Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಹಿತಾಸಕ್ತಿಯ ಘರ್ಷಣೆಯಲ್ಲಿ ನೈಜ ರೇಟಿಂಗ್ ಹೊಮ್ಮೀತೇ?

Monday, 16.07.2018, 3:03 AM       No Comments

| ವರುಣ್​ ಗಾಂಧಿ

ವ್ಯಕ್ತಿಯೊಬ್ಬನಿಗೆ, ಒಂದು ಸಂಸ್ಥೆಗೆ, ಅಷ್ಟೇಕೆ ಒಂದು ರಾಷ್ಟ್ರಕ್ಕೂ ಶ್ರೇಯಾಂಕ (ರೇಟಿಂಗ್) ನೀಡುವ ಪರಿಕಲ್ಪನೆ ಬಹಳ ಕಾಲದಿಂದ ಚಾಲ್ತಿಯಲ್ಲಿದೆ. ಖ್ಯಾತ ಇತಿಹಾಸಕಾರ ಹೆರೊಡೋಟಸ್ ಮತ್ತು ಸೈರೀನ್​ನ ವಿದ್ವಾಂಸ ಕ್ಯಾಲಿಮ್ಯಾಕಸ್ ಜತೆಗೂಡಿ, ಇಂಥ 7 ಆರಂಭಿಕ ಸಂಸ್ಥೆಗಳ ಪಟ್ಟಿಯನ್ನೇ ಮಾಡಿರುವುದರ ಜತೆಗೆ ಅವನ್ನೂ ಮತ್ತು ಅವುಗಳ ಮೌಲ್ಯವನ್ನೂ ವಿವರಿಸಿದ್ದಾರೆ. ಅದೇನೇ ಇರಲಿ, ವರ್ತಮಾನದ ಕ್ರೆಡಿಟ್ ರೇಟಿಂಗ್ ಏಜನ್ಸಿಗಳು ಅಸ್ತಿತ್ವಕ್ಕೆ ಬಂದು ಬಹಳ ಕಾಲವೇನೂ ಆಗಿಲ್ಲ- 1837ರಲ್ಲಿ ಕಂಡುಬಂದ ಆರ್ಥಿಕ ಬಿಕ್ಕಟ್ಟಿನ ತರುವಾಯದಲ್ಲಿ ಇವು ಬೆಳಕಿಗೆ ಬಂದವೆನ್ನಬೇಕು. ಅಂದು ಇಂಥ ಏಜನ್ಸಿಗಳು ವ್ಯಾಪಾರಿಯೊಬ್ಬನು ತನ್ನ ಋಣಭಾರದ ಪಾವತಿಗೆ ಸಂಬಂಧಿಸಿ ಹೊಂದಿರುವ ಸಾಮರ್ಥ್ಯಕ್ಕೆ ಶ್ರೇಯಾಂಕ ನೀಡಬೇಕಾಗಿತ್ತು ಹಾಗೂ ಇಂಥ ದತ್ತಾಂಶವನ್ನು ಲೆಡ್ಜರುಗಳಲ್ಲಿ ಸಂಗ್ರಹಿಸಿಡಬೇಕಾಗಿತ್ತು. ನೋಡುನೋಡುತ್ತಿದ್ದಂತೆಯೇ, ವ್ಯಾಪಾರಿಯೊಬ್ಬನ/ಸಂಸ್ಥೆಯೊಂದರ ಸಾಲಯೋಗ್ಯತೆಯ ವಿಶ್ವಾಸಾರ್ಹ ವಿಶ್ಲೇಷಣೆಯನ್ನು ಒದಗಿಸಬಲ್ಲಂಥ ಸ್ವತಂತ್ರ ಮಾರುಕಟ್ಟೆ ಮಾಹಿತಿ ವ್ಯವಸ್ಥೆಗಾಗಿ ಬೇಡಿಕೆ ಹೆಚ್ಚಾಯಿತು; ಈ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದ ಮೂಡಿ’ಸ್ ರೇಟಿಂಗ್ಸ್​ನ ಪ್ರಕಟಣೆ ಕೈಗಾರಿಕಾ ಸಂಸ್ಥೆಗಳು ಹಾಗೂ ಅವುಗಳ ಉಪಯುಕ್ತತೆಗಳ ಮೇಲೆ ಹೆಚ್ಚೆಚ್ಚು ಗಮನ ಕೇಂದ್ರೀಕರಿಸಲಾರಂಭಿಸಿ, ದಾಖಲೆಪತ್ರ ಆಧಾರಿತ ರೇಟಿಂಗ್​ಗಳನ್ನು ನೀಡಲಾರಂಭಿಸಿತು.

1924ರ ವೇಳೆಗೆ, Fitch Ratings, Standard & Poor’s ಸೇರಿದಂತೆ ಪ್ರಪಂಚದ ಮೂರು ದೊಡ್ಡ ರೇಟಿಂಗ್ಸ್ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಿದ್ದವು; ಇಂದಿನ ಅಲ್ಪಸಂಖ್ಯಾಸ್ವಾಮ್ಯದ ಕ್ರೆಡಿಟ್ ಮಾರುಕಟ್ಟೆಯ ಬಹುತೇಕ ಶೇ. 95 ಭಾಗ ಒಟ್ಟಾರೆಯಾಗಿ ಈ ಮೂರು ಸಂಸ್ಥೆಗಳ ನಿಯಂತ್ರಣದಲ್ಲಿವೆ ಎಂಬುದು ಗಮನಿಸಬೇಕಾದ ಅಂಶ. ಬ್ಯಾಂಕಿಂಗ್ ವ್ಯವಹಾರದಿಂದ ಸೆಕ್ಯುರಿಟೀಸ್ ವ್ಯವಹಾರವನ್ನು ಪ್ರತ್ಯೇಕಿಸುವುದಕ್ಕೆ ಸಂಬಂಧಿಸಿದ ನೀತಿನಿಯಮಗಳನ್ನು ರೂಪಿಸುವಲ್ಲಿ 1933ರಲ್ಲಿ ಅನುಮೋದಿಸಲ್ಪಟ್ಟ Glass-Steagall ಕಾಯ್ದೆ ನೆರವಾಯಿತು; ಹೀಗಾಗಿ ಇಂಥ ರೇಟಿಂಗ್​ಗಳಿಂದ ನಿರ್ಷRಸಲ್ಪಟ್ಟಂತೆ ಹೂಡಿಕೆ ದರ್ಜೆಯ ಬಾಂಡ್​ಗಳನ್ನು ಮಾತ್ರವೇ ಹೊಂದುವುದಕ್ಕೆ ಅಮೆರಿಕದ ಬ್ಯಾಂಕುಗಳಿಗೆ ಅಧಿಕಾರ ಸಿಕ್ಕಿತು. ಈ ಬೆಳವಣಿಗೆಯ ತರುವಾಯ, 1960ರ ದಶಕದ ಹೊತ್ತಿಗೆ, ವಾಣಿಜ್ಯ ದಾಖಲೆಪತ್ರಗಳು ಹಾಗೂ ಬ್ಯಾಂಕ್ ಠೇವಣಿಗಳಿಗೆ ಸಂಬಂಧಿಸಿಯೂ ಇಂಥ ರೇಟಿಂಗ್​ಗಳ ಕಾರ್ಯವ್ಯಾಪ್ತಿ ಹಬ್ಬಿದ್ದರ ಜತೆಗೆ, ಸಾವರಿನ್ ಬಾಂಡ್​ಗಳೂ ಸೇರಿದಂತೆ ಜಾಗತಿಕ ಬಾಂಡ್ ಮಾರುಕಟ್ಟೆಗೆ ಶ್ರೇಯಾಂಕ ನೀಡಿಕೆ ಪ್ರಕ್ರಿಯೆ ವಿಸ್ತರಿಸುವಂತಾಯಿತು. ಇಂಥ ಏಜನ್ಸಿಗಳು ಹೂಡಿಕೆದಾರರಿಗೂ ಮತ್ತು ವ್ಯಾಪ್ತಿಗೆ ಬರುವ ಸಂಸ್ಥೆಗೂ ಶುಲ್ಕ ವಿಧಿಸಲು ಶುರುಮಾಡಿದವು.

ಇಷ್ಟಾಗಿಯೂ, ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿನ ಪ್ರಮುಖ ಪಾತ್ರದ ಹೊರತಾಗಿಯೂ, ರೇಟಿಂಗ್ ಏಜನ್ಸಿಗಳು ಭರವಸೆಯನ್ನು ತುಂಬುವಲ್ಲಿ ವಿಫಲವಾಗುತ್ತಿವೆ; ಅಸಮರ್ಪಕವಾಗಿರುವ ರೇಟಿಂಗ್​ಗಳು ಮೇಲಿಂದಮೇಲೆ ಹೊಮ್ಮುತ್ತಿವೆ ಎಂಬ ಆರೋಪಗಳೇ ಇದಕ್ಕೆ ಕಾರಣವೆನ್ನಬೇಕು.

ಈ ಹಿನ್ನೆಲೆಯಲ್ಲಿ, ವ್ಯವಹಾರ ಹಪಹಪಿಯಿಂದಾಗಿ ಮೂಡಿ’ಸ್ ಸಂಸ್ಥೆ ನೀಡಿಕೆದಾರರ ಮೇಲೆ ಹೇರುತ್ತಿರಬಹುದಾದ ಅಸಮರ್ಪಕ ಒತ್ತಡದ ಕುರಿತಾದ ತನಿಖೆಗೆ 1996ರಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆ ಮುಂದಾಯಿತು. ಇಂಥ ಏಜನ್ಸಿಗಳು ವ್ಯಾಪಕ ಶ್ರೇಣಿಯ ಮೊಕದ್ದಮೆಗಳಿಗೆ ಒಳಗಾಗಿವೆ; ಅದರಲ್ಲೂ ವಿಶೇಷವಾಗಿ, ಅಮೆರಿಕದಲ್ಲಿ ಎನ್ರಾನ್ ಕಂಪನಿಯ ಕುಸಿತದ ನಂತರ ಹಾಗೂ ಸಬ್​ಪ್ರೖೆಮ್ (ಸಾಲಯೋಗ್ಯತೆಯು ಉತ್ತಮವಾಗಿಲ್ಲದ ಅಥವಾ ಸೀಮಿತವಾಗಿರುವಂಥ ಸಾಲಗಾರರನ್ನು ‘ಸಬ್​ಪ್ರೖೆಮ್ ಗುಂಪಿನಲ್ಲಿ ವರ್ಗೀಕರಿಸಲಾಗುತ್ತದೆ) ಅಡಮಾನ ವಲಯ ಸಂಬಂಧಿತ ಇತ್ತೀಚಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಪರಿಸ್ಥಿತಿ ಗಣನೀಯವಾಗಿತ್ತು ಎನ್ನಬೇಕು.

ಪ್ರಮಾಣೀಕರಿಸಲ್ಪಟ್ಟಿರುವ ಶ್ರೇಯಾಂಕದ ಶಿಷ್ಟಾಚಾರಗಳನ್ನು ಪರಿಪಾಲಿಸದಿದ್ದುದಕ್ಕಾಗಿ ಮೂಡಿ’ಸ್ ಸಂಸ್ಥೆಗೆ ವಿವಿಧೆಡೆ ದಂಡ ವಿಧಿಸಲಾಗಿದೆ. 2008ರಲ್ಲಿ ಕಂಡುಬಂದ ಸಬ್​ಪ್ರೖೆಮ್ ಬಿಕ್ಕಟ್ಟಿನಲ್ಲಿ ಪಾತ್ರವಹಿಸಿದ ಅಪರಾಧಕ್ಕೆ ಸಂಬಂಧಿಸಿದ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಮೆರಿಕ ಒಂದರಲ್ಲೇ ಮೂಡಿ’ಸ್ ಸಂಸ್ಥೆ ಬರೋಬ್ಬರಿ 864 ದಶಲಕ್ಷ ಡಾಲರ್​ನಷ್ಟು ದಂಡವನ್ನು ಪಾವತಿಸಬೇಕಾಗಿಬಂತು; ಮಾತ್ರವಲ್ಲದೆ, ರೇಟಿಂಗ್ ಪರಿಪಾಠಗಳು ಅಸಮರ್ಪಕವಾಗಿದ್ದಕ್ಕಾಗಿ ಯುರೋಪ್​ನಲ್ಲಿ 12 ಲಕ್ಷ ಯುರೋನಷ್ಟು ಹಾಗೂ ಹಾಂಕಾಂಗ್​ನಲ್ಲಿ 14 ಲಕ್ಷ ಹಾಂಕಾಂಗ್ ಡಾಲರ್​ನಷ್ಟು ದಂಡವನ್ನು ಅದು ಪಾವತಿಸಬೇಕಾಗಿ ಬಂತು.

ಭಾರತದಲ್ಲಿ ಕೂಡ ರೇಟಿಂಗ್ ಏಜನ್ಸಿಗಳದ್ದು ಅಸ್ತವ್ಯಸ್ತ ದಾಖಲೆಯೇ ಎನ್ನಬೇಕು. ಆಮ್ೆಕ್ ಆಟೋ ಮತ್ತು ರೀಕೋ ಇಂಡಿಯಾದಂಥ ಪ್ರಕರಣಗಳನ್ನೇ ಒಮ್ಮೆ ಅವಲೋಕಿಸಿ; ಸೆಬಿಯಂಥ ನಿಯಂತ್ರಕ ಪ್ರಾಧಿಕಾರವು ರೇಟಿಂಗ್ ಏಜನ್ಸಿಗಳ ತನಿಖೆಗೆ ಮುಂದಾಗಿ, ನಿಯಮಗಳನ್ನು ಮತ್ತು ಪ್ರಕಟಗೊಳಿಸುವಿಕೆಗೆ ಸಂಬಂಧಿಸಿದ ರೂಢಮಾದರಿಗಳನ್ನು ಮತ್ತಷ್ಟು ಬಿಗಿಗೊಳಿಸುವಂತಾದುದಕ್ಕೆ ಕಾರಣವಾದ ಪ್ರಕರಣಗಳಿವು. ರೇಟಿಂಗ್ ನೀಡಿಕೆಯಲ್ಲಿನ ಅಸಮರ್ಪಕತೆಯ ಕಾರಣದಿಂದಾಗಿ, ಸ್ಥಿರಾಸ್ತಿಗಳು ಅಥವಾ ಲಾಭಗಳಿಕೆಯಲ್ಲಿ ಯಾವುದೇ ಹೆಚ್ಚಳವಿಲ್ಲದೆ, ತನ್ನ ವಿತ್ತೀಯ ಹೊಣೆಗಾರಿಕೆಗಳು 2011ರಿಂದ 2015ರವರೆಗೆ ಹೆಚ್ಚುವಂತಾದುದಕ್ಕೆ ರಿಕೋ ಇಂಡಿಯಾ ಸಾಕ್ಷಿಯಾಗಬೇಕಾಗಿ ಬಂತು ಹಾಗೂ 2015ರ ಸೆಪ್ಟೆಂಬರ್​ನಲ್ಲಿ ಪ್ರಕಟಿಸಬೇಕಿದ್ದ ತನ್ನ ತ್ರೖೆಮಾಸಿಕ ಫಲಿತಾಂಶಗಳನ್ನು ಅದು 2016ರ ಮೇವರೆಗೆ ಮುಂದೂಡುವ ಮೂಲಕ ವಿಳಂಬಿಸುವಂತಾಯಿತು. ಇನ್ನು, 800 ಕೋಟಿಯಷ್ಟು ಬಾಂಡ್ ಮರುಪಾವತಿಗಳಿಗೆ ಸಂಬಂಧಿಸಿದಂತೆ ಕರ್ತವ್ಯಲೋಪದ ಅಂಚಿನಲ್ಲಿದ್ದ ಆಮ್ೆಕ್ ಆಟೋ ಸಂಸ್ಥೆಗೆ ಭಾರತದ ಬಹಳಷ್ಟು ರೇಟಿಂಗ್ ಏಜನ್ಸಿಗಳು ‘ಅಅ’ ವರ್ಗದ ರೇಟಿಂಗ್ ನೀಡಿದ್ದವು- ಇದಾದ ತರುವಾಯ ಈ ಸಂಸ್ಥೆ ಒಂದಾದ ಮೇಲೊಂದರಂತೆ ಕುಸಿತಗಳನ್ನು ದಾಖಲಿಸಿತು. ಅಷ್ಟೇಕೆ, ಭೂಷಣ್ ಸ್ಟೀಲ್ ಮತ್ತು ಜೈಪ್ರಕಾಶ್ ಇಂಡಸ್ಟ್ರೀಸ್​ನಂಥ ಕಂಪನಿಗಳು ದಿವಾಳಿಯೇಳುವುದಕ್ಕೂ ಮುನ್ನ, ಎಲ್ಲ ಏಜೆನ್ಸಿಗಳು ಅವಕ್ಕೆ ಹೂಡಿಕಾ ದರ್ಜೆಯ ರೇಟಿಂಗ್​ಗಳನ್ನು ನೀಡಿದ್ದವು ಎಂಬುದಿಲ್ಲಿ ಉಲ್ಲೇಖನೀಯ.

ಎಲ್ಲಕ್ಕಿಂತ ಮುಖ್ಯವಾಗಿ, ರೇಟಿಂಗ್ ಏಜನ್ಸಿಗಳ ಇಂಥ ಅಸಮರ್ಪಕತೆ ರಾಷ್ಟ್ರಗಳ ಆರ್ಥಿಕ ದೆಸೆಗೂ ಸಂಕಷ್ಟ ತಂದೊಡ್ಡಿ (ಇದಕ್ಕೆ ಕಾರಣವಾಗುವುದು ‘ಬಂಡವಾಳದ ಪಲಾಯನ’ ಪ್ರಕ್ರಿಯೆ- ಅಂದರೆ, ಯಾವುದೋ ಸಂಭಾವ್ಯ ನಷ್ಟ ಅಥವಾ ಅಪಾಯದಿಂದ ಪಾರಾಗಲು, ಉದ್ಯಮವೊಂದರಲ್ಲಿ ತೊಡಗಿಸಿದ ಬಂಡವಾಳವನ್ನು ಹೂಡಿಕೆದಾರರು ಹಿಂತೆಗೆದುಕೊಳ್ಳುವಿಕೆ), ಜಾಗತಿಕ ಮಟ್ಟದಲ್ಲೂ ಅದು ಆಘಾತ ತಂದೊಡ್ಡುವ ಸಾಧ್ಯತೆಯಿರುತ್ತದೆ; ಪೂರ್ವ ಏಷ್ಯಾದಲ್ಲಿ ಕಂಡುಬಂದ ಬಿಕ್ಕಟ್ಟು ಇದಕ್ಕೆ ಸಾಕ್ಷಿ. ಅಮೆರಿಕ ಮತ್ತು ಐರೋಪ್ಯ ದೇಶಗಳ ಸಾವರಿನ್ ಸಾಲವಲಯಗಳಲ್ಲಿ ಇತ್ತೀಚೆಗೆ ಕಂಡುಬಂದ ಕುಸಿತಗಳೂ ಟೀಕೆಗೊಳಗಾಗಿವೆ; ಗ್ರೀಸ್, ಪೋರ್ಚುಗಲ್ ಮತ್ತು ಐರ್ಲೆಂಡ್ ದೇಶಗಳನ್ನು ‘ಕಳಪೆ’ ಸ್ಥಾನಮಾನಕ್ಕೆ ಇಳಿಸಿದ ಕಾರಣದಿಂದಾಗಿ, ಅಲ್ಲಿ ಸಾವರಿನ್-ಸಾಲ ಬಿಕ್ಕಟ್ಟು ತಲೆದೋರುವಂತಾಗಿದ್ದರ ಜತೆಗೆ, ನಿರುದ್ಯೋಗ ಸಮಸ್ಯೆ ಮುಂಚೂಣಿಗೆ ಬಂತು ಹಾಗೂ ಐರೋಪ್ಯ ವಲಯದಲ್ಲಿ ಅಸ್ಥಿರತೆ ಮೈದಳೆಯುವಂತಾಯಿತು. 1997ರಲ್ಲಿ ಏಷ್ಯಾ ವಲಯದ ದೇಶಗಳಲ್ಲಿ ಕಂಡುಬಂದ ಆರ್ಥಿಕ ಬಿಕ್ಕಟ್ಟನ್ನು ಮುನ್ನಂದಾಜಿಸುವಲ್ಲಿ ವಿಫಲವಾಗಿದ್ದಕ್ಕಾಗಿ ಹಾಗೂ ಈ ಘಟನಾವಳಿಯ ಸಂದರ್ಭದಲ್ಲಿ ಇಂಥ ದೇಶಗಳನ್ನು ಹಲವು ಹಂತಗಳಷ್ಟು ಕೆಳಗಿಳಿಸಿದ್ದಕ್ಕಾಗಿ, ಇಂಥ ಕ್ರೆಡಿಟ್ ರೇಟಿಂಗ್ ಏಜನ್ಸಿಗಳು ಟೀಕೆಗೊಳಗಾಗಿವೆ. ಭಾರತದ ಆರ್ಥಿಕ ಸಾಧನೆಗಳನ್ನು ಹಾಗೂ ಸಾವರಿನ್ ರೇಟಿಂಗ್​ನೊಂದಿಗೆ ಅದಕ್ಕೆ ಪರಸ್ಪರ ಸಂಬಂಧವಿಲ್ಲದಿರುವುದನ್ನು ಗುರುತಿಸುವಲ್ಲಿ ವಿಫಲವಾಗಿರುವುದು, ಬಹುತೇಕ ಭಾರತೀಯ ಆರ್ಥಶಾಸ್ತ್ರಜ್ಞರಿಗೆ ಕಿರಿಕಿರಿ ಉಂಟುಮಾಡಿದೆ. ರಷ್ಯಾ ಮತ್ತು ಚೀನಾ ತಮ್ಮದೇ ಆದ ರೇಟಿಂಗ್ ಏಜನ್ಸಿಗಳನ್ನು ಹುಟ್ಟುಹಾಕುವಂತಾಗಿದ್ದಕ್ಕೆ ಕೆಲ ರೇಟಿಂಗ್ ಏಜನ್ಸಿಗಳ ಇಂಥ ಸ್ವೇಚ್ಛಾನುಸಾರಿ ವರ್ತನೆಯೇ ಕಾರಣವಾಗಿಬಿಟ್ಟಿದೆ; ಖಠಿಚ್ಞಛಚ್ಟಛ – ಕಟಟ್ಟ’ಠ ರೇಟಿಂಗ್ ಏಜನ್ಸಿ 2014ರಲ್ಲಿ, ‘ಕಳಪೆ’ ಸ್ಥಾನಮಾನದಿಂದ ಕೇವಲ ಒಂದು ಹಂತದಷ್ಟು ಮೇಲೆ ಇರಿಸುವ ಮೂಲಕ ರಷ್ಯಾದ ಸಾವರಿನ್ ರೇಟಿಂಗ್ ಅನ್ನು ತಗ್ಗಿಸಿತು- ಇದು ಕ್ರಿಮಿಯಾ ಪ್ರದೇಶವು ರಷ್ಯಾದಿಂದ ಬೇರ್ಪಟ್ಟ ಕೆಲ ತಿಂಗಳ ನಂತರ ಸಂಭವಿಸಿದ ವಿದ್ಯಮಾನ. ‘ಇದು ರಾಜಕೀಯ ಪ್ರೇರಿತವಾದುದು’ ಎನ್ನುವ ಮೂಲಕ ರಷ್ಯಾ ಈ ಬದಲಾವಣೆಯನ್ನು ತಳ್ಳಿಹಾಕಿತು.

ಕೆಲವೊಂದು ರಾಷ್ಟ್ರಗಳು ತಮ್ಮ ಕುಂದುಕೊರತೆಗಳ ಹೊರತಾಗಿಯೂ ಇಂಥ ರೇಟಿಂಗ್​ಗಳ ಸಾಧನೆಗೆ ಇನ್ನಿಲ್ಲದ ಮಹತ್ವ ಕೊಡುತ್ತವೆ. ಇಂಥ ಸಂದರ್ಭದಲ್ಲಿ ಕಾಣಬರುವ ಹಿತಾಸಕ್ತಿಯ ಘರ್ಷಣೆಯನ್ನೇ ಪರಿಗಣಿಸಿ- ಇಂಥ ರೇಟಿಂಗ್ ಏಜನ್ಸಿಗಳು ರೇಟಿಂಗ್​ಗೆ ಹೊರತಾದ ಚಟುವಟಿಕೆಗಳ ಮೂಲಕವೇ ಗಣನೀಯ ಪ್ರಮಾಣದ ಆದಾಯವನ್ನು ಸಂಗ್ರಹಿಸುತ್ತವೆ. ಇದು ಹಿತಾಸಕ್ತಿಯ ಘರ್ಷಣೆಯೇ ಸರಿ. ನಮ್ಮ ಈ ಅಭಿವೃದ್ಧಿ-ಮುಖಿ ಪಯಣದಲ್ಲಿ ಇಂಥ ರೇಟಿಂಗ್ ಏಜನ್ಸಿಗಳನ್ನು, ಅದರಲ್ಲೂ ಮುಖ್ಯವಾಗಿ ದೇಶೀಯ ಏಜನ್ಸಿಗಳನ್ನು ನಾವು ಬಳಸಿಕೊಳ್ಳಬೇಕು; ನಮ್ಮ ಸಾಂಸ್ಥಿಕ (ಕಾಪೋರೇಟ್) ವಲಯವನ್ನು ಚೊಕ್ಕಗೊಳಿಸಲು ಈ ನಡೆ ನೆರವಾಗಬಲ್ಲದು. ಕ್ರೆಡಿಟ್ ರೇಟಿಂಗ್ ಏಜನ್ಸಿಗಳು ತಮ್ಮ ಗ್ರಾಹಕರಿಗೆ ರೇಟಿಂಗ್-ಹೊರತಾದ ಸಲಹಾ ಸೇವೆಗಳನ್ನು ಒದಗಿಸದಂತೆ, ತಮಗೆ ಬರಬೇಕಾದ ಲಾಭದಲ್ಲಿ ನಷ್ಟವಾದರೂ ಇಂಥ ಕ್ರಮಕ್ಕೆ ಮುಂದಾಗದಂತೆ ಅವನ್ನು ನಿರ್ಬಂಧಿಸುವಂಥ ಮಾಗೋಪಾಯಗಳನ್ನು ಸೆಬಿ ಕಂಡುಕೊಳ್ಳಲು ಸಾಧ್ಯವಿದೆ.

ಹೂಡಿಕೆದಾರರ ಹಿತರಕ್ಷಣೆಯ ನಿಟ್ಟಿನಲ್ಲಿ ಇದು ಅತ್ಯಗತ್ಯ. ಪೂರ್ವನಿಗದಿತ ನಿರ್ವಹಣಾ ಶುಲ್ಕದ ಮಾದರಿಯ ಅಳವಡಿಕೆಯನ್ನೂ ಈ ನಿಟ್ಟಿನಲ್ಲಿ ಪರಿಶೀಲಿಸಬಹುದು. ಹೀಗೆ ಮಾಡುವುದರಿಂದ, ಗುಣಮಟ್ಟದೊಂದಿಗೆ ರಾಜಿಮಾಡಿಕೊಂಡಿರುವವರನ್ನು ನಿಮೂಲಗೊಳಿಸಿದಂತಾಗುತ್ತದೆ. ಜತೆಗೆ, ಅಸಾಧಾರಣ ರೇಟಿಂಗ್​ಗಳು ಹಾಗೂ ಹಠಾತ್ ಕುಸಿತಗಳನ್ನು ಅತೀವ ಕಣ್ಗಾವಲಿಗೆ ಒಳಪಡಿಸುವ ಅಗತ್ಯವಿದೆ. ಲೆಕ್ಕಪರಿಶೋಧಕರ (ಆಡಿಟರ್​ಗಳ) ರೀತಿಯಲ್ಲೇ ರೇಟಿಂಗ್ ಏಜನ್ಸಿಗಳನ್ನೂ ನಿಯತವಾಗಿ ಬದಲಿಸುವಂಥ ಪರಿಪಾಠಕ್ಕೆ ಮುಂದಾಗುವಂತೆ ಕಾಪೋರೇಟ್ ವಲಯದವರನ್ನು ಉತ್ತೇಜಿಸಬೇಕಿದೆ. ‘ನೀಡಿಕೆದಾರ ಪಾವತಿಸುವ’ ಮಾದರಿಯನ್ನು ‘ಹೂಡಿಕೆದಾರ ಪಾವತಿಸುವ’ ಮಾದರಿಯಿಂದ ಬದಲಿಸಬೇಕಿದೆ, ಸಂಬಂಧಿತ ಶುಲ್ಕವನ್ನು ಮಾರುಕಟ್ಟೆ ನಿಯಂತ್ರಕರು ಪ್ರಮಾಣಾನುಸಾರಿಯಾಗಿಸಬೇಕಿದೆ ಅಥವಾ ಪ್ರಮಾಣಾನುಸಾರವಾಗಿ ನಿರ್ಷRಸಬೇಕಿದೆ. ಅದೇನೇ ಇರಲಿ, ತ್ರೖೆಮಾಸಿಕದಿಂದ ತ್ರೖೆಮಾಸಿಕಕ್ಕೆ ರೇಟಿಂಗ್​ಗಳ ಬೆನ್ನತ್ತಲು ಯತ್ನಿಸುವ ಬದಲಿಗೆ, ಪರಿಪೂರ್ಣ ಉದ್ಯೋಗಾವಕಾಶ ಹಾಗೂ ಹೊಸ ಮಾರ್ಪಾಟಿನಿಂದ ಕೂಡಿದ ಅರ್ಥಿಕತೆಯೊಂದನ್ನು ಅಭಿವೃದ್ಧಿಪಡಿಸುವುದರ ಕಡೆಗೆ ನಮ್ಮ ವಿತ್ತೀಯ ನೀತಿಗಳು ಹೆಚ್ಚಿನ ಒತ್ತು ನೀಡಬೇಕಿದೆ.

(ಲೇಖಕರು ಯುವನಾಯಕರು ಮತ್ತು ಲೋಕಸಭಾ ಸದಸ್ಯರು)

Leave a Reply

Your email address will not be published. Required fields are marked *

Back To Top