಟುಗಳು, ನೀವೇ ನಿಮ್ಮ ಮಾತೇ ಎಂಬ ಹಠ ಬೇಡ. ಹೊಯ್ದಾಟದ ಮನಸ್ಸಿನೊಂದಿಗೆ ದೈನಂದಿನ ಕೆಲಸ ನಡೆಸಿ. ನಿಮಗೆ ಅಚ್ಚರಿಯಾಗುವ ನಿಶ್ಚಿತ ಗುರಿ ಲಭ್ಯವಾಗುತ್ತದೆ.

ಕರ್ಕ: ವಾಹನಗಳ ಬಗೆಗಿನ ಮೋಹ, ಹೊಸ ಸೌಧಗಳು, ಆಸ್ತಿ, ಭೂಮಿ ವಿಚಾರ ಬಿಕ್ಕಟ್ಟು ತರಬಹುದು. ನಿಮ್ಮದು ನಿಮ್ಮ ಹಾಸಿಗೆಯಷ್ಟೇ ಕಾಲು ಚಾಚುವ ಚೌಕಟ್ಟಿಗೆ ಬದ್ಧಗೊಳ್ಳುವ ಈ ಸಂವಿಧಾನಕ್ಕೆ ಹೊಂದಿಕೊಂಡರೆ ಕ್ಷೇಮ.

ಸಿಂಹ: ಮಕ್ಕಳ ಬಗೆಗೆ ಕಾಳಜಿ ವಹಿಸಿ. ಉನ್ನತ ವ್ಯಾಸಂಗಕ್ಕಾಗಿನ ನಿಮ್ಮ ಸಲಹೆ ಸೂಚನೆಗಳು ಸರಿ. ಜತೆಗೆ ಒಂದು ಕನಿಷ್ಠ ಶಿಸ್ತನ್ನು ಮೀರದ (ಹಳಿಗಳ ಮೇಲಿನ ಸಮತೋಲನ ಸಾಧಿಸುವ ರೈಲಿನಂತೆ) ತಿಳಿವಳಿಕೆ ಕೊಡಿ.

ಕನ್ಯಾ: ನಿಮ್ಮ ಕಟ್ಟಬೇಕಾದ ಮನೆಯ ವಿಚಾರದಲ್ಲಿ, ಪುನರ್ ನಿರ್ವಣದ ವಿಚಾರದಲ್ಲಿ ಹೆಚ್ಚಿನ ಎಚ್ಚರ ಅಗತ್ಯ. ಬಜೆಟ್ ನಿರ್ದಿಷ್ಟವಾಗಿ ಇಷ್ಟು ಎಂಬುದನ್ನು ಮೀರದಂತೆ ವರ್ತಮಾನವನ್ನು ರೂಪಿಸಿಕೊಳ್ಳಿ.

ತುಲಾ: ಸ್ಥೈರ್ಯ, ಧೈರ್ಯಗಳನ್ನು ಪ್ರಧಾನವಾಗಿ ಕಾಪಾಡಿಕೊಳ್ಳಬೇಕಾದ ಆದ್ಯತೆಯೊಂದಿಗೆ ಸಂಭಾಳಿಸಿಕೊಳ್ಳಿ. ಖರ್ಚುವೆಚ್ಚಗಳ ಸ್ಥಿತಿಗತಿಗೆ ನಿಮ್ಮದೇ ಆದ ನಿರ್ದಿಷ್ಟ ನಿಯಮ ಇರಲಿ. ಆದಾಯಕ್ಕಿಂತ ಖರ್ಚು ಮಿಗಿಲಾಗಬಾರದು.

ವೃಶ್ಚಿಕ: ಮಾತು, ಎಚ್ಚರದೊಂದಿಗಿನ ನಿಮ್ಮ ಶಕ್ತಿಯಾಗಲಿ. ಪರರ ಪೀಡೆ ಎಚ್ಚರವನ್ನು ತಪ್ಪಿಸಿ ಬಿಕ್ಕಟ್ಟಿಗೆ ಸಿಲುಕಿಸುವ ರೀತಿಯಲ್ಲಿ ನಿಮ್ಮ ಮೇಲೆ ಎರಗಬಹುದಾಗಿದೆ. ನಿಯಂತ್ರಿಸುವ ಶಕ್ತಿ ಇರುವುದರಿಂದ ಉಪಯೋಗಿಸಿಕೊಳ್ಳಿ.

ಧನು: ಆರ್ಥಿಕ ಶೈಥಿಲ್ಯ ಯೋಚಿಸಿರದ ಕಾರಣದಿಂದಾಗಿ ವರ್ತಮಾನದ ವಿಷಯವಾಗಬಹುದು. ಸಾಲ ಪಡೆದಿರಾದರೆ ಉದ್ದೇಶಿತ ಕಾರಣಕ್ಕಾಗಿಯೇ ಸಾಲ ಉಪಯೋಗಿಸಲ್ಪಡುವ ವೈಜ್ಞಾನಿಕತೆ ಅಗತ್ಯದ ವಿಚಾರ.

ಮಕರ: ವರ್ಚಸ್ಸು, ಹೊರಬೇಕಾದ ಹೊಣೆಗಿಂತ ಹೊತ್ತಿರುವ ಹೊಣೆ ನಿಭಾಯಿಸುವುದರ ಜಾಣತನದಲ್ಲಿ ಧನ್ಯತೆ ಪಡೆಯಬೇಕು. ಹೊಸ ಅಧಿಕಾರ, ಜವಾಬ್ದಾರಿ ನಿರೀಕ್ಷೆಯಾಗಿದ್ದರೆ ಪ್ರಯತ್ನದ ಬೆವರು ಅನಿವಾರ್ಯ.

ಕುಂಭ: ಪ್ರಾಪ್ತಿಯಾಗಲೇ ಬೇಕಾದ ಸಂಗತಿಗಳು ದೂರವಾಗಿ ನಿಲ್ಲುವ ಅಚ್ಚರಿಗೆ ದಾರಿ ನಿರ್ವಣ- ಎಲ್ಲರನ್ನೂ ನಂಬಿ. ಆದರೆ ನಂಬಿದವರೂ ಕೈಕೊಡಬಹುದು ಎಂದು ತಿಳಿಯದೆ ಹೋದೆ ಎಂಬ ಮುಗ್ಧತೆ ಬೇಡ.

ಮೀನ: ಕೆಲಸದ ಸ್ಥಳದಲ್ಲಿ ವಿಷದ ನಾಗರ ಹಾವುಗಳಂಥ ವ್ಯಕ್ತಿಗಳು ಇದ್ದಕ್ಕಿದ್ದಂತೆ ಅವತರಿಸುತ್ತಾರೆ. ನಿಮ್ಮ ಜಾಣತನ ಸಾಕಾಗದು ಎಂಬುದು ತಿಳಿಯುವಾಗ ವಿಳಂಬವಾಗುತ್ತದೆ. ಅಗತ್ಯವಾದ ಎಚ್ಚರಿಕೆ ಇರಲಿ.

Leave a Reply

Your email address will not be published. Required fields are marked *