ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಕಾರ್ಯಕ್ರಮ ಜನಮನ್ನಣೆ ಪಡೆದಿರುವ ಕಾರ್ಯಕ್ರಮವಾಗಿದೆ. ಬಿಗ್ಬಾಸ್ ಕನ್ನಡ ಸೀಸನ್ 11 ಆರಂಭದ ಒಂದೆರಡು ವಾರ ಬರೀ ಜಗಳಗಳೇ ನಡೆದಿದ್ದವು.
ಕಳೆದ ವಾರ ಮಾತೃವಿಯೋಗ ಕಂಡ ನಟ ಸುದೀಪ್ ಅವರು, ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯನ್ನು ಮಾತ್ರ ನಡೆಸಿಕೊಡಲು ಸಾಧ್ಯವಾಯಿತು. ತಮ್ಮ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಸಹ ಕಾರ್ಯಕ್ರಮವನ್ನು ಅರ್ಧಕ್ಕೆ ಬಿಡದೆ, ಬಹುತೇಕ ಸಮಯ ವೇದಿಕೆಯ ಮೇಲೆ ನಿಂತು, ಸ್ಪರ್ಧಿಗಳ ತಪ್ಪುಗಳನ್ನು ತಿದ್ದಿ-ಬುದ್ದಿ ಹೇಳಿದವರು ಕಿಚ್ಚ. ಇದೀಗ ಮೂರನೇ ಪಂಚಾಯತಿ ನಡೆಸಲು ಆಗಮಿಸಲಿರುವ ಸುದೀಪ್ ಈ ವಾರ ಮನೆಯ ಯಾರೆಲ್ಲಾ ಸ್ಪರ್ಧಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿತ್ತು. ಇದಕ್ಕೆ ಬಿಗ್ಬಾಸ್ ತಂಡ ಇದೀಗ ಉತ್ತರ ನೀಡಿದೆ.
ದೊಡ್ಮನೆ ಬೊಂಬೆಗಳಿಗೆ ಕೀ ಕೊಡಲು ಬಂದ್ರು ಯೋಗರಾಜ್ ಭಟ್!
ಬಿಗ್ ಬಾಸ್ ಕನ್ನಡ ಸೀಸನ್ 11 | ಇಂದು ರಾತ್ರಿ 9:00#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/pbH1Sahrxi
— Colors Kannada (@ColorsKannada) October 26, 2024
ವಾರದ ಕಥೆ ಕಿಚ್ಚನ ಜೊತೆ’ ವಾರಾಂತ್ಯದ ಈ ಎಪಿಸೋಡ್ನಲ್ಲಿ ಕಿಚ್ಚ ಕಾಣಿಸಿಕಕೊಳ್ಳುತ್ತಿಲ್ಲ. ಸುದೀಪ್ ಅವರ ಬದಲಾಗಿ ಬೇರೆ ಕಲಾವಿದರಿ ಬಂದು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈಗಾಗಲೇ ಒಂದು ಪ್ರೊಮೋ ರಿಲೀಸ್ ಆಗಿದ್ದು, ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಬಿಗ್ಬಾಸ್ ಮನೆಗೆ ವಿಕಟ ಕವಿ ಎಂದೇ ಹೆಸರಾಗಿರುವ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಹೋಗಿದ್ದಾರೆ. ಭಟ್ಟರು ತಮ್ಮ ಎಂದಿನ ಶೈಲಿಯಲ್ಲಿ ತಮ್ಮ ಒನ್ ಲೈನರ್ಗಳಿಂದ, ದೇಶಾವರಿ ಮಾತುಗಳಿಂದ ಮನೆಯ ಸದಸ್ಯರನ್ನು ನಗಿಸಿದ್ದಾರೆ.
ಪ್ರತಿ ಸಂಡೆ ನಡೆಯುತ್ತಿದ್ದ ಸೂಪರ್ ಸಂಡೆ ವಿಥ್ ಕಿಚ್ಚ ಕೂಡ ಈ ವಾರ ಇರುವುದಿಲ್ಲ. ಈ ಕಾರ್ಯಕ್ರಮವನ್ನು ನಿರೂಪಕ ಮತ್ತು ನಟ ಸೃಜನ್ ಲೋಕೇಶ್ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ. ಈ ಕುರಿತಾಗಿ ಯಾವುದೇ ಖಚಿತ ಮಾಹಿತಿ ಇಲ್ಲ.
ಬಿಗ್ಬಾಸ್ ಕನ್ನಡ ಸೀಸನ್ 11 ಆರಂಭದ ಒಂದೆರಡು ವಾರ ಬರೀ ಜಗಳಗಳೇ ನಡೆದಿದ್ದವು. ಜಗಳ-ಬೈದಾಟ, ಹೊಡೆದಾಟಗಳನ್ನು ನೋಡಿ ಪ್ರೇಕ್ಷಕರು ಸುಸ್ತಾಗಿದ್ದರು. ಜಗದೀಶ್ ಹಾಗೂ ರಂಜಿತ್ ಅನ್ನು ಹೊರಗೆ ಹಾಕಿದ ಬಿಗ್ಬಾಸ್ ಈಗ ಹನುಮಂತನನ್ನು ವೈಲ್ಡ್ ಕಾರ್ಡ್ ಮೂಲಕ ಒಳಗೆ ಕಳಿಸಿದ್ದಾರೆ. ಹನುಮಂತ ಒಳಗೆ ಹೋದ ಬಳಿಕ ಮನೆಯ ವಾತಾವರಣ ತುಸು ಲೈಟ್ ಆಗಿದೆ.
BBKS11: ವಾರದ 3ನೇ ಪಂಚಾಯತಿಯಲ್ಲಿ ಈ ಮೂವರಿಗೆ ಕಿಚ್ಚನ ಕ್ಲಾಸ್ ಪಕ್ಕಾ!