More

  ಸರ್ಕಾರದ ಯೋಜನೆ ಸದ್ಬಳಕೆಯಾಗಲಿ: ಗ್ರಾಮೀಣ ಬ್ಯಾಂಕ್ ಆರ್ಥಿಕ ಸಲಹೆಗಾರ್ತಿ ಅಂಬಿಕಾ ಮಂಜುನಾಥ್ ಹೇಳಿಕೆ

  ಮುಳಬಾಗಿಲು : ಗ್ರಾಮೀಣಾಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗ ಮಾಡಿಕೊಳ್ಳುವ ಕೌಶಲತೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಕೆನರಾ ಮತ್ತು ಗ್ರಾಮೀಣ ಬ್ಯಾಂಕ್ ಆರ್ಥಿಕ ಸಲಹೆಗಾರ್ತಿ ಅಂಬಿಕಾ ಮಂಜುನಾಥ್ ಹೇಳಿದರು.

  ತಾಲೂಕಿನ ಹನುಮನಹಳ್ಳಿ ಗ್ರಾಮಪಂಚಾಯಿತಿಯಿಂದ ಬುಧವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿ, ಆರ್ಥಿಕ ಸಾಕ್ಷರತೆಗಾಗಿ ಬ್ಯಾಂಕ್ ಸಾಲ ಪಡೆದು ಪ್ರಾಮಾಣಿಕವಾಗಿ ಮರು ಪಾವತಿ ಮಾಡಿದರೆ ಅಂತಹ ವ್ಯಕ್ತಿಗಳನ್ನು ಗುರುತಿಸಿ ಬ್ಯಾಂಕ್ ಮನೆ ಬಾಗಿಲಿಗೆ ಬಂದು ಸಾಲ ನೀಡುತ್ತದೆ ಎಂದರು.

  ಮಕ್ಕಳ ಉನ್ನತ ಶಿಕ್ಷಣಕ್ಕೆ ವಾಣಿಜ್ಯ ಬ್ಯಾಂಕುಗಳಿಂದ ಸಾಲ ನೀಡಲಾಗುವುದು. ಇದನ್ನು ಉಪಯೋಗಿಸಿಕೊಂಡು ವೃತ್ತಿಪರ ಕೋರ್ಸ್ ಕಲಿಯಬೇಕು. ಬ್ಯಾಂಕ್ ಅಥವಾ ತಾಪಂ ಕಾರ್ಯಾಲಯದಲ್ಲಿರುವ ಆರ್ಥಿಕ ಸಾಕ್ಷರತಾ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದರು.

  ಹವಾಮಾನ ಆಧಾರಿತ ಕೃಷಿ ವಿಮಾ ಯೋಜನೆ ಬದಲಾಯಿಸಿ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಜಾರಿಗೆ ತಂದಿದ್ದು, ಕೃಷಿಕರು ಬೆಳೆ ವಿಮೆಯನ್ನು ಮಾಡಿಸಿಕೊಂಡರೆ ಅತಿವೃಷ್ಟಿ, ಅನಾವೃಷ್ಟಿ ಸೇರಿ ಬೆಳೆನಷ್ಟ ಸಂದರ್ಭದಲ್ಲಿ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಕಡ್ಡಾಯವಾಗಿ ಕೃಷಿಕರು ಈ ಯೋಜನೆ ಉಪಯೋಗಿಸಿಕೊಳ್ಳಬೇಕು ಎಂದರು.

  ಪಿಎಂಇಜಿಪಿ ಯೋಜನೆಯಲ್ಲಿ ವಾಣಿಜ್ಯ ಬ್ಯಾಂಕುಗಳು ಸಾಲ ನೀಡುತ್ತಿದ್ದು, ಇದನ್ನು ಸದುಪಯೋಗಮಾಡಿಕೊಂಡು ವೈಯಕ್ತಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
  ನೋಡಲ್ ಅಧಿಕಾರಿ ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಜಿ.ಟಿ.ರಾಮಯ್ಯ, ತಾಪಂ ಮಾಜಿ ಅಧ್ಯಕ್ಷ ವಿ.ರಘುಪತಿರೆಡ್ಡಿ, ಗ್ರಾಪಂ ಅಧ್ಯಕ್ಷ ಬಿ.ಕೆ.ಮೋಹನ್, ಉಪಾಧ್ಯಕ್ಷೆ ರೋಜಾ, ಮಾಜಿ ಉಪಾಧ್ಯಕ್ಷ ಸುಬ್ರಮಣಿ ಗ್ರಾಮಸಭೆಯ ಸೌಲಭ್ಯ ವಿವರಿಸಿದರು.

  ಗ್ರಾಪಂ ಸದಸ್ಯರಾದ ಭೀಮಾಪುರ ಶಶಿಕಲಾ, ಬಂಡಾರಹಳ್ಳಿ ಲಲಿತಾ, ಮಂಜುನಾಥ್, ನಾಗರಾಜ್, ಜ್ಯೋತಿ, ವೆಂಕಟರಾಮಪ್ಪ, ನಾರಾಯಣಪ್ಪ, ವೆಂಕಟಲಕ್ಷ್ಮಮ್ಮ ಪಿಡಿಒ ಮಹದೇವಪ್ಪ ಪೂಜಾರ್, ನಿವೃತ್ತ ಶಿಕ್ಷಕ ವಿಠಲ್‌ರಾವ್ ಇದ್ದರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts