18 C
Bengaluru
Monday, January 20, 2020

ಉದ್ಯೋಗದಲ್ಲಿ ಸಂಗೀತ ನಿನಾದ

Latest News

ವಿಜಯವಾಣಿ ಸಂಪಾದಕೀಯ | ಸಹಜತೆಗೆ ಮರಳಲಿ ಕಾಶ್ಮೀರ

ಸಂವಿಧಾನದ 370ನೇ ವಿಧಿ ಅನುಸಾರ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಜಮ್ಮು-ಕಾಶ್ಮೀರ ಅಕ್ಟೋಬರ್ 31ರಿಂದಲೇ ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವಕ್ಕೆ ಬಂದಿದೆ. ಆದರೆ,...

ಬ್ರಿಟನ್ ಅರಮನೆಯಲ್ಲಿ ಬಿರುಗಾಳಿ: ರಾಜಮನೆತನದ ಬಿಕ್ಕಟ್ಟಿಗೆ ರಾಣಿ ಎಲಿಜಬೆತ್ ಪರಿಹಾರ ಸೂತ್ರ

ಲಂಡನ್: ರಾಜಮನೆತನ ತೊರೆಯುವ ನಿರ್ಧಾರದಿಂದ ರಾಜಕುಮಾರ ಹ್ಯಾರಿ ದಂಪತಿ ಹಿಂದೆ ಸರಿಯದ ಕಾರಣ ಬ್ರಿಟನ್ ರಾಜಕುಟುಂಬದ ಬಿರುಗಾಳಿ ತಣ್ಣಗಾಗಿಸಲು ರಾಣಿ 2ನೇ ಎಲಿಜಬೆತ್...

ಆಚಾರ್ಯ ಶ್ರೀ ಶಂಕರ ಚಿತ್ರೀಕರಣಕ್ಕೆ ಮುಹೂರ್ತ

ಶೃಂಗೇರಿ: ಬೆಂಗಳೂರಿನ ‘ಯಮ್ಮನೂರು ಕ್ರಿಯೇಷನ್ಸ್ ಪ್ರೖೆವೇಟ್ ಲಿಮಿಟೆಡ್’ನ ‘ಆಚಾರ್ಯ ಶ್ರೀ ಶಂಕರ’ ಚಿತ್ರೀಕರಣ ಮುಹೂರ್ತ ಭಾನುವಾರ ತುಂಗಾ ನದಿ ತೀರದಲ್ಲಿ ನೆರವೇರಿತು. ಚಿತ್ರೀಕರಣದ ಆರಂಭ...

ಮನೋಲ್ಲಾಸ|ಸಹಾಯ ಯೋಗ್ಯವಾಗಿರಲಿ

ಜೀವನದಲ್ಲಿ ನಾವು ಅನೇಕರಿಗೆ ಹಣ ಕೊಡುವ ಪ್ರಸಂಗ ಬರುತ್ತದೆ. ರಸ್ತೆಯಲ್ಲಿ ಹೋಗುವಾಗ ಅಥವಾ ಪ್ರಯಾಣ ಮಾಡುವಾಗ ಭಿಕ್ಷೆ ಬೇಡುವವರು ಎದುರಾಗುತ್ತಾರೆ. ಹೆಂಗಸರು, ಅದರಲ್ಲಿಯೂ...

PHOTOS| ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಂಡ ಪುಷ್ಪಪ್ರಿಯರು

ಬೆಂಗಳೂರು: ಲಾಲ್​ಬಾಗ್​ನಲ್ಲಿ ಜ.26ರ ವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನವು ಪುಷ್ಪಪ್ರಿಯರನ್ನು ಕೈ ಬೀಸಿ ಕರೆಯುತ್ತಿದ್ದು, ಭಾನುವಾರವೂ ಸಾವಿರಾರು ಮಂದಿ ಭೇಟಿ ನೀಡಿ ಪುಷ್ಪಗಳಿಂದ...

ಸಂಗೀತ ಕ್ಷೇತ್ರದಲ್ಲಿ ಕೆಲವೇ ಕೆಲವು ಅವಕಾಶಗಳು ಇವೆ ಎಂಬ ತಪ್ಪು ಕಲ್ಪನೆ ಹಲವರಿಗಿದೆ. ಆದ್ದರಿಂದ ಸ್ವಂತ ಖುಷಿಗಾಗಿ ಮಾತ್ರ ಇದನ್ನು ಆಯ್ದುಕೊಳ್ಳುವವರೇ ಹೆಚ್ಚು. ಆದರೆ ಗಾಯನ ಅಥವಾ ಸಂಗೀತ ವಾದನಗಳಲ್ಲಿ ಅಭಿರುಚಿಯುಳ್ಳವರು, ಅದನ್ನೇ ಕರಿಯರ್ ಆಗಿ ಸ್ವೀಕರಿಸಿ, ಲಭ್ಯ ಇರುವ ಕೋರ್ಸ್ ಪಡೆದುಕೊಂಡದ್ದೇ ಆದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಂಡು ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಳ್ಳಬಹುದು.

| ಸುಚೇತನಾ

ಸಂಗೀತವೆಂಬುದು ಕೇವಲ ರಾಗ ತಾಳಗಳ ಲೆಕ್ಕಾಚಾರವಲ್ಲ. ಅದು ಅನುದಿನದ ಸ್ಮರಣೆ. ಶ್ರದ್ಧೆ, ಭಕ್ತಿ ಹಾಗೂ ಸತತ ಪರಿಶ್ರಮ ಈ ಮೂರು ಅಂಶಗಳು ಮೈಗೂಡಿದಾಗ ಮಾತ್ರ ಸಂಗೀತ ಸಾಧನೆ ಮಾಡಲು ಸಾಧ್ಯ. ಉಳಿದ ಕಲೆಗಳಂತೆ ಸಂಗೀತ ಕೂಡ ಎಲ್ಲರಿಗೂ ಒಲಿಯುವುದಿಲ್ಲ. ಆದರೆ ಒಲಿದರೆ ಅದು ಎಂದಿಗೂ ಕೈಬಿಡುವುದಿಲ್ಲ, ಉಜ್ವಲ ಭವಿಷ್ಯಕ್ಕೂ ಇದು ದಾರಿದೀಪವಾಗಬಲ್ಲುದು.

ಸಂಗೀತ ಕಲಿತರೆ ಹೆಚ್ಚೆಂದರೆ ಖುದ್ದಾಗಿ ಅಥವಾ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರಾಗಬಹುದು ಎಂಬ ಕಲ್ಪನೆ ಇದೆ. ಇಲ್ಲವೇ, ಕ್ಲಬ್​ಗಳಲ್ಲಿ ಡಿಸ್ಕೊ ಜಾಕಿ (ಡಿಜೆ) ಆಗಬಹುದು ಎಂದುಕೊಳ್ಳುವವರೇ ಹೆಚ್ಚು. ಡಿಸ್ಕೊ ಜಾಕಿಗೂ ಈಗ ಬಹಳ ಬೇಡಿಕೆ ಇದ್ದರೂ ಈ ವೃತ್ತಿಯನ್ನು ಆಯ್ದುಕೊಳ್ಳಲು ಎಲ್ಲರಿಗೂ ಇಷ್ಟವಾಗುವುದಿಲ್ಲ. ಕಿರುತೆರೆ ಮತ್ತು ಬೆಳ್ಳಿತೆರೆ (ಸಿನಿಮಾ) ಸಂಗೀತಗಾರರಿಗೆ ಉದ್ಯೋಗ ನೀಡುವ ದೊಡ್ಡ ಕ್ಷೇತ್ರವಾಗಿದೆ. ಇದರ ಹೊರತಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸಂಗೀತಕ್ಕೀಗ ಭಾರಿ ಡಿಮಾಂಡ್ ಶುರುವಾಗಿದೆ. ಅಷ್ಟೇ ಏಕೆ, ವಿದೇಶದಲ್ಲಿ ಉದ್ಯೋಗ ಪಡೆಯಬೇಕು ಎಂಬ ಆಕಾಂಕ್ಷಿಗಳಿಗೂ ಸಂಗೀತ ದಾರಿ ತೋರಿಸಲಿದೆ. ಇದೇ ಕಾರಣಕ್ಕೆ ಇಂದು ಅನೇಕ ವಿಶ್ವವಿದ್ಯಾಲಯಗಳು ಸಂಗೀತದ ಕೋರ್ಸ್ ಆರಂಭಿಸಿವೆ.

ಹಾಗಿದ್ದರೆ ಸಂಗೀತಗಾರರಿಗೆ ಏನೇನು ಅವಕಾಶಗಳು ಇವೆ ಎಂಬುದನ್ನು ನೋಡೋಣ ಬನ್ನಿ.

ಸಂಗೀತ ಚಿಕಿತ್ಸಕ (ಮ್ಯೂಸಿಕ್ ಥೆರಪಿಸ್ಟ್): 2ನೇ ಮಹಾಯುದ್ಧದ ಬಳಿಕ ಹಲವು ಮಂದಿ ಸಂಗೀತಗಾರರು, ಅಮೆರಿಕದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ, ಮಾನಸಿಕ ಹಾಗೂ ದೈಹಿಕವಾಗಿ ಆಘಾತಕ್ಕೊಳಗಾಗಿದ್ದವರನ್ನು ಅದರಿಂದ ಹೊರತರಿಸಲು ಸಂಗೀತ ಕಾರ್ಯಕ್ರಮಗಳನ್ನು ನೀಡಿ ಯಶಸ್ವಿಯಾಗಿದ್ದರು. ಅಲ್ಲಿಂದಲೇ ಮ್ಯೂಸಿಕ್ ಥೆರಪಿ ಪದ್ಧತಿ ಹೆಚ್ಚು ಪ್ರಸಿದ್ಧಿ ಪಡೆಯಿತು. ಸಂಗೀತ ಎಲ್ಲರಿಗೆ ಅರ್ಥವಾಗುವ ಒಂದು ಸಾರ್ವತ್ರಿಕ ಭಾಷೆ. ತುಂಬಾ ಸಂತೋಷದಿಂದ ಇರುವಾಗ ಸಂಗೀತ ಕೇಳಿದರೆ ಏನೋ ಖುಷಿ, ಹಾಗೆಯೇ, ಬೇಸರದಿಂದ ಇರುವಾಗಲೂ ಇದು ನಮ್ಮ ಭಾವನೆಗೆ ಸ್ಪಂದಿಸುತ್ತದೆ. ಈ ಗುಣದಿಂದಾಗಿಯೇ ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಮ್ಯೂಸಿಕ್ ಥೆರಪಿ ತುಂಬಾ ಜನಪ್ರಿಯಗೊಳ್ಳುತ್ತಿದೆ. ಮಾನಸಿಕವಾಗಿ ಕುಗ್ಗಿರುವ ವ್ಯಕ್ತಿಗಳಿಗೆ ಸಂಗೀತವನ್ನು ಮನೋಚಿಕಿತ್ಸೆಯ ರೂಪದಲ್ಲಿ ಬಳಸಲಾಗುತ್ತಿದೆ. ಮನಸ್ಸಿನೊಳಗಿನ ತುಮುಲಗಳನ್ನು ಹೊರಹಾಕಲು ಸಾಧ್ಯವಾಗದೇ, ಅದನ್ನು ಹತ್ತಿಕ್ಕಿಕೊಂಡಿರುವವರಿಗೆ ಸಂಗೀತ ಥೆರಪಿ ದಿವ್ಯ ಔಷಧವಾಗಿದೆ. ಅಂಗವೈಕಲ್ಯದ ಸಮಸ್ಯೆ ಇರುವ ಮಕ್ಕಳಲ್ಲಿ ಅವರ ಚಲನಾಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ಅವರ ಸಂವಹನಕ್ಕೆ ಕೂಡ ಸಂಗೀತ ಚಿಕಿತ್ಸೆ ಹಲವೆಡೆ ಬಳಕೆಯಾಗುತ್ತಿದೆ.

ಸಂಗೀತವನ್ನು ಆಲಿಸುತ್ತಿದ್ದರೆ, ಮೆದುಳಿನಲ್ಲಿ ಎಂಡ್ರೊಪಿನ್ಸ್ ಬಿಡುಗಡೆಯಾಗುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು. ಯಮನ್, ಭೈರವಿ, ಕಲ್ಯಾಣ್ ಮುಂತಾದ ರಾಗಗಳನ್ನು ಮೂಳೆ ಸಂಬಂಧಿ ರೋಗ ಗುಣಪಡಿಸಲು; ತಬಲಾ, ಡೋಲು, ತಮಟೆ ವಾದ್ಯಗಳನ್ನು, ಖಿನ್ನತೆ ಗುಣಪಡಿಸಲು; ಸಿತಾರ್, ಕೊಳಲು, ಗಿಟಾರ್ ಮುಂತಾದವುಗಳನ್ನು ಮಾನಸಿಕ ಸಮತೋಲನ ಕಳೆದುಕೊಂಡ ಜನರನ್ನು ಗುಣಪಡಿಸಲು ಬಳಸಲಾಗುತ್ತಿದೆ.

ಮ್ಯೂಸಿಕ್ ಥೆರಪಿ ಕೋರ್ಸ್ ಮಾಡಿಕೊಂಡರೆ, ಆಸ್ಪತ್ರೆ, ಪುನರ್ವಸತಿ ಕೇಂದ್ರ, ಮಾನಸಿಕ ಆರೋಗ್ಯ ಘಟಕ, ಡೇ-ಕೇರ್, ನರ್ಸಿಂಗ್ ಹೋಂ ಸೇರಿದಂತೆ ಅನೇಕ ಕಡೆಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬಹುದು. ಬೆಂಗಳೂರು ಮೆಡಿಕಲ್ ಕಾಲೇಜಿನ ಸಂಶೋಧನಾ ವಿಭಾಗ, ವಾಣಿವಿಲಾಸ ಆಸ್ಪತ್ರೆ, ಹುಬ್ಬಳ್ಳಿಯ ಕರ್ನಾಟಕ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮೈಸೂರಿನ ಚೆಲುವಾಂಬ ಆಸ್ಪತ್ರೆ ಸೇರಿದಂತೆ ಹಲವೆಡೆ ಸರ್ಕಾರವು ಮ್ಯೂಸಿಕ್ ಥೆರಪಿ ಸೆಂಟರ್​ನ ಘಟಕಗಳನ್ನು ತೆರೆದಿದೆ. ವಿದೇಶಗಳಲ್ಲಿಯೂ ಮ್ಯೂಸಿಕ್ ಥೆರಪಿ ಜನಪ್ರಿಯ ಆಗುತ್ತಿರುವ ಕಾರಣ, ಅಲ್ಲಿಯೂ ಭಾರತೀಯ ಶಾಸ್ತ್ರೀಯ ಸಂಗೀತಗಾರರಿಗೆ ಬೇಡಿಕೆ ಕುದುರಿದೆ. ಅಷ್ಟೇ ಅಲ್ಲದೇ, ವಿದೇಶದ ಕೆಲವು ಶಾಲಾ- ಕಾಲೇಜುಗಳಲ್ಲಿ ಭಾರತೀಯ ಸಂಗೀತ ಶಿಕ್ಷಕರಿಗೆ ಅಪಾರ ಬೇಡಿಕೆಯೂ ಇದೆ.

ಮ್ಯೂಸಿಕ್ ಥೆರಪಿ ಕೋರ್ಸ್

ಪೋಸ್ಟ್ ಗ್ರಾಜ್ಯುಯೇಷನ್ ಡಿಪ್ಲೊಮಾ ಇನ್ ಮ್ಯೂಸಿಕ್ ಥೆರಪಿ, ಸರ್ಟಿಫಿಕೇಟ್ ಪೋ›ಗ್ರಾಮ್ ಇನ್ ಮ್ಯೂಸಿಕ್ ಥೆರಪಿ ಕೋರ್ಸ್​ಗಳನ್ನು ಕೆಲವು ಕಾಲೇಜುಗಳು ಆರಂಭಿಸಿವೆ. ಈ ಕೋರ್ಸ್​ಗಳನ್ನು ಪೂರೈಸಿದವರು, ಶಿಕ್ಷಕರಾಗಿ ಮಾತ್ರವಲ್ಲದೆ, ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ, ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ, ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ಸೇವೆ ಸಲ್ಲಿಸಬಹುದು.

ಸಂಗೀತ ನಿರ್ದೇಶಕ: ಸಂಗೀತ ನಿರ್ದೇಶಕ ಎಂದಾಕ್ಷಣ ಎಲ್ಲರ ಚಿತ್ತ ಸಿನಿಮಾದತ್ತ ಹೊರಳುತ್ತದೆ. ಸಿನಿಮಾ ಕ್ಷೇತ್ರದಲ್ಲಿ ಇವರಿಗೆ ಅಪಾರ ಬೇಡಿಕೆ ಇದೆ ಎನ್ನುವುದು ನಿಜವೇ. ಆದರೆ ಎಲ್ಲರಿಗೂ ಈ ಕ್ಷೇತ್ರ ಅಷ್ಟು ಸುಲಭದಲ್ಲಿ ದೊರಕಲಾರದು. ಹಾಗಂತ ನಿರಾಸೆ ಹೊಂದಬೇಕಿಲ್ಲ. ಈಗಂತೂ ಹೆಚ್ಚೂ ಕಮ್ಮಿ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಆರ್ಕೆಸ್ಟ್ರಾದ್ದೇ ಕಾರುಬಾರು.

ಆರ್ಕೆಸ್ಟ್ರಾ ತಂಡಗಳಲ್ಲಿ ಈಗ ಭಾರಿ ಪೈಪೋಟಿಯೂ ಇದೆ. ಆದ್ದರಿಂದ ಉತ್ತಮ ಸಂಗೀತ ನಿರ್ದೇಶಕನಿದ್ದರೆ, ಅಂಥ ತಂಡ ಉತ್ತಮ ಕಾರ್ಯಕ್ರಮಗಳನ್ನು ನೀಡಲು ಸಾಧ್ಯ. ಆ ತಂಡಗಳು ಅಧಿಕ ಬೇಡಿಕೆ ಕುದುರಿಸಿಕೊಳ್ಳುತ್ತವೆ. ಆದ್ದರಿಂದ ಪ್ರಸಿದ್ಧ ತಂಡಗಳು ಒಳ್ಳೆಯ ಸಂಗೀತ ನಿರ್ದೇಶಕರನ್ನು ಬಯಸುತ್ತವೆೆ. ಇದಲ್ಲದೇ ರೇಡಿಯೋ ಕಾರ್ಯಕ್ರಮಗಳಲ್ಲಿಯೂ ಸಂಗೀತ ನಿರ್ದೇಶಕರ ಅವಶ್ಯಕತೆ ಇದೆ. ಮ್ಯೂಸಿಕ್ ಪ್ರೋಗ್ರಾಮಿಂಗ್​ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿಗಳನ್ನು ಕೆಲವು ಕಾಲೇಜು, ವಿಶ್ವವಿದ್ಯಾಲಯಗಳು ನೀಡುತ್ತಿದ್ದು, ಅದನ್ನು ಮುಗಿಸಿದರೆ ಉದ್ಯೋಗ ಅವಕಾಶಗಳು ಅರಸಿ ಬರುತ್ತವೆ.

ಇವುಗಳ ಹೊರತಾಗಿಯೂ ಸಂಗೀತ ಬಲ್ಲವರಿಗೆ ಕಂಟೆಂಟ್ ಮ್ಯಾನೇಜರ್, ಪ್ರೋಗ್ರಾಂ ಕೋ ಆರ್ಡಿನೇಟರ್, ಆನ್​ಲೈನ್ ಟೀಚರ್ ಸೇರಿದಂತೆ ಹಲವು ಅವಕಾಶಗಳೂ ಇವೆ. ಅವುಗಳಿಗಾಗಿಯೇ ಪ್ರತ್ಯೇಕ ಕೋರ್ಸ್​ಗಳೂ ಇವೆ. ಕೆಲವು ಕರ್ನಾಟಕದಲ್ಲಿದ್ದರೆ, ಇನ್ನು ಕೆಲವು ಕೋರ್ಸ್​ಗಳು ಕರ್ನಾಟಕದ ಆಚೆಯೂ ಇವೆ. ಇಂಟರ್​ನೆಟ್​ನಲ್ಲಿ ಇವುಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಲಭ್ಯ.

ನೇವಿಯಲ್ಲೂ ನೌಕರಿ

ಭಾರತೀಯ ನೌಕಾಪಡೆಯಲ್ಲಿಯೂ ಸಂಗೀತ ಬಲ್ಲವರಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿ ‘ಮ್ಯೂಸಿಕ್’ ವಿಭಾಗವಿದ್ದು, ಅಲ್ಲಿ ಸೇಲರ್ಸ್ ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತದೆ. ಶಾಸ್ತ್ರೀಯ ಸಂಗೀತದ ಆಳವಾದ ಜ್ಞಾನದ ಜತೆಗೆ ಯಾವುದಾದರೂ ವಿದೇಶಿ ಸಂಗೀತ ಸಾಧನಗಳನ್ನು ನುಡಿಸಲು ತಿಳಿದಿರುವಂಥವರಿಗೆ ಇಲ್ಲಿ ಅವಕಾಶವಿದೆ. ವಿಂಡ್ ಇನ್​ಸ್ಟ್ರುಮೆಂಟ್, ಕೀ ಬೋರ್ಡ್, ತಬಲಾ, ಮೃದಂಗ, ಪಖವಾಜ, ಡೋಲಕ್ ಇಂಥ ಸಂಗೀತ ಸಾಧನಗಳಲ್ಲಿ ನೈಪುಣ್ಯರಾಗಿರಬೇಕು. ತಮ್ಮ ಸಂಗೀತ ಅರ್ಹತೆಗೆ ಸಂಬಂಧಪಟ್ಟಂತೆ ಅಂಗೀಕೃತ ಸಂಗೀತ ಸಂಸ್ಥೆಯಿಂದ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

ಪ್ರೊಡ್ಯೂಸರ್: ಸಂಗೀತ ಕ್ಷೇತ್ರದಲ್ಲಿ ಪೊ›ಡ್ಯೂಸರ್ ಆದವರು ಒಂದು ಮ್ಯೂಸಿಕ್ ರೆರ್ಕಾಡಿಂಗ್​ಗೆ ಬೇಕಿರುವ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಮ್ಯೂಸಿಕ್ ಮತ್ತು ಮ್ಯೂಸಿಕ್ ಪೊ›ಡಕ್ಷನ್ ಹಾಗೂ ಇಂಜಿನಿಯರಿಂಗ್ ಅಥವಾ ಮ್ಯೂಸಿಕ್ ಬಿಸಿನೆಸ್​ನಲ್ಲಿ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಪೊ›ಡ್ಯೂಸರ್ ಆಗಿ ಕೆಲಸ ನಿರ್ವಹಿಸಬಹುದು.

ರೆಕಾರ್ಡಿಂಗ್ ಇಂಜಿನಿಯರ್

ರೆಕಾರ್ಡಿಂಗ್ ಇಂಜಿನಿಯರ್ಸ್​ಗೆ ಸಿನಿಮಾ ಮಾತ್ರವಲ್ಲದೇ, ಸಂಗೀತದ ಆಲ್ಬಂ ತಯಾರಿಸುವಾಗ, ರಿಯಾಲಿಟಿ ಷೋ, ಆರ್ಕೆಸ್ಟ್ರಾ ಸೇರಿದಂತೆ ಹಲವು ಕಡೆಗಳಲ್ಲಿ ಬೇಡಿಕೆ ಇದೆ. ಕಾರ್ಯಕ್ರಮಗಳ ಲೈವ್ ಷೋ ಕೊಡುವಾಗ ಇವರ ಪಾತ್ರ ಬಹುಮುಖ್ಯ. ಈ ಉದ್ಯೋಗಕ್ಕೆ ಮ್ಯೂಸಿಕ್ ರೆಕಾರ್ಡಿಂಗ್, ಮಿಕ್ಸಿಂಗ್ ಮತ್ತು ಎಡಿಟಿಂಗ್ ಕೌಶಲ ಹೊಂದಿರಬೇಕು. ಗಾಯನ ಮತ್ತು ವಾದನ ಎರಡರಲ್ಲಿಯೂ ಜ್ಞಾನ ಅಗತ್ಯ. ಜತೆಗೆ ಡಿಜಿಟಲ್ ರೆಕಾರ್ಡಿಂಗ್ ತಿಳಿವಳಿಕೆಯೂ ಬೇಕು. ಮಾಹಿತಿ ವಿಜ್ಞಾನ ಅಥವಾ ಅದಕ್ಕೆ ಸಮನಾದ ವಿಷಯದಲ್ಲಿ ಪದವಿ ಹೊಂದಿದ್ದರೆ ವಿವಿಧೆಡೆ ಅವಕಾಶಗಳು ಲಭ್ಯ.

ಆನ್​ಲೈನ್ ಕೋರ್ಸ್

ವೃತ್ತಿನಿರತ ವೈದ್ಯರಿಗೆ, ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ, ಲೈಫ್ ಸೈನ್ಸಸ್, ಬಯೋಕೆಮಿಸ್ಟ್ರಿ ಮತ್ತು ಮ್ಯೂಸಿಕ್​ಪದವೀಧರರು, ಎಂಡೋಕ್ರೖೆನಾಲಜಿಸ್ಟ್ ಮತ್ತು ಮನೋರೋಗ ತಜ್ಞರಿಗೆ ಆನ್​ಲೈನ್ ಕೋರ್ಸ್​ಗಳೂ ಲಭ್ಯ ಇವೆ. ಬಿಹೇವಿಯರಲ್ ಸೈನ್ಸ್, ಸೈಕಾಲಜಿ, ಅನಾಟಮಿ, ಬಯೋಲಜಿ ಮತ್ತು ಫಿಸಿಯಾಲಜಿ ವಿಷಯಗಳನ್ನು ಅಧ್ಯಯನ ಮಾಡಿದವರಿಗೆ ಈ ಕೋರ್ಸ್ ಬಲು ಸುಲಭದಲ್ಲಿ ಅರ್ಥವಾಗಲಿದ್ದು, ಇದರಲ್ಲಿ ಸಂಗೀತ ಚಿಕಿತ್ಸಾ ವಿಧಾನದ ಪ್ರಾಥಮಿಕ ಜ್ಞಾನವನ್ನು ಪಡೆದುಕೊಳ್ಳಬಹುದಾಗಿದೆ.

ಸ್ಟುಡಿಯೋ ಮ್ಯಾನೇಜರ್

ಮ್ಯೂಸಿಕ್ ಸ್ಟುಡಿಯೋ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಅದನ್ನು ನೋಡಿಕೊಳ್ಳಲು ಅಂದರೆ ಮ್ಯಾನೇಜ್ ಮಾಡಲು ಸಂಗೀತವನ್ನು ಆಳವಾಗಿ ಬಲ್ಲವರ ಅಗತ್ಯ ಇರುತ್ತದೆ. ಗ್ರಾಹಕರು ಕೇಳುವ ಸಂಗೀತ ಸಾಧನಗಳು, ಸ್ಟುಡಿಯೋ ರೆಕಾರ್ಡಿಂಗ್ ಇತ್ಯಾದಿಗಳ ಬಗ್ಗೆ ಜ್ಞಾನವನ್ನು ಇವರು ಹೊಂದಿರಬೇಕಾಗುತ್ತದೆ. ಇವುಗಳ ಜತೆ ಸ್ವಲ್ಪ ವ್ಯವಹಾರ ಜ್ಞಾನ, ಮಾತನಾಡುವ ಕೌಶಲ್ಯವಿದ್ದರೆ ಸಂಗೀತ ಪರಿಕರಗಳ ಬಿಜಿನೆಸ್​ವುನ್ ಕೂಡ ಆಗಬಹುದು. ಅದೇ ರೀತಿ, ಮ್ಯೂಸಿಕ್ ಆಲ್ಬಂ ಮಾಡಬಯಸುವ ಸಂಗೀತಗಾರರು ಇದರ ಬಗ್ಗೆ ಪ್ರಚಾರ ಮಾಡಲು ಅಥವಾ ಆಲ್ಬಂ ಬಿಡುಗಡೆಯ ಉಸ್ತುವಾರಿ ವಹಿಸಿಕೊಳ್ಳಲು ನುರಿತ ‘ಮ್ಯೂಸಿಕ್ ಏಜೆಂಟ್’ಗಳನ್ನು ಹುಡುಕುತ್ತಿರುತ್ತಾರೆ. ಮ್ಯೂಸಿಕ್ ಆಲ್ಬಂ ಮಾರುಕಟ್ಟೆ ಬಹು ವಿಸ್ತಾರಗೊಳ್ಳುತ್ತಿರುವ ಈ ಸಮಯದಲ್ಲಿ ‘ಮ್ಯೂಸಿಕ್ ಏಜೆಂಟ್’ಗಳ ಬೇಡಿಕೆಯೂ ಹೆಚ್ಚಾಗುತ್ತಿದೆ.

ಕಂಪೋಸಿಂಗ್

ಗಾಯನ ಮತ್ತು ವಾದನಗಳ ಬಗ್ಗೆ ಜ್ಞಾನ ಇರುವವರಿಗೆ ಮ್ಯೂಸಿಕ್ ಕಂಪೋಸಿಂಗ್ ಕ್ಷೇತ್ರ ಹೇಳಿ ಮಾಡಿಸಿದ್ದು. ಸಂಗೀತ ಸ್ವರಗಳ ಏರಿಳಿತ, ಎಷ್ಟು ಪ್ರಮಾಣದ ಶಬ್ದ ಎಲ್ಲಿ ಅಗತ್ಯವಿದೆ ಎಂಬುದನ್ನು ತಿಳಿದು ಕೆಲಸ ನಿರ್ವಹಿಸುವ ಚಾಕಚಕ್ಯತೆ ಈ ಹುದ್ದೆಗೆ ಅಗತ್ಯವಿದೆ. ಸಂಗೀತದಲ್ಲಿ ವಿಭಿನ್ನ ಪ್ರಯೋಗ ಮಾಡಿ ಕೇಳುಗರಿಗೆ ಮುದ ನೀಡುವಂಥ ಸಂಗೀತ ಕಂಪೋಸ್ ಮಾಡುವ ಸಾಮರ್ಥ್ಯ ಇರುವವರಿಗೆ ವಿಪುಲ ಅವಕಾಶಗಳೂ ಇವೆ. ಇದಕ್ಕಾ ಗಿಯೇ ಹಲವು ಕೋರ್ಸ್​ಗಳಿವೆ.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...