21.7 C
Bengaluru
Tuesday, January 21, 2020

ಯೋಗನಡಿಗೆಗೆ ಪೂರಕ ಅಂಶಗಳು

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

|ಡಾ. ರಾಘವೇಂದ್ರ ಪೈ

ಯೋಗನಡಿಗೆಯಲ್ಲಿ ಅಡಕವಾಗಿರುವ ಅಂಶಗಳೆಂದರೆ ಪ್ರಾರ್ಥನೆ, ಶಿಥಿಲೀಕರಣ, ವ್ಯಾಯಾಮ, ಉಸಿರಾಟದ ವ್ಯಾಯಾಮ, ಪ್ರಾಣಾಯಾಮ, ಯೋಗಮುದ್ರೆ, ಯೌಗಿಕ ಹೆಜ್ಜೆ, ಮಂತ್ರ, ಜಪ, ಧ್ಯಾನ, ಯೋಗ ನಿದ್ದೆ, ಮಲಶೋಧನ ಕ್ರಿಯೆ ಹಾಗೂ ಶಾಂತಿಮಂತ್ರ. ಒಟ್ಟು ಹತ್ತು ಅಂಶಗಳನ್ನೊಳಗೊಂಡ ಸೂತ್ರಗಳ ಸಮನ್ವಯ ಚಟುವಟಿಕೆ.

ಯೋಗನಡಿಗೆಯಲ್ಲಿ ಏನು ಮುಖ್ಯ?

ಲಕ್ಷ್ಯ: ಯೋಗನಡಿಗೆಯಲ್ಲಿ ಸಮನ್ವಯಗೊಂಡ ಯೋಗಪ್ರಕ್ರಿಯೆಗಳ ವಿವಿಧ ಹಂತದ ಅಭ್ಯಾಸಕ್ಕೆ ಕಾರ್ಯಪ್ರವೃತ್ತರಾಗುವ ಮೊದಲು ಅಳವಡಿಸಿಕೊಳ್ಳಬೇಕಾದ ಯೋಗಮುದ್ರೆ, ಪಾಲಿಸಬೇಕಾದ ಪ್ರಾಣಾಯಾಮ, ಪ್ರಸನ್ನ ಮುಖಮುದ್ರೆಯ ಕಡೆಗೆ ಲಕ್ಷ್ಯರಲಿ, ಯೋಗನಡಿಗೆಯ ಬಗ್ಗೆ ಕ್ರಮಬದ್ಧ ಶಿಕ್ಷಣ ಪಡೆದರೆ ಇದು ಹೆಚ್ಚು ಪರಿಣಾಮಕಾರಿ.

ಅನುಭವ: ಯೋಗನಡಿಗೆಯ ಪರಿಣಾಮ ಗಮನಿಸಿ. ಸಹಜ ಉಸಿರಾಟದ ವೇಗದಲ್ಲಿ ಇಳಿಕೆ, ಹೃದಯಬಡಿತ, ನಾಡಿಮಿಡಿತ, ದೇಹದ ಉಷ್ಣತೆಯಲ್ಲಿ ಸಮತೋಲನ, ಶರೀರದ ಪ್ರತಿ ಕಣದಲ್ಲೂ ಉಂಟಾಗುವ ಪ್ರಾಣಚೈತನ್ಯದ ಸಂವೇದನೆ, ಮೌನ ಹಾಗೂ ಹೊಸತನ ಲಭ್ಯ.

ವಿಶ್ರಾಂತಿ ಹೇಗೆ?: 30 ನಿಮಿಷಗಳ ಯೋಗನಡಿಗೆ ಪ್ಯಾಕೇಜ್​ನ ಕೊನೆಯ ಏಳು ಅಥವಾ ಒಂಬತ್ತು ನಿಮಿಷ ಕುಳಿತಲ್ಲೇ ಅಥವಾ ಶವಾಸನದಲ್ಲಿ ಯೋಗನಿದ್ದೆಯ ಅಭ್ಯಾಸ ಮಾಡಬೇಕು. ಕೊನೆಯಲ್ಲಿ ಓಂಕಾರ ಪಠಣದೊಂದಿಗೆ ಸಕಲರಿಗೂ ಹೃತ್ಪೂರ್ವಕವಾಗಿ ಶುಭ ಹಾರೈಸಬೇಕು.

ಚಿಂತನೆ: ಪಡೆದ ಅನುಭವ ಮರುಚಿಂತನೆ. ಅದೇ ಆನಂದದ ಸ್ಥಿತಿಯಲ್ಲೇ ದಿನಪೂರ್ತಿ ಉಲ್ಲಾಸದಿಂದಿರುವುದು.
ಯೋಗನಡಿಗೆಯ ಪೂರ್ವತಯಾರಿ ಬೆಳಗಿನ ನಡಿಗೆಯಾಗಿದ್ದರೆ ಮಲ-ಮೂತ್ರವಿಸರ್ಜನೆ, ದಂತಧಾವನಾದಿಗಳನ್ನು ಮೊದಲೇ ಪೂರೈಸಿ. ಯಾವುದೇ ಘನಾಹಾರ ಸ್ವೀಕರಿಸಬೇಡಿ. ನಡಿಗೆಗೆ ತಕ್ಕ ಉಡುಪು ಧರಿಸಿ. ಉಷಃಪಾನ ಕಡ್ಡಾಯವಾಗಿರಲಿ. ಎದ್ದೊಡನೆ ಕನಿಷ್ಠ ಎರಡೂವರೆಯಿಂದ ಮೂರು ಲೋಟ ನೀರನ್ನು ಸೇವಿಸಿ. ದೀರ್ಘ ನಡಿಗೆ ಬೇಕೆಂದಿದ್ದರೆ ಸೊಂಟಕ್ಕೊಂದು ಪಂಚೆ ಸುತ್ತಿಕೊಂಡು ಹೊರಡಿ. ನಡಿಗೆಯ ಸಮಯದಲ್ಲಿ ಅಗತ್ಯ ಔಷಧ ಹಾಗೂ ಸಹಾಯಕ ಜತೆಗಾರರೊಂದಿಗೆ ಹೊರಡುವುದು ಹೆಚ್ಚು ಒಳ್ಳೆಯದು. ನಡಿಗೆಯ ಅವಧಿ ದೂರ ಹಾಗೂ ಸ್ಥಳದ ಬದಲಾವಣೆಗಳಿದ್ದರೆ ಅಂಥ ಸಂದರ್ಭಗಳನ್ನು ಮೊದಲೇ ನಿರ್ಧರಿಸಿ ಮನೆಯವರಿಗೆ ಸೂಚಿಸಿ.

ದಿನಚರಿ ಬರೆಯಿರಿ: ನಡಿಗೆಗೆ ದಿನಚರಿ ಪುಸ್ತಕವೊಂದನ್ನು ಇರಿಸಿಕೊಳ್ಳಿ. ಯೋಗನಡಿಗೆಯ ಕಾಲದಲ್ಲಿ ಚಿತ್ತದ ತೊಡಗುವಿಕೆ, ಪಡೆದ ಅನುಭವ, ಆ ಅನುಭವಗಳ ಚಿಂತನ-ಮನನಾದಿ ವಿವರಗಳನ್ನು ಅದರಲ್ಲಿ ಬರೆದಿಡಿ.

ಬೇಡದ ಸಂಗತಿಗಳು: ಅನೇಕರು ಅತಿ ಉಲ್ಲಾಸದಿಂದ ಯೋಗನಡಿಗೆ ಮಾಡಬಯಸುತ್ತಾರೆ. ಈ ಸಂದರ್ಭ ಥರಾವರಿ ಹಾಡುಗಳು, ಶ್ಲೋಕ, ಪಾಶ್ಚಾತ್ಯ ಬೀಟ್ಸ್ ಕೇಳುವ ಹವ್ಯಾಸಿಗಳೂ ಇದ್ದಾರೆ! ಯೋಗನಡಿಗೆಯ ಸಂದರ್ಭದಲ್ಲಿ ಮೊಬೈಲ್, ವಾಕ್​ವುನ್, ಟ್ರಾನ್ಸಿಸ್ಟರ್, ಪುಸ್ತಕಗಳನ್ನು ಜತೆಗೆ ಒಯ್ಯಬೇಡಿ. ಕ್ರಮಬದ್ಧ ಯೋಗನಡಿಗೆಯ ಕಡೆಗಷ್ಟೇ ನಿಮ್ಮ ಗಮನವಿರಲಿ. ನಡಿಗೆ ಒಂದು ತಪಸ್ಸಿನಂತಿರಬೇಕೆಂದು ಸಂಕಲ್ಪ ಮಾಡಿ.

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...