ದೀದಿ, ನಿಮ್ಮ ಪಕ್ಷದ 40 ಶಾಸಕರು ಇಂದಿಗೂ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಎಚ್ಚರಿಕೆ ನೀಡಿದ ನರೇಂದ್ರ ಮೋದಿ

ಕೋಲ್ಕತಾ: ಸದಾ ನರೇಂದ್ರ ಮೋದಿಯವರ ವಿರುದ್ಧ ಕಿಡಿಕಾರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಇಂದು ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ ಸೇರಾಂಪುರದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ದೀದೀ ನಿಮ್ಮ ಪಕ್ಷದ 40 ಶಾಸಕರು ಇವತ್ತಿಗೂ ಕೂಡ ಬಿಜೆಪಿಯೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಚುನಾವಣೆ ಮುಗಿದ ಬಳಿಕ ಶೀಘ್ರದಲ್ಲೇ ನಿಮ್ಮ ನಿರ್ಗಮನವಾಗಲಿದೆ ನೋಡುತ್ತಿರಿ ಎಂದು ಹೇಳಿದ್ದಾರೆ.

ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ. ಅಂದು ಪ್ರತಿಯೊಂದು ಕ್ಷೇತ್ರದಲ್ಲೂ ಕಮಲ ಅರಳಲಿದೆ. ನಿಮ್ಮ ಪಕ್ಷದ ಶಾಸಕರು ನಿಮ್ಮನ್ನು ತೊರೆಯುತ್ತಾರೆ. ಇವತ್ತಿಗೂ ನನ್ನೊಂದಿಗೆ ನಿಮ್ಮ ಪಕ್ಷದ 40 ಎಂಎಲ್​ಎ ಗಳು ಸಂಪರ್ಕದಲ್ಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಇಂದಿಗೂ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಚುನಾವಣೆ ನಂತರ ನಿಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ತುಂಬ ಕಷ್ಟವಿದೆ ಎಂದು ಮೋದಿ ಹೇಳಿದ್ದಾರೆ.