More

    12 ವರ್ಷದ ಬಳಿಕ ಹೆತ್ತಬ್ಬೆಯ ಮಡಿಲು ಸೇರಿದ ಯುವಕ

    ಉಡುಪಿ: ನಗರದಲ್ಲಿ ಭಿಕ್ಷಾಟನೆ ಮಾಡಿಕೊಂಡು ಅಲೆಮಾರಿಯಂತೆ ತಿರುಗುತ್ತಿದ್ದ ಯುವಕನ ಮನವೊಲಿಸಿ ಮನೆಗೆ ಸೇರಿಸುವಲ್ಲಿ ಜಿಲ್ಲಾ ನಾಗರೀಕ ಸಮಿತಿ ಯಶಸ್ವಿಯಾಗಿದೆ.

    ಕಾಣೆಯಾಗಿರುವ ಮಗ 12 ವರ್ಷಗಳ ಬಳಿಕ  ಮಂಗಳವಾರ ಕುಂದಾಪುರ ತಾಲೂಕಿನ, ವಕ್ವಾಡಿಯಲ್ಲಿರುವ ಮನೆಗೆ ಬಂದಿರುವುದು ಹೆತ್ತಬ್ಬೆಯಲ್ಲಿ ಸಂತಸ ಮೂಡಿಸಿದೆ.

    ನಗರ ಪರಿಸರದಲ್ಲಿ ಕೆಲವು ವರ್ಷಗಳಿಂದ ವಕ್ವಾಡಿ ತೆಂಕಬೆಟ್ಟು  ನಿವಾಸಿ ಪ್ರಶಾಂತ್ ಶೆಟ್ಟಿ (37) ಉದರ ಹಸಿವು ತಣಿಸಲು ಶ್ರೀಕೃಷ್ಣ ಮಠಕ್ಕೆ ಬರುವ ಯಾತ್ರಿಕರಲ್ಲಿ ಭಿಕ್ಷೆಯನ್ನು ಯಾಚಿಸುತ್ತಾ ರಾತ್ರಿಯ ಸಮಯವನ್ನು ಬಸ್ಸು ನಿಲ್ದಾಣ, ಅಂಗಡಿ ಜಗುಲಿಯಲ್ಲಿ ಮಲಗಿ ದಿನ ಕಳೆಯುತ್ತಿದ್ದ. ರಾತ್ರಿಯ ಹೊತ್ತು  ಅನುಮಾನಸ್ಪದವಾಗಿ ತಿರುಗಾಡುತ್ತಿದ್ದವನಿಗೆ ಗಸ್ತು ಪೊಲೀಸರು ಬುದ್ದಿ ಹೇಳಿ ಪ್ರಯಾಣದ ಖರ್ಚಿಗೆ ಹಣವನ್ನು ನೀಡಿದ್ದರು. ಆದರೆ ಯುವಕ ಮಾತ್ರ ಅಲೆಮಾರಿಯಂತೆ ದಿನಗಳ ಕಳೆಯುತ್ತಿದ್ದ.

    ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ನಾಗರಿಕ ಸಮಿತಿ ಸಾಸ್ಯರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಭಿಕ್ಷಾಟನೆ ನಿಷೇಧ ಕಾಯ್ಧೆ ಜಾರಿಯಲ್ಲಿದೆ, ಭಿಕ್ಷೆ ಬೇಡುವುದು ಅಪರಾಧವಾಗಿದೆ. ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ. ಹೀಗೆ ಬುದ್ದಿ ಹೇಳಿ ಯುವಕನ ಮನವೊಲಿಸಿದ್ದರು. ಬುದ್ದಿಮಾತಿನ ಬಳಿಕ ಮನ ಪರಿವರ್ತನೆಗೊಂಡ ಯುವಕನನ್ನು ವಕ್ವಾಡಿಯ ಸಾಮಾಜಿಕ ಕಾರ್ಯಕರ್ತೆ ಅಂಬಿಕಾ ಅವರ ಸಹಕಾರದಿಂದ ಮನೆಗೆ ಸೇರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts