ಆಯುಷ್ಯ ಇರುವಾಗ ಸಾಯುವವರೆಗೆ ಬದುಕಲೇಬೇಕಲ್ಲ!

blank

| ಡಾ.ಕೆ.ಪಿ. ಪುತ್ತೂರಾಯ

ಇದು ಸಹಿಸಿಕೊಳ್ಳಲಾಗದ ವೃದ್ಯಾಪಕ್ಕೆ ಒಳಗಾಗಿ ಸಾಯಲಾಗದೆ ಸಾವಿನ ಕ್ಷಣವನ್ನೇ ಎದುರು ನೋಡುತ್ತಿರುವ ಹಾಸಿಗೆ ಹಿಡಿದಿರುವ ಓರ್ವ ವೃದ್ಧ ಮಹಿಳೆ ‘ಹೇಗಿದ್ದೀರಿ’ ಎಂಬ ಪ್ರಶ್ನೆಗೆ ಮಾರ್ವಿುಕವಾಗಿ ಹೇಳಿದ ಮಾತು. ಇದು ಆಕೆ ಒಬ್ಬಳ ಮಾತೇ ಅಲ್ಲ. ಇಂತಹ ಅಸಹಾಯಕ ಪರಿಸ್ಥಿತಿಗೆ ಒಳಗಾಗಿ ಕೊನೆಯ ದಿನಗಳನ್ನು ಎಣಿಸುತ್ತಿರುವ ಅನೇಕ ವೃದ್ಧರ ಮಾತು ಕೂಡ! ಇದೊಂದು ದಾರುಣ ಪರಿಸ್ಥಿತಿ. ಹಲ್ಲುಗಳು ಬಿದ್ದು ಹೋಗಿವೆ, ಬೆನ್ನು ಬಾಗಿದೆ ಕಣ್ಣು ಮಂಜಾಗಿದೆ, ಕಿವಿ ಮಂದವಾಗಿದೆ, ಕೈಕಾಲುಗಳು ಮಡಚಿಕೊಳ್ಳಲಾಗದ ಕಟ್ಟಿಗೆಯಂತೆ ಆಗಿವೆ. ಬೆನ್ನು ನೋವು, ಸೊಂಟ ನೋವು, ಮಂಡಿ ನೋವು ಎಲ್ಲವೂ ಒಮ್ಮೆಲೇ ಕಾಡುತ್ತಿವೆ.

ಮಂಚದಿಂದ ಎದ್ದೇಳಲೂ ಆಗುತ್ತಿಲ್ಲ! ಎದ್ದರೆ ಕುಳಿತುಕೊಳ್ಳಲಾಗದು, ಕೂತರೆ ಎದ್ದೇಳಲಾಗದು. ಯಾರಾದರೂ ಕೈ ಹಿಡಿದು ಎಬ್ಬಿಸಬೇಕು; ಮಲ ಮೂತ್ರ ಸ್ನಾನ ಮಾಡಿಸಬೇಕು. ಅವರು ಬರುವವರೆಗೆ ಎಲ್ಲವನ್ನೂ ತಡೆದಿಟ್ಟುಕೊಳ್ಳಬೇಕು. ಎಲ್ಲವೂ ಅವಲಂಬನಾಸ್ಪದ. ಹಾಗಂತ ಬಾಯಿ ರುಚಿಗೆ ಏನೂ ಕೊರತೆ ಇಲ್ಲ. ನಾಲಿಗೆ ತಿನ್ನುವ ಚಪಲ, ಕಾಲಕಾಲಕ್ಕೆ ಹಸಿವು. ಆದರೆ ಇವನ್ನೆಲ್ಲ ಪೂರೈಸುವವರು ಬೇಕಲ್ಲ! ಜೊತೆಯಲ್ಲಿ ಮಾತನಾಡಲು ಆಸೆ. ಆದರೆ ಮಾತನಾಡಿಸಲು ಯಾರಿಗೂ ಪುರುಸೊತ್ತು ಇಲ್ಲ. ಮೊಮ್ಮಕ್ಕಳು ಬಳಿ ಬರುತ್ತಿಲ್ಲ. ಕೇಳಿದರೆ ಅಜ್ಜಿ ವಾಸನೆ ಅಂತಾರೆ. ಜೊತೆಗೆ ಮಂಡಿ ನೋವಿಗೆ ಹಚ್ಚಿಕೊಂಡಿರುವ ತೈಲಗಳ ವಾಸನೆ ಬೇರೆ. ಹಾಗೆಂದು ಬುದ್ಧಿ ಸರಿಯಾಗಿದೆ.

ಅತ್ತೆಗೆ ಕೇಳಿಸುವಂತೆ ಸೊಸೆ ಹೇಳುವ ಚುಚ್ಚು ಮಾತುಗಳನ್ನು ಕೇಳಿಸಿಕೊಳ್ಳಲೇಬೇಕು. ‘ಊರಿನ ಮುದುಕಿಯರಿಗೆಲ್ಲ ಸಾವು ಬಂತು ಈ ಮುದುಕಿಗೆ ಯಾವಾಗಬರುತ್ತದೊ ನಾ ಬೇರೆ ಕಾಣೆ. ಯಾವ ಪುರುಷಾರ್ಥಕ್ಕಾದರೂ ಇನ್ನೂ ಬದುಕಿದಿಯೋ ಈ ಮುದಿ ಗೂಬೆ’ ಇತ್ಯಾದಿ. ಈ ಮಾತುಗಳನ್ನು ಕೇಳಿಸಿಕೊಂಡೂ ಕೇಳಿಸಿಕೊಳ್ಳದ ಹಾಗೆ ಇದ್ದುಬಿಡಬೇಕು. ಈ ಅಜ್ಜಿಗೆ ಸೊಸೆ ಕೊಟ್ಟಾಗಷ್ಟೆ ಊಟ. ಮಧ್ಯೆ ಏನೂ ಕೇಳುವಂತಿಲ್ಲ. ಕೊಟ್ಟಿದ್ದನ್ನಷ್ಟೇ ತಿನ್ನಬೇಕು. ಹೆಚ್ಚೇನೂ ಕೇಳುವಂತಿಲ್ಲ. ಕೇಳಿದರೆ ಸಹಸ್ರನಾಮ. ಮೇಲಾಗಿ ಈ ಮುದುಕಿ ಜೊತೆ ಮಾತನಾಡಲು ಯಾರೂ ಇಲ್ಲ. ಕಷ್ಟ ಸುಖ ಕೇಳಿಸಿಕೊಳ್ಳಲು ಯಾರೂ ಇಲ್ಲ. ಎಲ್ಲವನ್ನು ನುಂಗಿಕೊಂಡು ಉಸಿರೆಳೆಯುತ್ತಿರಬೇಕು.

ಹೆಚ್ಚೆಂದರೆ ತನಗೆ ತಾನೆ ಪಿಸುಗುಟ್ಟಿ ಹೇಳಿಕೊಳ್ಳಬಹುದು. ಹೇ ದೇವ, ಇಷ್ಟೊಂದು ಆಯಸ್ಸನ್ನು ಏಕೆ ಕೊಟ್ಟೆ? ಆಯುಷ್ಯದ ಜೊತೆ ಆರೋಗ್ಯವನ್ನು ಕೊಡಬಾರದಿತ್ತೆ? ಆರೋಗ್ಯವಿಲ್ಲದ ಆಯುಷ್ಯ ಇದ್ದರೆಷ್ಟು ಇರದಿದ್ದರೆಷ್ಟು! ಅನ್ಯರಿಗೆ ಹೊರೆ ಭಾರವಾಗಿ ನಮಗೆ ನಾವೇ ಅಸಹ್ಯವಾಗಿ ಭೂಮಿಗೆ ಭಾರವಾಗಿ ಒಂದು ದಂಡಪಿಂಡವಾಗಿ ಬದುಕುವ ಬದುಕು ಇದೆಯಲ್ಲ; ಇದನ್ನು ಯಾರಿಗೂ ಕೊಡದಿರು ತಂದೆ. ಹಲ್ಲು ಉದುರುವ ಮುನ್ನ, ಬೆನ್ನು ಬಾಗುವ ಮುನ್ನ ಕರೆದುಕೋ ನನ್ನ… ಹೌದು ಇಂತಹ ದಯನೀಯ ಪರಿಸ್ಥಿತಿಗೆ ಉತ್ತರವೂ ಇಲ್ಲ, ಪರಿಹಾರವೂ ಇಲ್ಲ. ಆರೋಗ್ಯ ಸಂಪೂರ್ಣ ಕೈಕೊಟ್ಟಾಗ, ಆಯುಷ್ಯ ಇನ್ನೂ ಇರುವಾಗ ಸಾಯುವವರೆಗೆ ಬದುಕಲೇಬೇಕಲ್ಲ! ಆದರೆ ಹೇಗೆ ಬದುಕಬೇಕು? ಆತ್ಮಹತ್ಯೆ ಮಾಡಿಕೊಳ್ಳಬಹುದೇ? ಇದು ಒಲ್ಲದ ಸಲ್ಲದ ಯೋಚನೆ. ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆ ಪರಿಹಾರವಾಗುತ್ತಿದ್ದಲ್ಲಿ ಈ ಜಗತ್ತಿನಲ್ಲಿ ಯಾರೂ ಬದುಕಿ ಉಳಿಯುತ್ತಿರಲಿಲ್ಲ! ಅಥವಾ ಭೀಷ್ಮಾಚಾರ್ಯರಂತೆ ನಮಗೆ ಇಚ್ಛಾ ಮರಣಿಯಾಗಲೂ ಸಾಧ್ಯವಿಲ್ಲ.

ತನ್ನಿಂದ ಯಾರಿಗೂ ಏನೊಂದೂ ಉಪಕಾರವಿಲ್ಲವೆಂದ ಮೇಲೆ ಯಾರಿಗೋಸ್ಕರ ಎಷ್ಟು ದಿನ ಬದುಕಲಿ? ಹೇಗೆ ಬದುಕಲಿ? ಎಂಬ ಯೋಚನೆ ಇಂತಹ ವೃದ್ಧರಿಗೆ ಬರುವುದು ಸಹಜ ಸ್ವಾಭಾವಿಕ. ಇಂತಹ ಸಂದರ್ಭದಲ್ಲಿ ಯಾವಾಗ, ಎಲ್ಲಿ, ಹೇಗೆ ಸಾಯಬೇಕು ಎಂಬುದು ಯಾರ ಅಧೀನದಲ್ಲಿಯೂ ಇಲ್ಲದ ವಿಷಯವಾಗಿರುವಾಗ ಸಾವು ಬಂದಾಗ ಸತ್ತರಾಯ್ತು ಅದರ ಬಗ್ಗೆ ಚಿಂತಿಸಿ ಏನು ಪ್ರಯೋಜನ ಎಂಬ ಧೋರಣೆಯೇ ಸಮ್ಮತವಾದೀತು. ಅಂತೆಯೇ ವೃದ್ಧಾಪ್ಯ ಒಂದು ಶಾಪವಲ್ಲ. ದೀರ್ಘಾಯುಗಳೆಲ್ಲ ಹಾದು ಹೋಗಲೇಬೇಕಾದ ಒಂದು ಅನಿವಾರ್ಯ ಸ್ಥಿತಿ ಎಂಬುದನ್ನು ಮನದಟ್ಟು ಮಾಡಿಕೊಂಡು ಸಮಾಧಾನ ಪಟ್ಟುಕೊಳ್ಳಬೇಕು. ಹಾಗಂತ ನೀನೆಂದೂ ಸಾಯದಿರು ಎಂಬುದಕ್ಕಿಂತ ದೊಡ್ಡ ಶಾಪ ಬೇರೊಂದಿಲ್ಲವೆಂಬ ಸತ್ಯವನ್ನು ನೆನಪಿಸಿಕೊಳ್ಳುತ್ತಿರಬೇಕು.

ಇಂತಹ ಸಂದರ್ಭದಲ್ಲಿ ನಮ್ಮ ಆಸೆ ಆಕಾಂಕ್ಷೆಗಳನ್ನು, ಅಪೇಕ್ಷೆ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳುತ್ತಾ ವೈರಾಗ್ಯದ ಮನಸ್ಥಿತಿಯನ್ನು ತಾಳುತ್ತ ಕೊನೆ ಕ್ಷಣಕ್ಕಾಗಿ ಕಾಯುವುದೇ ಸೂಕ್ತ. ನಿರೀಕ್ಷಿತವಾದುದಕ್ಕಲ್ಲ, ಅನಿರೀಕ್ಷಿತವಾದುದನ್ನು ಎದುರಿಸಲು ಸನ್ನದ್ಧರಾಗಿರುವುದೇ ವೃದ್ಧಾಪ್ಯವನ್ನು ಎದುರಿಸುವ ಕಲೆ. ಅಂತೆಯೇ ದಿನನಿತ್ಯ ಭಗವಂತನಲ್ಲಿ ಈ ರೀತಿ ನಿವೇದನೆಯನ್ನು ಮಾಡಿಕೊಳ್ಳಬಹುದು. ‘ಹೇ ದೇವ, ನೂರೊಂದು ಕಷ್ಟಗಳ ಹಣೆಯಲ್ಲಿ ವಿಧಿ ಬರೆಯೆ ಎಲ್ಲವನ್ನು ಸೈರಿಸಿರುವೆ ನಾ ತುಟಿಯ ಬಿಚ್ಚದಲೆ, ಆದರೆ ಕಾಡಿಬೇಡಿ ಬದುಕುವ ಬದುಕನ್ನು ಹಾಗೂ ನರಳಿ ನರಳಿ ಸಾಯುವ ಸಾವನ್ನು ಮಾತ್ರ ಕೊಡದಿರು ತಂದೆ.

ದ್ವಿಚಕ್ರ ವಾಹನ ವಿಮೆಗೆ ಆನ್​ಲೈನ್​ ಮೊರೆ ಹೋಗ್ತೀರಾ? ಹಾಗಿದ್ರೆ ಈ 5 ವಿಷಯಗಳು ನಿಮಗೆ ಗೊತ್ತಿರಲಿ!

Share This Article

ಗ್ಯಾಸ್​ಗೆ ವಾಸನೆಯೇ ಇಲ್ಲ! ಹೀಗಿದ್ದರೂ​ ಸಿಲಿಂಡರ್​ ಲೀಕ್​ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್​ ಮಾತ್ರ​ | Gas Leakage

Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ…

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …