ನವದೆಹಲಿ: ಐಪಿಎಲ್ 2025ರ ಆರಂಭಕ್ಕೆ ಇನ್ನೂ ಬಹಳ ಸಮಯವಿದ್ದರು ಕೂಡ ಐಪಿಎಲ್ ತಂಡಗಳಿಗೆ ಸಂಬಂಧಿಸಿದ ಕೆಲವು ವಿಷಯಗಳು ಆಗಾಗ ವರದಿಯಾಗುತ್ತಲೇ ಇವೆ. ಮುಂಬರುವ ಸೀಸನ್ಗೂ ಮುನ್ನ ಮೆಗಾ ಹರಾಜು ನಡೆಯುವುದರಿಂದ ಎಲ್ಲ ಫ್ರಾಂಚೈಸಿಗಳು ಬಲಿಷ್ಠ ತಂಡಗಳನ್ನು ನಿರ್ಮಿಸಲು ಯೋಜಿಸುತ್ತಿವೆ. ಕೆಲವು ತಂಡಗಳು ತಮ್ಮ ನಾಯಕರನ್ನು ಕೂಡ ಬದಲಾಯಿಸುತ್ತಿವೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ರೇಜ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೂಡ ತನ್ನ ಹೊಸ ನಾಯಕನನ್ನು ಅಂತಿಮಗೊಳಿಸಿದೆ ಎಂದು ಹೇಳಲಾಗುತ್ತಿದೆ.
ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಫಾಫ್ ಡುಪ್ಲೆಸಿಸ್ ಅವರನ್ನು ಮುಂದಿನ ಸೀಸನ್‌ಗೆ ಉಳಿಸಿಕೊಳ್ಳಲು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಆಸಕ್ತಿ ಹೊಂದಿಲ್ಲದಿರುವಂತೆ ತೋರುತ್ತದೆ. ಹೀಗಾಗಿ, ಹೊಸ ನಾಯಕನನ್ನು ಹರಾಜಿನಿಂದ ಹೊರಗಿಡಲು ಆರ್‌ಸಿಬಿ ಫಿಕ್ಸ್ ಆಗಿದೆಯಂತೆ.
ಮೆಗಾ ಹರಾಜಿಗೂ ಮೊದಲು ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರಾಟ್ ಕೊಹ್ಲಿ, ವಿಲ್ ಜಾಕ್ಸ್ ಮತ್ತು ರಜತ್ ಪಾಟಿದಾರ್ ಅವರನ್ನು ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ. ರಜತ್ ಪಾಟಿದಾರ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ. ಹಾಗೇನಾದರೂ ನಡೆದರೆ, ಪಾಟಿದಾರ್ ಮೇಲೆ ಭಾರಿ ಹೊರೆ ಬೀಳಲಿದೆ.
ವಿರಾಟ್ ಕೊಹ್ಲಿ ಜೊತೆಗೆ ತಂಡಕ್ಕೆ ಬರುವ ಸ್ಟಾರ್ ಆಟಗಾರರನ್ನು ಮ್ಯಾನೇಜ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ವಿರಾಟ್ ಕೊಹ್ಲಿ ಕಳೆದ ಮೂರು ಸೀಸನ್‌ಗಳಿಂದ ನಾಯಕತ್ವದಿಂದ ದೂರ ಉಳಿದಿದ್ದರೂ ಫಾಫ್ ಡುಪ್ಲೆಸಿಸ್ಗೆ ಸಲಹೆ ನೀಡುತ್ತಾ ಬಂದಿದ್ದಾರೆ. ಇನ್ನೂ ರಜತ್ ಪಾಟಿದಾರ್ ನಾಯಕನಾದರೆ ಅವರಿಗೂ ಕೊಹ್ಲಿ ನೆರವಾಗಲಿದ್ದಾರೆ. ಏಕೆಂದರೆ, ಪಾಟಿದಾರ್ಗೆ ಅಷ್ಟೊಂದು ಅನುಭವ ಇಲ್ಲ. ಕೊಹ್ಲಿಯ ಸಲಹೆಗಳು ಪಾಟಿದಾರ್ ಅವರಿಗೆ ಪ್ಲಸ್ ಆಗಲಿದೆ.
Rajat Patidar Will be a New Captain of RCB#RCB #RajatPatidar #ViratKohli𓃵 #IPL2025 pic.twitter.com/TzSo37zvw3
— Sayyad Nag Pasha (@nag_pasha) September 9, 2024
ಮತ್ತೊಂದೆಡೆ ವಿರಾಟ್ ಕೊಹ್ಲಿಗೆ ಮತ್ತೊಮ್ಮೆ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆರ್‌ಸಿಬಿ ಪರ ಕಪ್ ಗೆಲ್ಲಲು ಕೊಹ್ಲಿ ಶತಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಆಟಗಾರನಾಗಿ ಮತ್ತು ನಾಯಕನಾಗಿಯೂ ಅದು ಈಡೇರಲಿಲ್ಲ. ಆದರೆ, ಕೊನೆಯ ಬಾರಿಗೆ ನಾಯಕನಾಗಿ ಕಪ್‌ಗಾಗಿ ಪ್ರಯತ್ನಿಸಿದರೆ ಉತ್ತಮ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಆದರೆ, ಆರ್‌ಸಿಬಿ ನಾಯಕ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಇನ್ನು ಕೆಲವೇ ತಿಂಗಳುಗಳಲ್ಲಿ ಉತ್ತರ ಸಿಗಲಿದೆ. (ಏಜೆನ್ಸೀಸ್)
ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆರಂಭಿಸಿದ ವೈದ್ಯರು! ವೈರಲ್ ಆಗ್ತಿದೆ ಡಾಕ್ಟರ್ ಬರೆದ ಈ ಪ್ರಿಸ್ಕ್ರಿಪ್ಷನ್
ದೈತ್ಯ ದೇಹದ WWE ಸೂಪರ್ ಸ್ಟಾರ್ಗೆ ಏನಾಯ್ತು? ಗುರುತೇ ಸಿಗದಷ್ಟು ಬದಲಾದ ಬಟಿಸ್ಟಾ!