ಹದಿಹರೆಯ ಕುದಿಹೃದಯ

‘ಗೊತ್ತಾಯ್ತಲ್ಲ, ಹೇಳಿದಂತೆ ಕೇಳ್ಬೇಕು’! ಇದು ಖಂಡಿತವಾಗಿಯೂ ಅಪ್ಪ-ಅಮ್ಮನ ದನಿ. ಮಕ್ಕಳು ನಿಶ್ಚಿತವಾಗಿ ಹದಿಹರೆಯದವರು. ಅವರು ಇವರಿಗೆ ಅರ್ಥವಾಗುತ್ತಿಲ್ಲ. ಇವರು ಅವರಿಗೆ ಅರ್ಥವಾಗುತ್ತಿಲ್ಲ! ನಾವು ಕೂಡ ಈ ಹಂತವನ್ನು ಒಮ್ಮೆ ದಾಟಿದ್ದೆವಲ್ಲ! ಹಿಂತಿರುಗಿ ನೋಡಿದರೆ, ನಮ್ಮ ಅಪ್ಪ-ಅಮ್ಮನಿಗೂ ಇದೇ ಅನುಭವವಾಗಿತ್ತಾ? ಗೊತ್ತಿಲ್ಲ. ಆದರೆ, ಅವರು ಈಗ ನಾವು ತೋರಿಸುತ್ತಿರುವ ‘ತೀವ್ರ ಪ್ರತಿಕ್ರಿಯೆ’ ನೀಡಿರಲಿಲ್ಲ!

|ಡಾ. ಭಾರತಿ ಕುಲಶೇಖರ, ಆಪ್ತಸಮಾಲೋಚಕಿ, ಮೈಸೂರು

ಚೆಂದದ ಮಗು ಮಡಿಲಲ್ಲಿ ಅರಳಿ ನಗುವಾಗ, ಬೆಳೆದು ನಿಂತಾಗ, ಲೋಕ ಗೆದ್ದ ಹಮ್ಮು. ಯಾರೂ ಮಾಡದ ಸಾಧನೆಯೊಂದು ಕೈಗೂಡಿದಂತೆ. ಈ ಎಲ್ಲ ಕ್ಷಣಗಳನ್ನೂ ಸವಿದು, ಕಣ್ಣರಳಿಸಿ ನೋಡುತ್ತಿರುವಾಗಲೇ, ಮಕ್ಕಳು ನಮಗೆ ಸವಾಲೊಡ್ಡಿ ನಿಲ್ಲುತ್ತಾರೆ. ನಿನ್ನೆ ಬೆಳಗಿನವರೆಗೂ, ದೇವರಂತಿದ್ದ ಮಗು ‘ರಕ್ಕಸತನ’ ತೋರಿಸಲಾರಂಭಿಸುತ್ತದೆ! ನೋಡನೋಡುತ್ತಿದ್ದಂತೆಯೇ ಜಟಿಲವಾಗುತ್ತದೆ. ಎಲ್ಲ ಮೌಲ್ಯಗಳನ್ನೂ ಧಿಕ್ಕರಿಸುತ್ತದೆ. ಜತೆಗಾರರ ಮಾತುಗಳೇ ವೇದವಾಕ್ಯ. ಸರಿತಪ್ಪುಗಳ ಲೆಕ್ಕಾಚಾರ ಮಾಡುವಂತಿಲ್ಲ. ಯಾವ ಅಡುಗೆ ಮಾಡಿ ಉಣಬಡಿಸಿದರೂ ರುಚಿಸದು. ಮುಖ ಉಬ್ಬಿಸಿ ನಡೆಯುತ್ತದೆ, ಧಡಾರನೆ ಬಾಗಿಲು ಮುಚ್ಚಿ ಒಳಗೇ ಉಳಿಯುತ್ತದೆ, ಮಾತಿಗೆ ಸಿಕ್ಕರೂ ಸಂವಹನಕ್ಕೆ ಸಿದ್ಧವಿಲ್ಲ. ಪ್ರೀತಿ ಬೇಕಿಲ್ಲ. ಕೊನೆಗೆ ಅಪ್ಪ-ಅಮ್ಮನನ್ನೂ ಪರಮ ಶತ್ರುಗಳಂತೆ ಕಾಣಬಹುದು. ಕಣ್ಣಂಚಿನ ನೀರಿನ ಜತೆಯಲ್ಲಿಯೇ ಅಪ್ಪ-ಅಮ್ಮ ಪರಿಹಾರ ಹುಡುಕಲು ಹೊರಡುತ್ತಾರೆ!

ಹೌದು, 10ರಲ್ಲಿ 7 ಮಕ್ಕಳು ಇಂಥ ವರ್ತನೆ ತೋರಿಸುತ್ತಾರೆ. ಇಷ್ಟಕ್ಕೂ ನಾವು ಮಕ್ಕಳನ್ನು ಶೂನ್ಯದಲ್ಲಿ ಸೃಷ್ಟಿಸಿಲ್ಲ. ನಮ್ಮದೇ ರಕ್ತಮಾಂಸದ ತುಣುಕುಗಳು. ಆತ್ಮದ ತಂತುಗಳು. ನಮ್ಮದೇ ವಿಚಾರಧಾರೆಯ ಪ್ರತಿಫಲನಗಳು. ಹೀಗಿದ್ದೂ, ನಮಗೆ ಹಿಡಿಸದ್ದು, ಅವರಲ್ಲಿ ತುಂಬಿಕೊಂಡಿದ್ದು ಹೇಗೆ? ಇದರರ್ಥ ನಮ್ಮೊಳಗೆ, ನಮಗೇ ಸರಿ ಹೊಂದದ್ದನ್ನು ನಾವೂ ಸಾಕಷ್ಟು ತುಂಬಿಸಿಕೊಂಡಿದ್ದೇವೆ. ಅಷ್ಟೇ ಅಲ್ಲ, ಅದನ್ನು ಯಥಾವತ್ತಾಗಿ ನಮ್ಮ ಮಕ್ಕಳಿಗೆ ಹಂಚಿಕೊಟ್ಟಿದ್ದೇವೆ. ಹೀಗಾಗಿ, ಅಲ್ಲಿಗೆ ಬದಲಾವಣೆಯ ಗಾಳಿಯನ್ನು ನಾವೇ ಬೀಸಬೇಕು. ಚೌಕಟ್ಟುಗಳನ್ನು ಬದಲಿಸಬೇಕು. ಏಕೆಂದರೆ, ಅಲ್ಲಿ ನಮ್ಮ ಮಕ್ಕಳನ್ನು ಕೂರಿಸಲು ಆಗುತ್ತಿಲ್ಲ.

‘ನಮ್ಮ ಅಪ್ಪ-ಅಮ್ಮ ನಮ್ಮನ್ನು ಬೆಳೆಸಿದ ಹಾಗೆ ಎಂದು ಹೇಳುವ ಹಾಗೆ ಇಲ್ಲ’ ಈ ಸಿದ್ಧಾಂತ ಈಗ ಕೆಲಸ ಮಾಡುತ್ತಿಲ್ಲ. ಹಿಂದೆ ಮಕ್ಕಳನ್ನು ಹೀಗೇ ಬೆಳೆಸಬೇಕು ಅನ್ನುವ ಸಿದ್ಧಪಡಿಸಿದ ನಿಯಮಗಳಿರುತ್ತಿದ್ದವು. ತಾತ, ಅಪ್ಪನನ್ನು ಬೆಳೆಸಿದ ಹಾಗೆ, ಅಪ್ಪ ಮಗನನ್ನು ಬೆಳೆಸಿದರಾಯಿತು. ಹೆಚ್ಚು ಗೊಂದಲಗಳಿರುತ್ತಿರಲಿಲ್ಲ. ಹಠಮಾರಿತನಕ್ಕೆ, ಸೋಮಾರಿತನಕ್ಕೆ, ಅತಿ ಕೋಪಕ್ಕೆ, ಎಲ್ಲಕ್ಕೂ ಸಿದ್ಧಪಡಿಸಿದ formulaಗಳು ಇರುತ್ತಿದ್ದವು. ಕೆಲವೊಮ್ಮೆ ಒಂದು ಏಟಿನಲ್ಲಿ ಹಠ ಮುಗಿಯುತ್ತಿತ್ತು. ಕೊಂಡಾಟಗಳು ಮಿತಿಯಲ್ಲಿ್ಲುತ್ತಿದ್ದವು. ಕೇಳಿದ್ದನ್ನೆಲ್ಲ ಕೊಡಿಸುತ್ತಿರಲಿಲ್ಲ. ಎಲ್ಲಕ್ಕೂ ಒಂದು ಅನುಶಾಸನ. ಹೆಚ್ಚು-ಕಡಿಮೆ ಎಲ್ಲ ತಂದೆ ತಾಯಂದಿರೂ ಇದನ್ನು ಪಾಲಿಸುತ್ತಿದ್ದರು. ಆದರೆ, ಈಗ ಹಾಗಲ್ಲ. ಪ್ರತಿ ಮಗುವಿಗೂ ಪ್ರತ್ಯೇಕವಾಗಿ, ಸಿದ್ಧಪಡಿಸಿದ ನಿಯಮಾವಳಿಗಳು ಬೇಕು.

ನಮ್ಮಲ್ಲಿ ಕಾಣಿಸಿಕೊಳ್ಳುತ್ತಿದ್ದ ಆಕರ್ಷಣೆ, ವಿಕರ್ಷಣೆ ಯಾವುದನ್ನೂ ಆಗ ಭೂತಗನ್ನಡಿಯಲ್ಲಿ ನೋಡುತ್ತಿರಲಿಲ್ಲ. ಹೆಚ್ಚು ಓದದೆ, ಪರಮ ಜ್ಞಾನಿಗಳಾಗದೆ, ಯಾವುದಕ್ಕೆ ಎಷ್ಟು ಮಹತ್ವ ಕೊಡಬೇಕು ಎನ್ನುವ ಅಂದಾಜು ನಮ್ಮ ಪಾಲಕರಿಗಿತ್ತು. ಅಂತೂ, ಬದುಕಿಗೆ ಬೇಕಾದ ಸಾಕಷ್ಟು ಸ್ಕಿಲ್​ಗಳು ಹದಿಹರೆಯ ದಾಟುವುದರ ಒಳಗೆ ಕೈ ವಶವಾಗುತ್ತಿದ್ದವು. ಸವಾಲುಗಳನ್ನೆದುರಿಸುವಾಗ ಅಪ್ಪ-ಅಮ್ಮನ ನೆನಪಾಗುತ್ತಿತ್ತು. ಅಂದು ಪ್ರತಿಭಟಿಸಬೇಕು ಅಂದುಕೊಂಡದ್ದೆಲ್ಲ ಆಮೇಲೆ ಸರಿ ಅನ್ನಿಸತೊಡಗುತ್ತಿತ್ತು. ಸಾಕಷ್ಟು ಆತ್ಮವಿಶ್ವಾಸ ಜತೆಗೂಡಿರುತ್ತಿತ್ತು. ಅತೃಪ್ತಿ, ಅಸಮಾಧಾನಗಳು ಬೆರಳೆಣಿಕೆಯಷ್ಟು ಮಾತ್ರ. ಅದೇ ಬದುಕಾಗಿರುತ್ತಿರಲಿಲ್ಲ. ಎಂದೂ ತಲುಪದ ‘ಗುರಿ’ಯ ಚಿತ್ರ ಕಣ್ಣ ಮುಂದಿರುತ್ತಿರಲಿಲ್ಲ. ಅದರತ್ತ ’ಕಣ್ಣುಮುಚ್ಚಿ’ ಓಡುವ ಸ್ಪರ್ಧೆಯೂ ಇರುತ್ತಿರಲಿಲ್ಲ. ಒಟ್ಟಾರೆ, ಒಂದು ಆರೋಗ್ಯವಂತ ಮನಸ್ಸು, ಹೃದಯ ಬದುಕನ್ನೆದುರಿಸಲು ಸಿದ್ಧವಾಗಿರುತ್ತಿತ್ತು.

ಈಗ ಇಂದಿನ ಪಾಲಕರನ್ನು ನೋಡೋಣ. ಮಕ್ಕಳು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಒಮ್ಮೊಮ್ಮೆ ಮಕ್ಕಳಂತಿರಬೇಕು! ಇನ್ಯಾವುದೋ ಸಂದರ್ಭಕ್ಕೆ ತಕ್ಕಂತೆ ದೊಡ್ಡವರಂತಿರಬೇಕು! ಗೊಂದಲ ನಮ್ಮಲ್ಲೇ ಇದೆ. ಇಲ್ಲ ಅಂದರೇನು? ಸೋಲಿನ ರುಚಿ ಹೇಗಿರುತ್ತದೆ? ಸೋಲೂ ಕೂಡ ಗೆಲುವಿನ ಒಂದು ಭಾಗವೇ ಆಗಿದೆ. ಸೋಲಿನ ಹಾದಿಯಲ್ಲಿಯೇ ಗೆಲುವು ನಮ್ಮನ್ನು ಭೇಟಿಯಾಗುತ್ತದೆ. ಕೈಕುಲುಕುತ್ತದೆ. ಆದರೆ ಇದೇ ಗೆಲುವು ನಮ್ಮ ಕೈಹಿಡಿದು ಪ್ರಯಾಣ ಮುಂದುವರಿಸಬೇಕು ಎನ್ನುವ ಹಠ ಬೇಡ. ಏಕೆಂದರೆ, ಈ ಹಾದಿಯಲ್ಲಿ ನಾವು ಮಾತ್ರ ಪಯಣಿಸುತ್ತಿಲ್ಲ!. ಅದೇ ಗೆಲುವು ಮತ್ತಾರದೋ ಕೈಯನ್ನು ಹಿಡಿಯಬೇಕಲ್ಲ? ‘ಬೇಕು’ ಅಂದದ್ದೆಲ್ಲ ಸಿಗಲೇಬೇಕು ಎನ್ನುವ ನಿಯಮವೇನೂ ಇಲ್ಲ.

ಹಾಗಾದರೆ, ಸಿಗದೇ ಇರುವುದರ ಬಗ್ಗೆ ಹೇಗೆ ಯೋಚಿಸಬೇಕು? ಸಿಕ್ಕಿದ್ದನ್ನು ಹೇಗೆ ಸಂಭ್ರಮಿಸಬೇಕು? ಸೋಲಿಗೆ ಅತಿ ಮಹತ್ವ ಬೇಡ. ಗೆಲುವಿನ ‘ಕಾಯುವಿಕೆ’ ಹೇಗಿರಬೇಕು?…ಈ ಪಟ್ಟಿ ಮುಂದುವರಿಯುತ್ತಲೇ ಇರುತ್ತದೆ. ಇಂಥದ್ದನ್ನೆಲ್ಲ ಮಕ್ಕಳಿಗೆ ಉಪದೇಶದ ಮುಖಾಂತರವಲ್ಲದೆ ಸಾವಧಾನವಾಗಿ ತಿಳಿಹೇಳುವ ಅಥವಾ ಅರ್ಥೈಸುವ ತಾಳ್ಮೆ ಯಾರ ಪಾಲಕರಿಗೆ ಇದೆ? ಆದರೆ, ಅತ್ಯಗತ್ಯವಾಗಿ ಇವುಗಳನ್ನು ಮಕ್ಕಳಿಗೆ ಕಲಿಸಲೇಬೇಕು. ಅಸಲಿಗೆ ಈ ಪಾಠ ಕೆಜಿ ತರಗತಿಯಲ್ಲಿಯೇ ಶುರುವಾಗಬೇಕು. ಏಕೆಂದರೆ, ಹೋಲಿಕೆಯ ಅಬ್ಬರ ಶುರುವಾಗುವುದೂ ಅಲ್ಲಿಂದಲೆ!

ಪಾಲಕರೇನು ಮಾಡಬಹುದು?

ಇಂದು, ಮಾತಿಗೆ ಮುಂಚೆ ನಮ್ಮ ಮುಂದಿನ ಮಕ್ಕಳು ಅತಿ ವೇಗವಾಗಿ ಓಡುತ್ತಿರುವುದರ ಬಗ್ಗೆ ಮಾತ್ರ ಮಾತನಾಡುತ್ತೇವೆ. ಬದಲಾದ ನಮ್ಮ ಟಚ್ಟಛ್ಞಿಠಿಜ್ಞಿಜ ಮೌಲ್ಯಗಳೂ ಒಮ್ಮೆ ಮರುಮಾಪನಕ್ಕೆ ಒಳಗಾಗಬೇಕು. ಅಂದು ನಾವು ಹೀಗಿರಲಿಲ್ಲ ಅನ್ನುತ್ತೇವೆ. ನಮ್ಮ ಪಾಲಿನ ಬುತ್ತಿ ಬೇರೆ ಇತ್ತು ಅನ್ನುವುದನ್ನೂ ಮರೆಯುತ್ತೇವೆ. ನಾವಾದರೆ ತುಂಬ ಮಕ್ಕಳಿದ್ದೆವು, ಯಾರಿಗೂ ಈ ತರಹದ ಸೌಲಭ್ಯ-ಸವಲತ್ತುಗಳು ಸಿಕ್ಕಿರಲಿಲ್ಲ. ಇಂದು ನಾವೆಲ್ಲ ಒದಗಿಸಿದ್ದೇವೆ, ಆದರೂ ಹೀಗೇಕೆ ಎನ್ನುವ ಚಡಪಡಿಕೆ ಮಾತ್ರ ಕಡಿಮೆಯಾಗುತ್ತಿಲ್ಲ. ಅಷ್ಟೇಕೆ, ನಾವು ನಮ್ಮ ಅಪ್ಪ-ಅಮ್ಮನಿಗೆ ಮೀಸಲಿಟ್ಟ ಜಾಗ ಈಗ ನಮಗೆ ಖಂಡಿತ ಸಿಗುತ್ತಿಲ್ಲ ಅನ್ನುವ ಅತೃಪ್ತಿ ಕೂಡ. ಮೌಲ್ಯಗಳ ಪಾಠ ಮಕ್ಕಳು ಕಲಿಯುತ್ತಿಲ್ಲ ಎಂದು ದೂರುತ್ತೇವೆ. ಆದರೆ ನಮಗೆ ಕಲಿಸಲಾಗಲಿಲ್ಲ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ಯಶಸ್ಸು ಹೀಗೇ ಇರಬೇಕು ಅಥವಾ ‘ಇದು ಮಾತ್ರ’ ಎನ್ನುವುದು ಬೇಡ. ಚೆಂದದ ಮಾತು, ನಡವಳಿಕೆ, ಪ್ರೀತಿಸುವ ಮನಸ್ಸು ಎಲ್ಲವೂ ಬೆಳವಣಿಗೆಯ ಮುಖ್ಯ ಭಾಗ, ವ್ಯಕ್ತಿತ್ವದ ಮುಖ್ಯಾಂಶಗಳು ಅನ್ನುವುದು ಅವರ ಮನಸ್ಸಿಗೆ ಬರಬೇಕು. ಹೆಚ್ಚು ಅಂಕಗಳೆಂದರೆ, ಹೆಚ್ಚು ಶ್ರೇಷ್ಠರು ಅಲ್ಲ. ಇಡಿಯ ವ್ಯಕ್ತಿತ್ವ ಅಂಕದ ಮೇಲೆ ನಿರ್ಧರಿತವಾಗುವಂಥದ್ದಲ್ಲ. ಮಕ್ಕಳು ನಮ್ಮದೇ ಪ್ರತಿಬಿಂಬಗಳು. ನಮ್ಮೆಲ್ಲ ಆತಂಕ, ಅಭದ್ರತೆಗಳೂ ಅಲ್ಲಿ ಪ್ರತಿಫಲಿಸಲೇಬೇಕಲ್ಲ! ಬದುಕಿನ ಬಗ್ಗೆ ಭರವಸೆಯ ಮಾತುಗಳು ಅವರ ಕಿವಿಗೆ ತಲುಪುತ್ತಿಲ್ಲ ಅಂದರೆ ನಾವು ಆಡುತ್ತಿಲ್ಲ ಎಂದರ್ಥ. ಒತ್ತಡದ ಭೂತ, ಆತಂಕ ನೆರಳು ಸೋಕಿ ಅವರೂ ನಮ್ಮಂತೆ ಆಡತೊಡಗುತ್ತಾರೆ. ಅದು ನಮಗೆ ಬೇಕಿಲ್ಲ. ನಮ್ಮಂತೆ ‘ಆಗಬಾರದ’ ಮಕ್ಕಳನ್ನು ಬೆಳೆಸುವುದು ಕಷ್ಟವೇ! ಮೊದಲಿಗೆ ಕಾಲಧರ್ಮ, ಯುಗಧರ್ಮ ಅನ್ನುವುದು ಇರುತ್ತಿತ್ತು. ಈಗ ಒಂದು ‘ಜಛ್ಞಿಛ್ಟಿಚಠಿಜಿಟ್ಞ ಧರ್ಮ’ ಚಾಲ್ತಿಯಲ್ಲಿದೆ. ನಮ್ಮ ಮಕ್ಕಳು ಅದರ ಹಿಂದೆ ಓಡುತ್ತಾರೆ. ನಾವೂ ಅವರ ಹಿಂದೆ ಓಡಬೇಕು. ಸಾಧ್ಯವಾದರೆ ಅವರನ್ನು ತಲುಪಿ, ಹಿಡಿಯಬೇಕು. ಹಾಗೆ ಮಾಡದಿದ್ದರೆ ನಮ್ಮ ನಡುವಿನ ಅಂತರ ಹೆಚ್ಚುತ್ತದೆ ಅಷ್ಟೇ. ಮತ್ತೆ ಅವರೇ ಹಿಂದೆ ಬಂದು ನಮ್ಮನ್ನು ಸೇರಲಿ ಅಂದುಕೊಳ್ಳುವಂತಿಲ್ಲ! ಇದು ತುಂಬ ಕಷ್ಟವಾದದ್ದೇನಲ್ಲ; ಅವರನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು. ಅವರ ಪ್ರತಿಕ್ರಿಯೆಗಳು ಯಾವ ಯೋಚನೆಯ ಜಾಡನ್ನು ಹಿಡಿದು ಬಂದಿವೆ ಎಂಬುದನ್ನು ಕಂಡುಕೊಳ್ಳಲು ಮುಂದಾಗಬೇಕು. ಅಲ್ಲಿ ಒಂದು ಅಛ್ಠ್ಝ ಚ್ಟ್ಟಜಚ್ಞ್ಚ ಇರದಂತೆ ಎಚ್ಚರ ವಹಿಸಬೇಕು. ಅವರ ಯೋಚನೆಗಳು ಹೀಗೆಯೇ ಇರಬೇಕು ಅನ್ನುವ ಹಠ ಬಿಟ್ಟು, ಹೀಗೂ ಇರಬಹುದು ಅನ್ನುವ ಸಂಧಾನಕ್ಕೆ ಬರಬೇಕು. ನಾವು ಅವರಂತಾಗಿ ಅವರನ್ನು ಅರ್ಥೈಸಿಕೊಳ್ಳಬೇಕು.

ಬದಲಾವಣೆ ನಮ್ಮಿಂದಲೇ ಶುರುವಾಗಲಿ

ಹಾಗಿದ್ದರೆ ಮಕ್ಕಳು ಬದಲಾ ಗುವ ಅಗತ್ಯವೇ ಇಲ್ಲವಾ ಎನಿಸಬಹುದು. ಅವರು ಖಂಡಿತ ಬದಲಾಗಬೇಕು. ಆದರೆ, ಹೇಗೆ ಅನ್ನುವ ಪಾಠ ನಮ್ಮಿಂದಲೇ ಶುರುವಾಗಬೇಕು. ಮಾದರಿ ಅಂದುಕೊಳ್ಳೋಣ, ಅದನ್ನು ನಾವೇ ಮಾಡಬೇಕು. ಹೊಸ ರೀತಿಯನ್ನು ನಾವು ಕಲಿಯಬೇಕು. ಅದರ ಅನುಕರಣೆ ಅವರಿಂದಾಗಬೇಕು. ಬದಲಾವಣೆ ಎಷ್ಟು ಚೆನ್ನಾಗಿದೆ ಅಂತ ಅವರಿಗೂ ಅನ್ನಿಸಬೇಕು, ಅಷ್ಟರಮಟ್ಟಿಗೆ ನಾವೂ ಕಲಿಯುವಂತಾಗಬೇಕು. ಆದರೆ, ಅವರನ್ನು ನಾವು ಮತ್ತಷ್ಟು ಗೊಂದಲಕ್ಕೆ ತಳ್ಳುತ್ತಿದ್ದೇವೆ. ನಮ್ಮ ಹೋರಾಟದ ವಿವರಣೆಗಳಿಂದ ಏನೂ ಪ್ರಯೋಜನವಿಲ್ಲ. ಅವರ ಯುದ್ಧರಂಗವೇ ಬೇರೆ. ಎದುರಿಸಬೇಕಾಗಿರುವುದು ಬೇರೆಯೇ. ಅದಕ್ಕೆ ಬೇಕಿರುವ ಈಛ್ಛಿಛ್ಞಿ್ಚ ಠಠ್ಟಿಚಠಿಛಿಜಢಗಳನ್ನೂ ಅವರೇ ಕಲಿಯಬೇಕು. ಹೆಚ್ಚೆಂದರೆ, ಪ್ರೋತ್ಸಾಹಕರ ವಾತಾವರಣವನ್ನು ಕಲ್ಪಿಸಲು ನಮ್ಮಿಂದ ಸಾಧ್ಯವಾಗಬೇಕು. ಉತ್ಸಾಹ ತುಂಬುವ ಮಾತುಗಳನ್ನಾಡಬೇಕು. ನಕಾರಾತ್ಮಕ ಭಾವನೆಗಳನ್ನು ತುಂಬಿಸಬಾರದು. ಕೊನೆಗೆ, ಟಚ್ಟಛ್ಞಿಠಿಜ್ಞಿಜ ಒಂದು ್ಛ್ಚ್ಝಠಿಚಠಿಜಿಟ್ಞ ಮಾತ್ರ ಆಗಬೇಕು. ಪರಿಹಾರದ ದಾರಿಗಳು ನೂರಿವೆ. ಹುಡುಕಲು ಮುಂದಾಗಬೇಕು, ಅಷ್ಟೆ.

ಐಕ್ಯೂ ಹೆಚ್ಚು ಇಕ್ಯೂ ಕಡಿಮೆ!

ಇಂದು ನೋಡುತ್ತಿರುವ ಹಾಗೆಯೇ ಮಕ್ಕಳಲ್ಲಿ Emotional Quotient ಇಳಿಮುಖವಾಗುತ್ತಿದೆ. ಹಾಗಾಗಿಯೇ ಕ್ರೌರ್ಯದ ಪ್ರಮಾಣವೂ ಹೆಚ್ಚುತ್ತಿದೆ.Remorse and guilt ಅನ್ನುವುದು ಅಪರೂಪದ ಅನುಭೂತಿಯಾಗುತ್ತಿದೆ. ಕಾರಣ ನಮ್ಮೊಳಗೇ ಇದೆ. ಅವರ ಕ್ರಿಯಾಶೀಲತೆ ಪಾಲಕರಿಗೆ ಬೇಕಿಲ್ಲ. ಕಣ್ಣಿಗೆ ಕಾಣುವ ಪ್ರತಿಭೆಯನ್ನು ನಾವು ಗುರುತಿಸಲು ಸಿದ್ಧರಿಲ್ಲ. ಅವರ ಭಯಗಳನ್ನು ಹಂಚಿಕೊಳ್ಳುತ್ತಿಲ್ಲ. ಅವರ ಯೋಚನೆಯ ಆಯಾಮಗಳು ನಮಗರ್ಥವಾಗುತ್ತಿಲ್ಲ. ಸುಳ್ಳು ಹೇಳುವ ಪ್ರಕ್ರಿಯೆ ನಮ್ಮಿಂದಲೇ ಶುರುವಾಗಿರುತ್ತದೆ. ಮತ್ತೆ ಆ ‘ಬೆಳೆದು ನಿಂತ ಸುಳ್ಳು’ ನಮ್ಮನ್ನೇ ಆಘಾತಕ್ಕೆ ತಳ್ಳುತ್ತದೆ. ಅವರೊಂದಿಗೆ ಸಮಯ ವ್ಯಯಿಸುವುದು ಸಾಧ್ಯವಿಲ್ಲ ಅನ್ನುವ ಅನಿವಾರ್ಯತೆಯನ್ನೂ ನಾವೇ ತಂದುಕೊಂಡಿದ್ದೇವೆ. ನಮ್ಮ ಮಕ್ಕಳು ಏನು ಅನ್ನುವುದು ನಮಗೆ ಇನ್ಯಾರಿಂದಲೋ ತಿಳಿಯುತ್ತದೆ. ಅದು ಮೊದಲಿಗೆ ನಮಗೇ ತಿಳಿಯಬೇಕಲ್ಲವೇ! ಮುಖ್ಯವಾಗಿ ನಾವು ಬದಲಾಗಲೇಬೇಕು. ಈ ‘ನಾನಾ-ನೀನಾ’ ಗುದ್ದಾಟಗಳಿಂದ ಏನೂ ಪ್ರಯೋಜನವಿಲ್ಲ. ಇಂದಿನ ಅವರ ಹೋರಾಟಗಳೇ ಬೇರೆ. ಎದುರಿಸುವುದನ್ನು ಅವರೇ ಕಲಿಯಬೇಕು. ನಾವದನ್ನು ಬೆಂಬಲಿಸಬೇಕು, ಒತ್ತಾಸೆಯಾಗಿ ನಿಲ್ಲಬೇಕು.

Leave a Reply

Your email address will not be published. Required fields are marked *