Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಗರ್ಭಿಣಿಯರ ಆರೋಗ್ಯಪಾಲನೆಯ ಮುದ್ರೆಗಳು

Friday, 10.08.2018, 3:29 PM       No Comments

| ಗೋಪಾಲಕೃಷ್ಣ ದೇಲಂಪಾಡಿ

ಗರ್ಭ ಧರಿಸಿದವರು ಏನನ್ನೂ ಮಾಡದೆ ರೆಸ್ಟ್ ಪಡೆಯಿರಿ ಎಂದು ಅನೇಕ ತಜ್ಞರು ಸಲಹೆ ನೀಡುತ್ತಾರೆ. ಹಾಗೆಂದ ಮಾತ್ರಕ್ಕೆ ಸುಮ್ಮನೆ ಮಲಗುವುದು ಬೇಡ. ಕುಳಿತಲ್ಲೇ ಒಂದಷ್ಟು ಮುದ್ರೆಗಳ ಅಭ್ಯಾಸ ಮಾಡಿದರೆ ಆರೋಗ್ಯವೂ ಲಭ್ಯ. ಜನಿಸುವ ಮಗುವಿನ ಮೇಲೆ ಧನಾತ್ಮಕ ಪರಿಣಾಮವೂ ಸಾಧ್ಯ. ಬನ್ನಿ, ಮುದ್ರೆ ಕಲಿಯೋಣ.

ಪ್ರಾಣಮುದ್ರೆ

ಪ್ರಾಣಶಕ್ತಿ ಹೆಚ್ಚಿಸಲು ಅಗತ್ಯವಾಗಿ ಮಾಡಬೇಕಾದ ಮುದ್ರೆ ಇದು. ಇದರಿಂದ ಚೈತನ್ಯಶಕ್ತಿ ಹೆಚ್ಚುತ್ತದೆ. ದೈಹಿಕ ದುರ್ಬಲತೆ ನಿವಾರಣೆಯಾಗುತ್ತದೆ. ಬ್ಯಾಟರಿಯನ್ನು ವಿದ್ಯುತ್ ಮೂಲಕ ಚಾರ್ಜ್ ಮಾಡಿದಾಗ ಅದರಲ್ಲಿ ಶಕ್ತಿ ತುಂಬುವಂತೆ ಪ್ರಾಣಮುದ್ರೆ ಮಾಡಿದಾಗ ದೇಹದಲ್ಲಿ ಚೈತನ್ಯಶಕ್ತಿ ತುಂಬುತ್ತದೆ.

ವಿಧಾನ: ಕಿರುಬೆರಳು ಮತ್ತು ಉಂಗುರ ಬೆರಳಿನ ಅಗ್ರಭಾಗದ ತುದಿಯನ್ನು ಹೆಬ್ಬೆರಳಿಗೆ ಮೃದುವಾಗಿ ರ್ಸ³ಸಿ. ಉಳಿದ ತೋರುಬೆರಳು ಮತ್ತು ಮಧ್ಯದ ಬೆರಳುಗಳನ್ನು ನೇರವಾಗಿಸಿ. ಇಷ್ಟದೇವರು ಅಥವಾ ಓಂ ಹಿರಣ್ಯಗರ್ಭಾಯ ನಮಃ ಎಂದು ಮಂತ್ರವನ್ನು ಪಠಿಸುತ್ತ ಸುಮಾರು 15-20 ನಿಮಿಷಗಳ ಕಾಲ ಪ್ರಾಣಮುದ್ರೆಯ ಅಭ್ಯಾಸ ನಡೆಸಿ.

ಪ್ರಯೋಜನ: ಪ್ರಾಣಶಕ್ತಿ ಹೆಚ್ಚಾಗುತ್ತದೆ. ನಿತ್ರಾಣ ಕಡಿಮೆ ಆಗುತ್ತದೆ. ವಿಟಮಿನ್ ಕೊರತೆಯನ್ನು ನೀಗಿಸಲು ಸಹಕಾರಿಯಾಗುತ್ತದೆ. ದಣಿವು, ಖಿನ್ನತೆಯನ್ನು ನಿವಾರಿಸಬಹುದು. ಉಪವಾಸ ಸಮಯದಲ್ಲಿ ಹಸಿವು ಬಾಯಾರಿಕೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಾಲುಗಳಲ್ಲಿಯೂ ನೋವು ರಕ್ತನಾಳಗಳ ಸೆಳೆತ ನಿವಾರಣೆಯಾಗುತ್ತದೆ. ಈ ಮುದ್ರೆಯಲ್ಲಿ ದೇಹದಾದ್ಯಂತ ಚೈತನ್ಯ ಅಥವಾ ಪ್ರಾಣದ ಹರಿಯುವಿಕೆಯನ್ನು ಉತ್ತೇಜಿಸುತ್ತದೆ. ದೇಹದ ಯಾವುದೇ ಭಾಗದ ಮರಗಟ್ಟುವಿಕೆಯನ್ನು ಗುಣಪಡಿಸಬಹುದು.

ಸೂಚನೆ: ಮುದ್ರೆಗಳನ್ನು ಚಿಕಿತ್ಸಾರೂಪದಲ್ಲಿ ಅಭ್ಯಾಸ ಮಾಡುವಾಗ ಕೊನೆಯಲ್ಲಿ ಕಡ್ಡಾಯವಾಗಿ ಪ್ರಾಣಮುದ್ರೆ ಮಾಡಿ. ಮಂತ್ರಸಹಿತ ಅಭ್ಯಾಸ ಮಾಡಿದಾಗ ಸೌಂಡ್ ಥೆರಪಿಯಾಗುತ್ತದೆ. ಮುದ್ರೆಯು ಫಿಸಿಯೋಥೆರಪಿಯಾಗುತ್ತದೆ. ಗರ್ಭಿಣಿಯರು ಆಯಾಸವಾದಾಗ ವಿಶ್ರಾಂತಿ ಪಡೆಯಬೇಕು. ಶವಾಸನದ ಬದಲು ಬಾಲಾಸನ ಭಂಗಿಯಲ್ಲಿ (ಪಾರ್ಶ್ವಕ್ಕೆ ಮಲಗುವುದು) ವಿಶ್ರಮಿಸಬೇಕು. ಮನಸ್ಸಿಗೆ ಅತೀ ಒತ್ತಡವಾಗುವ ಕೆಲಸವನ್ನು ನಿರ್ವಹಿಸುವುದು ಬೇಡ. ದಿನದ ಉಚಿತ ಸಮಯದಲ್ಲಿ ಅಗತ್ಯ ಮುದ್ರೆಗಳನ್ನು ಧಾರಣೆ ಮಾಡಿ. ಒಂಬತ್ತನೇ ತಿಂಗಳ ಕೊನೆಯ ಭಾಗದಲ್ಲಿ ಸುಲಭ ಪ್ರಸವಕ್ಕೆ ಸುಮಾರು 10-20 ನಿಮಿಷಗಳ ಕಾಲ ಅಪಾನಮುದ್ರೆಯ ಅಭ್ಯಾಸ ಮಾಡಿ.

ನೀವೂ ಪ್ರಶ್ನೆ ಕೇಳಿ

ಯೋಗದ ಮೂಲಕ ಹಲವು ರೋಗಗಳಿಗೆ ಪರಿಹಾರವಿದೆ. ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಯೋಗ ಅಂಕಣಕಾರರು ಉತ್ತರ ನೀಡಲಿದ್ದಾರೆ. ಆಸಕ್ತರು ವಯಸ್ಸು, ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆ ಮೇರೆಗೆ ನಮ್ಮ ಯೋಗ ಅಂಕಣಕಾರರು ಸಲಹೆ, ಸೂಚನೆ ನೀಡಲಿದ್ದಾರೆ.

ವಿಳಾಸ: ಸಂಪಾದಕರು, ಯೋಗಕ್ಷೇಮ ಪ್ರಶ್ನೋತ್ತರ ವಿಭಾಗ, ವಿಜಯವಾಣಿ ನಂ. 24, ಸಾಯಿರಾಂ ಟವರ್ಸ್, ಮೊದಲನೆಯ ಮಹಡಿ, ಐದನೆಯ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು – 560 018.

Leave a Reply

Your email address will not be published. Required fields are marked *

Back To Top