16 C
Bangalore
Saturday, December 7, 2019

ಇಂದಿನಿಂದ ಬಾಬಾ ರಾಮ್‌ದೇವ್ ಯೋಗೋತ್ಸವ

Latest News

ಎಲ್ಲ ಸಮುದಾಯಗಳ ನಾಯಕ ಬಾಬಾಸಾಹೇಬ್

ಚಿಕ್ಕಬಳ್ಳಾಪುರ: ಪುತ್ಥಳಿಗೆ ಮಾಲಾರ್ಪಣೆ, ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನ ಶುಕ್ರವಾರ ನಡೆಯಿತು....

ಮತಯಂತ್ರಕ್ಕೆ ಪೊಲೀಸ್ ಸರ್ಪಗಾವಲು

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಿರೇಕೆರೂರ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಾಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನ ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಸರ್ಪ...

ಅಳಿದುಳಿದ ಉಳ್ಳಾಗಡ್ಡಿಗೂ ಡಿಮಾಂಡ್

ರಾಣೆಬೆನ್ನೂರ: ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಬೆಲೆ ಕಳೆದುಕೊಂಡಿದ್ದ ಉಳ್ಳಾಗಡ್ಡಿ ಬೆಳೆಗೆ ಇದೀಗ ಭಾರಿ ಡಿಮಾಂಡ್ ಬಂದಿದೆ. ದರದಲ್ಲಿ ಕೂಡ ಭಾರಿ...

ಸಿಸಿಐನಿಂದ ಹತ್ತಿ ಖರೀದಿ ಶುರು

ಲಕ್ಷ್ಮೇಶ್ವರ: ಒಂದು ವಾರದಿಂದ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಭಾರತೀಯ ಹತ್ತಿ ನಿಗಮ (ಸಿಸಿಐ)ದವರು ಬೆಂಬಲ ಬೆಲೆಯಡಿ ಹತ್ತಿ...

ಕೆಲಗೇರಿ ಕೆರೆ ಸಂರಕ್ಷಣೆಗೆ ಕ್ರಮ

ಧಾರವಾಡ: ನಗರದ ಇತಿಹಾಸ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಮತ್ತು ಸಾಧನಕೇರಿ ಕೆರೆಗಳನ್ನು ಸಂರಕ್ಷಿಸಿ ಅಬಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಸೌಂದಯೀಕರಣಗೊಳಿಸಿ ಪ್ರವಾಸಿತಾಣಗಳಾಗಿ ರೂಪಿಸಲು...

ಉಡುಪಿ: ಐದು ದಿನಗಳ ಯೋಗೋತ್ಸವಕ್ಕೆ ಕೃಷ್ಣನೂರು ಉಡುಪಿ ಸಜ್ಜುಗೊಂಡಿದ್ದು, ನಗರ ಕೇಸರಿ ಧ್ವಜಗಳಿಂದ ಅಲಂಕೃತಗೊಂಡಿದೆ. ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ನ.16ರಿಂದ 20ರ ವರೆಗೆ ಬೃಹತ್ ಯೋಗ ಚಿಕಿತ್ಸೆ ಮತ್ತು ಯೋಗ ಶಿಬಿರ ನಡೆಸಿಕೊಡಲು ಯೋಗಗುರು ಬಾಬಾ ರಾಮ್‌ದೇವ್ ಉಡುಪಿಗೆ ಶುಕ್ರವಾರ ಆಗಮಿಸಿದ್ದಾರೆ.

ಬೆಂಗಳೂರಿನಲ್ಲಿ ವಿಮಾನ ಸಮಯ ಬದಲಾವಣೆಯಿಂದಾಗಿ ವಿಳಂಬವಾಗಿ ಆಗಮಿಸಿದ ರಾಮ್‌ದೇವ್ ಅವರಿಗೆ ಕಲ್ಸಂಕ ವೃತ್ತದಲ್ಲಿ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಅಲ್ಲಿಂದ ಕೃಷ್ಣಮಠ ಪಾರ್ಕಿಂಗ್ ಪ್ರದೇಶದವರೆಗೆ ಕಾರಿನಲ್ಲಿ ನಿಂತುಕೊಂಡು ಕೈ ಮುಗಿಯುತ್ತ ಆಗಮಿಸಿದರು. ಶಾಸಕ ಕೆ.ರಘುಪತಿ ಭಟ್, ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಜತೆಗಿದ್ದರು. ರಾಜ್ಯ, ಜಿಲ್ಲಾಮಟ್ಟದ ಪತಂಜಲಿ ಸಮಿತಿ ಪದಾಧಿಕಾರಿಗಳು, ಯೋಗ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಕೃಷ್ಣಮಠದಲ್ಲಿ ದೇವರ ದರ್ಶನ ಬಳಿಕ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉಭಯ ಕುಶಲೋಪರಿ ನಡೆಸಿದರು. ಆಸ್ಥಾ ವಾಹಿನಿ, ಸಂಗೀತಕಾರರು, ಆಯುರ್ವೇದ ವೈದ್ಯರು, ಯೋಗ ತಜ್ಞರು ಸೇರಿದಂತೆ ವಿವಿಧ ವಿಭಾಗವನ್ನು ಒಳಗೊಂಡ 60 ಮಂದಿಯ ತಂಡ ಮತ್ತು 300 ಕಾರ್ಯಕರ್ತರು ಹರಿದ್ವಾರದಿಂದ ಉಡುಪಿಗೆ ಆಗಮಿಸಿದ್ದಾರೆ.

ಭದ್ರತಾ ವ್ಯವಸ್ಥೆ: ಬೃಹತ್ ಯೋಗ ಶಿಬಿರಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಬಿಗು ಭದ್ರತಾ ವ್ಯವಸ್ಥೆ ಮಾಡಿದೆ. 1 ಜಿಲ್ಲಾ ಸಶಸ್ತ್ರ ಮೀಸಲು ಪಡೆ, 1 ರಾಜ್ಯ ಸಶಸ್ತ್ರ ಪೊಲೀಸ್ ಮೀಸಲು ಪಡೆ ತುಕಡಿ, 50ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಬ್ಬರು ಡಿವೈಎಸ್‌ಪಿ ಭದ್ರತಾ ವ್ಯವಸ್ಥೆ ಜವಬ್ಧಾರಿ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ವಿಜಯವಾಣಿಗೆ ತಿಳಿಸಿದ್ದಾರೆ. ಬಾಬಾ ರಾಮ್‌ದೇವ್‌ರಿಗೆ ಸಿಆರ್‌ಪಿಎಫ್ ಭದ್ರತೆ ಇದ್ದು, ಯೋಧರು ರಕ್ಷಣೆ ನೀಡುತ್ತಿದ್ದಾರೆ.

ಏನೇನು ಕಾರ್ಯಕ್ರಮ?: ನ.16ರಿಂದ 20ರ ವರೆಗೆ ಬೆಳಗ್ಗೆ 5ರಿಂದ 7.30ರವರೆಗೆ ಯೋಗ ಶಿಬಿರ ನಡೆಯಲಿದ್ದು, ಇದಕ್ಕಾಗಿ ಕೃಷ್ಣ ಮಠ ಪಾರ್ಕಿಂಗ್ ಪ್ರದೇಶದಲ್ಲಿ 20*40 ಉದ್ದಗಲದ 12 ಅಡಿ ಎತ್ತರದ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. 18ರಂದು ಸಾಯಂಕಾಲ 4.30ಕ್ಕೆ ವಿದ್ಯಾರ್ಥಿಗಳು, ಮಹಿಳೆಯರು, ಯುವವೃಂದವನ್ನು ಉದ್ದೇಶಿಸಿ ರಾಮ್‌ದೇವ್ ಮಾತನಾಡಲಿದ್ದಾರೆ. 19ರಂದು ಸಾಯಂಕಾಲ 4ಕ್ಕೆ ರಾಜಾಂಗಣದಲ್ಲಿ ಸಂತ ಸಮ್ಮೇಳನ ನಡೆಯಲಿದೆ.

ಒಲಿಂಪಿಕ್ಸ್‌ಗೆ ಯೋಗ ಸೇರ್ಪಡೆ ಗುರಿ: ಅಂತಾರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್‌ಗೆ ಕೇಂದ್ರ ಸರ್ಕಾರ ನನ್ನನ್ನು ಚೇರ್ಮನ್ ಆಗಿ ನೇಮಕ ಮಾಡಿದ್ದು, ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಯೋಗವನ್ನು ಸೇರ್ಪಡೆಗೊಳಿಸುವುದೇ ನನ್ನ ಗುರಿ ಎಂದು ಯೋಗಗುರು ಬಾಬಾ ರಾಮ್‌ದೇವ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಶುಕ್ರವಾರವಷ್ಟೇ ಫೆಡರೇಶನ್ ಅಸ್ತಿತ್ವಕ್ಕೆ ಬಂದಿದ್ದು, ನನ್ನನ್ನು ಮೊದಲ ಚೇರ್ಮನ್ ಆಗಿ ಆಯ್ಕೆ ಮಾಡಲಾಗಿದೆ. ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್, ಒಲಿಂಪಿಕ್ಸ್‌ನಲ್ಲಿ ಯೋಗ ಸೇರ್ಪಡೆ ನನ್ನ ಮೊದಲ ಆದ್ಯತೆ ಎಂದರು.
ಮಧ್ವಾಚಾರ್ಯ ಪ್ರತಿಷ್ಠಾಪಿತ ಭಗವಂತ ಶ್ರೀ ಕೃಷ್ಣನ ನಾಡು ಉಡುಪಿಯಲ್ಲಿ ಯೋಗ ಶಿಬಿರ ನಡೆಸುವುದು ಸೌಭಾಗ್ಯ. ಪಲಿಮಾರು ಶ್ರೀಗಳ ಅಪೇಕ್ಷೆಯಂತೆ ಆಗಮಿಸಿದ್ದೇನೆ. ಹತ್ತು ವರ್ಷಗಳಿಂದ ಯೋಗ ಶಿಕ್ಷಣ ಮತ್ತು ಶಿಬಿರ ನಡೆಸಿಕೊಂಡು ಬಂದಿದ್ದು, ಇಲ್ಲಿವರೆಗೆ 2-3 ದಿನವಷ್ಟೇ ಶಿಬಿರ ನಡೆಸಿದ್ದೆ. ಇದೇ ಮೊದಲ ಬಾರಿಗೆ ಉಡುಪಿಯಲ್ಲಿ 5 ದಿನಗಳ ಶಿಬಿರ ಆಯೋಜಿಸಿ ಸಂಪೂರ್ಣವಾಗಿ ಭಾಗವಹಿಸುತ್ತಿದ್ದೇನೆ ಎಂದರು.
ಪತಂಜಲಿ ಸಮಿತಿ ಪ್ರಮುಖರಾದ ಭವರ್‌ಲಾಲ್ ಆರ್ಯ, ಕರಂಬಳ್ಳಿ ಶಿವರಾಂ ಶೆಟ್ಟಿ, ಪ್ರಹ್ಲಾದ ರಾವ್, ಸುಜಾತಾ, ಮಾರ್ಲ, ರಾಘವೇಂದ್ರ ಆಚಾರ್ಯ ಸುದ್ದಿಗೋಷ್ಠಿಯಲ್ಲಿದ್ದರು.

ರಾಮಮಂದಿರಕ್ಕೆ ಮೋದಿ ಶಿಲಾನ್ಯಾಸ ಮಾಡಲಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ರಾಮನವಮಿಯಂದು ದೇಶದ ಸಮಸ್ತ ಹಿಂದುಗಳ ಪ್ರತಿನಿಧಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಶಿಲಾನ್ಯಾಸ ಮಾಡಬೇಕು ಎಂದು ರಾಮ್‌ದೇವ್ ಆಶಯ ವ್ಯಕ್ತಪಡಿಸಿದರು. ಸರ್ಕಾರದ ವತಿಯಿಂದ ರಾಮಮಂದಿರ ನಿರ್ಮಾಣ ಸಾಧ್ಯವಿಲ್ಲವಾದರೆ ಸಂಪೂರ್ಣ ಸಹಕಾರ ನೀಡಲಿ ಎಂದರು.
ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕೆ 5 ಎಕರೆ ಭೂಮಿಯನ್ನು ಆಯೋಧ್ಯೆಯಲ್ಲಿರುವ 64 ಎಕರೆ ಜಾಗದಲ್ಲಿ ಕೊಡಬಾರದು. ಮುಂದಿನ ದಿನಗಳಲ್ಲಿ ವಿವಾದ ಮತ್ತು ಸಂಘರ್ಷಗಳಿಗೆ ಇದು ಕಾರಣವಾಗಬಹುದು. ಹೊರಭಾಗದಲ್ಲಿ ಭವ್ಯ ಮಸೀದಿ ನಿರ್ಮಿಸಿದರೆ ಗೌರವಿಸುತ್ತೇವೆ ಎಂದು ಹೇಳಿದರು. ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಭೂಮಿ ನೀಡಬೇಕು ಎಂದು ಹೇಳುವ ಓವೈಸಿ ಮನಸ್ಸಿನಲ್ಲಿ ವಿಷ ತುಂಬಿಕೊಂಡಿರುವ ವ್ಯಕ್ತಿ. ಆತ ಹಿಂದು ಮುಸ್ಲಿಮರ ನಡುವೆ ಕಂದಕ ಸೃಷ್ಟಿ, ಜಗಳ ಹುಟ್ಟಿಸಲು ಹೊಂಚು ಹಾಕುವ ಮೂಲಕ ಇನ್ನೊಬ್ಬ ಜಿನ್ನಾ ಆಗುವ ಕನಸು ಕಾಣುತ್ತಿದ್ದಾನೆ ಎಂದು ರಾಮ್‌ದೇವ್ ಟೀಕಿಸಿದರು. ಹಿಂದೆ ಏನೇನು ನಡೆದಿದೆ ಎಂಬುದು ಬೇಡ. ಹಾಗೆ ನೋಡಿದಲ್ಲಿ ಭಾರತದಲ್ಲಿ ಶೇ.99 ಮಂದಿ ಮುಸ್ಲಿಮರು ಮತಾಂತರಗೊಂಡವರೇ ಇದ್ದಾರೆ. ನಮ್ಮ ದೇಶದ ಹಿಂದು- ಮುಸ್ಲಿಮರ ಡಿಎನ್‌ಎ ಒಂದೇ ಆಗಿದೆ, ದೇಶವು ಒಂದೇ ನಾವೆಲ್ಲರೂ ಸಾಮರಸ್ಯದಿಂದ ಒಂದಾಗಿ ಬದುಕಬೇಕು ಎಂದರು.

ಉಚಿತ ಯೋಗ ಶಿಬಿರದಲ್ಲಿ ಭಾಗವಹಿಸಿ 5ರಿಂದ 7 ಕೆ.ಜಿ ತೂಕ ಕಡಿಮೆ ಮಾಡಿಕೊಳ್ಳಿ. ಮಧುಮೇಹ, ರಕ್ತದೊತ್ತಡ, ಥೈರಾಯ್ಡ, ಒತ್ತಡ ಸಮಸ್ಯೆಗೆ ಪರಿಹಾರ ಕಾಣಬಹುದು. ಯೋಗಾಭ್ಯಾಸದಿಂದ ಶೇ.99ರಷ್ಟು ಔಷಧ ಮುಕ್ತರಾಗಿ ಜೀವನ ನಡೆಸಬಹುದು. ಯೋಗದ ಮೂಲಕ ಪ್ರಪಂಚವನ್ನು ರೋಗ ಮುಕ್ತ, ಒತ್ತಡ ಮುಕ್ತ, ಹಿಂಸೆ ಮುಕ್ತ, ಯುದ್ದ ಮುಕ್ತವನ್ನಾಗಿಸಬಹುದು. ಕ್ಯಾನ್ಸರ್ ಗುಣಪಡಿಸುವ ತಾಕತ್ತು ಯೋಗಕ್ಕಿದೆ.
– ಬಾಬಾ ರಾಮ್‌ದೇವ್, ಯೋಗಗುರು

Stay connected

278,739FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...