ಕೆ.ಆರ್. ಸಾಗರ : ಬೆಳಗೊಳ ಗ್ರಾಮದ ಬಳಿ ಬಲಮುರಿ ಪ್ರವಾಸಿ ತಾಣದಲ್ಲಿನ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಯುವ ಕಾರ್ಮಿಕ ಭಾನುವಾರ ಸಂಜೆ ಮುಳುಗಿ ಮೃತಪಟ್ಟಿದ್ದಾನೆ. ನಂಜನಗೂಡಿನ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿರುವ ಟಿ.ವಿ.ಎಸ್. ಫ್ಯಾಕ್ಟರಿ ನೌಕರ ಎಂ. ಪ್ರವೀಣ(22) ಮೃತ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ಬಸಾಪುರ ಗ್ರಾಮ ಮೂಲದ ಪ್ರವೀಣ ಕಡಕೊಳದಲ್ಲಿ ವಾಸವಿದ್ದ. 6 ಜನ ಸ್ನೇಹಿತರೊಂದಿಗೆ ಭಾನುವಾರ ಬಲಮುರಿಗೆ ಪ್ರವಾಸ ಬಂದಿದ್ದ. ಮಿತ್ರರೊಂದಿಗೆ ನದಿಯಲ್ಲಿ ಈಜಾಡುತ್ತಿದ್ದ ಸಂದರ್ಭ ಮುಳಗಿದ. ಸ್ಥಳೀಯರು ಧಾವಿಸಿ ನೀರಿನಿಂದ ಈತನನ್ನು ಹೊರ ತೆಗೆದರೂ ಅಷ್ಟರಲ್ಲಿ ಮೃತನಾಗಿದ್ದ. ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೆ.ಆರ್. ಸಾಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
TAGGED:KRS balamuri death