ಯೋಗ ತರಬೇತಿ ಶಿಬಿರ

ಅಥಣಿ: ವಿದ್ಯಾರ್ಥಿಗಳು ಯೋಗ್ಯಾಭ್ಯಾಸವನ್ನು ರೂಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯದೊಂದಿಗೆ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸ್ಥಳೀಯ ವಿದ್ಯಾವರ್ಧಕ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಎಸ್.ದೇಸಾಯಿ ಹೇಳಿದ್ದಾರೆ.

ಬುಧವಾರ ಪಟ್ಟಣದ ಸತ್ತಿರಸ್ತೆಯಲ್ಲಿರುವ ವಿದ್ಯಾವರ್ಧಕ ಸಂಸ್ಥೆಯಲ್ಲಿ ವಿಶ್ವಯೋಗ ದಿನಾಚರಣೆ ನಿಮಿತ್ತ ಜರುಗಿದ ಒಂದು ವಾರದ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಯೋಗ ಶಿಕ್ಷಕಿ ರೋಹಿಣಿ ಯಾದವಾಡ, 21ರಂದು ಸ್ಥಳೀಯ ಭೋಜರಾಜ ಕ್ರೀಡಾಂಗಣದಲ್ಲಿ ನಡೆಯುವ ಬೃಹತ್ ವಿಶ್ವಯೋಗ ಶಿಬಿರದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಯೋಗ ಶಿಕ್ಷಕಿ ಗೀತಾ ದಶವಂತ, ಶಿಕ್ಷಕರಾದ ವಿ.ಎ.ಕವಟೇಕರ, ಬಿ.ಡಿ.ಕೋಳಿ, ಎಂ.ಕೆ.ಖೋದಾನಪುರ, ಎಸ್.ಬಿ.ಹುಲ್ಲೆನ್ನವರ, ಮಹಂತೇಶ ದಿವಾನಮಳ, ನವೀನ ಮುಡಸಿ, ಹನುಮಂತ ಗುಡೋಡಗಿ, ಅಪ್ಪು ಕಾಂಬಳೆ, ಮೀನಾಜ ಡಾಂಗೆ ಇದ್ದರು.

Leave a Reply

Your email address will not be published. Required fields are marked *