ಯುವಕರು ಕೃಷಿ ನಿರ್ಲಕ್ಷಿಸದಿರಿ

ಕುಮಟಾ: ಯುವಕರು ಕೃಷಿಯನ್ನು ನಿರ್ಲಕ್ಷಿ್ಯದೆ ಆಸಕ್ತಿ ವಹಿಸುವ ಮೂಲಕ ಆದಾಯದ ಮೂಲವನ್ನಾಗಿಸಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ನಬಾರ್ಡ್ ಆರ್​ಐಡಿಎಫ್ 19ರಡಿ ಹೆಗಡೆ ಕ್ರಾಸ್​ನಲ್ಲಿ ನಿರ್ವಿುಸಲಾದ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಅನ್ನದಾತನಾದ ರೈತರಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡುವಲ್ಲಿ ಕೃಷಿ ಸಂಬಂಧಿತ ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸಬೇಕು. ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಕೃಷಿ ಮತ್ತು ಸ್ವಉದ್ಯೋಗಕ್ಕೆ ದೊರೆಯುವ ಸಬ್ಸಿಡಿ ಸಹಕಾರಿ ಬ್ಯಾಂಕ್​ಗಳಿಗೂ ಅನ್ವಯಿಸುವಂತಾಗಬೇಕು. ಆ ಬಗೆಗೆ ರ್ಚಚಿಸಲಾಗುವುದು. ರೈತರ ಸಾಲ ಮನ್ನಾ ಕೃಷಿಯನ್ನು ಪ್ರೋತ್ಸಾಹಿಸುವ ಒಂದು ಭಾಗವಷ್ಟೆ. ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಮತ್ತು ಯೋಗ್ಯ ಬೆಲೆ ದೊರಕಿಸಿಕೊಡುವ ಪ್ರಯತ್ನ ಇಲಾಖೆಯಿಂದಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ರೈತರ ಸಾಲ ಮನ್ನಾ ಮಾಡಿದಂತೆ ಮೀನುಗಾರರ ಸಾಲ ಮನ್ನಾ ಮಾಡಬೇಕು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿದ ಮಾತನ್ನು ಉಳಿಸಿಕೊಳ್ಳಬೇಕು. ಕುಮಟಾದಲ್ಲಿ ಕೃಷಿ ವಿಶ್ವವಿದ್ಯಾಲಯ ನಿರ್ವಣವಾಗಬೇಕು. ಆ ಬಗೆಗೆ ಸಚಿವರು ಗಮನಹರಿಸಬೇಕು ಎಂದರು.
ಪ್ರಗತಿಪರ ರೈತ ವಿವೇಕ ಜಾಲಿಸತ್ಗಿ ಮಾತನಾಡಿ, ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ ವಹಿಸಿದರೆ ಮಾತ್ರ ಯುವಕರು ಕೃಷಿಪರ ಒಲವು ತೋರಲು ಸಹಾಯವಾಗುತ್ತದೆ ಎಂದು ಮನವಿ ಮಾಡಿದರು. ನೂತನ ಕಟ್ಟಡ ನಿರ್ವಿುಸಿಕೊಟ್ಟ ಗುತ್ತಿಗೆದಾರ ಧೀರೂ ಶಾನಭಾಗ ಅವರನ್ನು ಸನ್ಮಾನಿಸಲಾಯಿತು. ತಾಪಂ ಉಪಾಧ್ಯಕ್ಷೆ ಗೀತಾ ಮುಕ್ರಿ, ಶಿರಸಿಯ ಉಪ ಕೃಷಿ ನಿರ್ದೇಶಕ ಟಿ.ಎಚ್.ನಟರಾಜ, ಉಪವಿಭಾಗಾಧಿಕಾರಿ ಪ್ರೀತಿ ಗೆಲ್ಹೋಟಾ, ತಹಸೀಲ್ದಾರ್ ಅಜಯ, ಕುಮಟಾ ಕೃಷಿ ಸಹಾಯಕ ನಿರ್ದೇಶಕ ಶಂಕರ ಹೆಗಡೆ, ತಾಪಂ ಇಒ ಸಿ.ಟಿ. ನಾಯ್ಕ, ಎಇಇ ಆರ್.ಜಿ.ಗುನಗಿ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ, ಜಿಪಂ ಸದಸ್ಯ ಗಜಾನನ ಪೈ, ಮಾಜಿ ಶಾಸಕಿ ಶಾರದಾ ಶೆಟ್ಟಿ ಇತರರು ಇದ್ದರು.
ದೇವರಾಜ ಅರಸು ಭವನ ಉದ್ಘಾಟನೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದಿ. ದೇವರಾಜ ಅರಸು ಭವನವನ್ನು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಬಸವರಾಜ ಎಂ. ಬಡಿಗೇರ, ಪುರಸಭೆ ಮಾಜಿ ಅಧ್ಯಕ್ಷ ಮಧುಸೂದನ ಶೇಟ್, ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ತಾರಾ ಗೌಡ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್. ನಾಯ್ಕ ಇತರರಿದ್ದರು.
ಸರ್ಕಾರ ಮರಳಿನ ಸಮಸ್ಯೆ ಬಗೆಹರಿಸಿದೆ
ಭಟ್ಕಳ: ಮರಳಿನ ಸಮಸ್ಯೆಗೆ ಈಗಾಗಲೇ ಸರ್ಕಾರ ಪರಿಹಾರ ಸೂಚಿಸಿದೆ. ಅಂಕೋಲಾ, ಕುಮಟಾ, ಹೊನ್ನಾವರದಲ್ಲಿ ಮರಳು ತೆಗೆಯಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ಭಟ್ಕಳದಲ್ಲಿ ಕಾರ್ವಿುಕರೊಬ್ಬರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಕಾರವಾರದಲ್ಲಿ ಕಾಳಿ ನದಿಗೆ ಮರಳು ತೆಗೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಆದರೆ, ಅಂಕೋಲಾ, ಕುಮಟಾ, ಹೊನ್ನಾವರದಲ್ಲಿ ನೀಡಲಾಗಿದೆ. ಅಲ್ಲದೆ, ಮರಳು ಸಾಗಾಟವೂ ಆರಂಭವಾಗಿದೆ. ಒಂದು ವೇಳೆ ಪರವಾನಗಿ ಪಡೆದವರು ದುಬಾರಿ ವೆಚ್ಚಕ್ಕೆ ಮಾರಾಟ ಮಾಡಿದರೆ ಅಥವಾ ಭಟ್ಕಳ ಸೇರಿ ಕೆಲವೆಡೆ ಮರಳು ಸಾಗಿಸಲು ನಿರಾಕರಿಸಿದರೆ ಅಂಥವರ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಭಟ್ಕಳದಲ್ಲಿ ಇತೀಚೆಗೆ ಕೆಂಪು ಕಲ್ಲು ಕ್ವಾರಿಯಲ್ಲಿ ದಾಳಿ ನಡೆಸಿ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ. ಸರ್ಕಾರಕ್ಕೆ ರಾಯಲ್ಟಿ ನೀಡಿ ಕಾನೂನು ಪ್ರಕಾರವೇ ಉದ್ಯಮ ನಡೆಸಿ. ಕಾನೂನು ಮೀರಿದರೆ ಯಾರೂ ಸಹಾಯ ಮಾಡಲು ಆಗುವುದಿಲ್ಲ. ಅಲ್ಲದೆ, ಈಗಾಗಲೇ ಅರ್ಧಕ್ಕೆ ನಿಂತ ಕಾಮಗಾರಿಗಳ ವಿವರ ಪಡೆದ ಅವರು, ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಮಾಹಿತಿ ನೀಡುವಂತೆ ಉಪವಿಭಾಗಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಸೂಚಿಸಿದರು. ಶಾಸಕ ಸುನೀಲ ನಾಯ್ಕ ಇತರರು ಇದ್ದರು.
ಸಮಸ್ಯೆ ಪರಿಹರಿಸುವಂತೆ ಸಚಿವರಿಗೆ ಮನವಿ
ಹೊನ್ನಾವರ: ಶರಾವತಿ ಮತ್ತು ಬಡಗಣಿ ನದಿ ಪ್ರದೇಶದ ರ್ಕ ಗ್ರಾಪಂ ವ್ಯಾಪ್ತಿಯ ನದಿ ಮತ್ತು ಸಮುದ್ರತೀರ ಪ್ರದೇಶಗಳಲ್ಲಿ ಉಪ್ಪು ನೀರು ಮತ್ತು ಜಾಗತಿಕ ತಾಪಮಾನದಿಂದ ನೀರಿನ ಮಟ್ಟ ಜಾಸ್ತಿಯಾಗುತ್ತಿರುವುದರಿಂದ ರ್ಕ ಭಾಗದ ಸುತ್ತಲಿನ ಜನರಿಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಹೆಗಡೆಹಿತ್ತಲು, ತೊಪ್ಪಲಕೇರಿಯ ಜನರು ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ತೊಪ್ಪಲಕೇರಿ, ಹೆಗಡೆಹಿತ್ಲ, ಪಾವಿನಕುರ್ವಾ, ನಡುಚಿಟ್ಟೆ, ಕಂಕೋಡಿ, ಬೆಲೆಗದ್ದೆ, ರಾಮೇಶ್ವರ ಕಂಬಿ, ಶೇಡಿಕುಳಿ, ಕೊಣಕಾರ ಹಾಗೂ ರ್ಕ ರೈಲ್ವೆ ನಿಲ್ದಾಣದವರೆಗೆ ಉಪ್ಪು ನೀರಿನ ಸಮಸ್ಯೆ ಉಲ್ಬಣಿಸಿದೆ. ಅಲ್ಲಿನ 500 ಮನೆಗಳು, 1,000 ಎಕರೆಯಷ್ಟು ಕಂದಾಯ ಭೂಮಿ ಉಪ್ಪು ನೀರಿನಿಂದಾಗಿ ಬಂಜರು ಭೂಮಿಯಾಗಿ ಹಾಳು ಬಿದ್ದಿದೆ. ಅಲ್ಲಿನ ಜನರು ಬೇಸಾಯ ಮಾಡಲಾಗದೇ ಕೂಲಿ-ನಾಲಿ ಮಾಡಿ ಜೀವನ ನಡೆಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೆಪಿಸಿಸಿ ಸದಸ್ಯ ವಿನೋದ ನಾಯ್ಕ, ಹರಿಶ್ಚಂದ್ರ ನಾಯ್ಕ, ಚಂದ್ರಕಾಂತ ನಾಯ್ಕ, ಗಜಾನನ ನಾಯ್ಕ, ಸಣ್ತಮ್ಮ ನಾಯ್ಕ, ಮಾದೇವ ನಾಯ್ಕ, ಸುನೀಲ ವರ್ಗಿಸ್, ವೆಂಕಟ್ರಮಣ ನಾಯ್ಕ, ಗಣಪತಿ ನಾಯ್ಕ, ಮಂಜುನಾಥ ನಾಯ್ಕ ಹಾಗೂ ರ್ಕಯ ಹೆಗಡೆಹಿತ್ತಲು ಮತ್ತು ತೊಪ್ಪಲಕೇರಿ ಮಜರೆಯ ನೂರಾರು ನಾಗರಿಕರು ಪಾಲ್ಗೊಂಡಿದ್ದರು.