Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಜಗತ್ತನ್ನು ಬೆಸೆಯುತ್ತಿದೆ ಯೋಗ

Friday, 22.06.2018, 3:06 AM       No Comments

ಆಕಾಶ, ಜಲ, ಭೂಮಿ… ಹೀಗೆ ಎಲ್ಲೆಲ್ಲೂ ಯೋಗದ ಶಕ್ತಿ ಆವಿರ್ಭಾವಗೊಂಡಿತು. ವೀರಸೈನಿಕರು ಸಮುದ್ರದಲ್ಲಿ, ಪ್ರಧಾನಿ ಡೆಹ್ರಾಡೂನಿನ ಪ್ರಧಾನ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಾಬಾ ರಾಮದೇವ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಅಧಿಕ ಯೋಗಪಟುಗಳು ಪಾಲ್ಗೊಳ್ಳುವ ಮೂಲಕ ವಿಶ್ವದಾಖಲೆ ನಿರ್ವಣವಾಯಿತು. ಕರ್ನಾಟಕದ ಉದ್ದಗಲಕ್ಕೂ ಯೋಗ ಕಾರ್ಯಕ್ರಮಗಳು ನಡೆದವು. ‘ವಿಜಯವಾಣಿ’, ದಿಗ್ವಿಜಯ 24ಗಿ7 ನ್ಯೂಸ್’ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಜನರು ಉತ್ಸಾಹದಿಂದ ಭಾಗಿಯಾದರು.


ಡೆಹ್ರಾಡೂನ್: ವಿಶ್ವದೆಲ್ಲೆಡೆ ಯೋಗವು ಅನಾರೋಗ್ಯದಿಂದ ಆರೋಗ್ಯದೆಡೆಗೆ ದಾರಿ ತೋರಿದ್ದು, ಬದುಕನ್ನು ಸಮೃದ್ಧಗೊಳಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಉತ್ತರಾಖಂಡದ ಡೆಹ್ರಾಡೂನ್​ನ ಅರಣ್ಯ ಸಂಶೋಧನಾ ಸಂಸ್ಥೆ ಆವರಣದಲ್ಲಿ 4ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೋದಿಯವರೊಂದಿಗೆ 55 ಸಾವಿರ ಯೋಗಪಟುಗಳು ಯೋಗಾಸನ ಮಾಡಿದರು. ಯೋಗ ಒಗ್ಗೂಡಿಸುವುದೆ ವಿನಾ ಒಡೆಯುವುದಲ್ಲ. ವಿಶ್ವದೆಲ್ಲೆಡೆ ಶಾಂತಿ ಸ್ಥಾಪನೆಗೆ ಯೋಗ ಬಹುಮುಖ್ಯ ಸಾಧನವಾಗಿದೆ ಎಂದ ಪ್ರಧಾನಿ, ಡೆಹ್ರಾಡೂನ್​ನಿಂದ ದುಬ್ಲಿನ್, ಶಾಂಘೈನಿಂದ ಷಿಕಾಗೋ, ಜಕಾರ್ತಾದಿಂದ ಜೋಹನ್ನೆಸ್​ಬರ್ಗ್​ವರೆಗೆ ಯೋಗ ದಿನಾಚರಣೆ ನಡೆಯುತ್ತಿರುವುದು ಸಂತಸಕರ ವಿಷಯ ಎಂದರು.

ದೇವಭೂಮಿಯಲ್ಲಿ ಯೋಗದ ಮೋಡಿ: ಉತ್ತರಾಖಂಡದ ನೆಲದಲ್ಲಿ ತಾಯಿ ಗಂಗೆ ನೆಲೆಸಿದ್ದಾಳೆ. ಈ ಸ್ಥಳ ವಿವೇಕಾನಂದರಿಗೆ ಪ್ರೇರಣೆ ನೀಡಿದ್ದ ಪುಣ್ಯಭೂಮಿ. ಈ ರಾಜ್ಯ ಕೆಲವು ದಶಕಗಳಿಂದ ಯೋಗದ ಮುಖ್ಯಕೇಂದ್ರವಾಗಿದೆ. ಇಲ್ಲಿನ ಪರ್ವತಗಳು ಯೋಗ ಮತ್ತು ಆಯುರ್ವೆದಕ್ಕೆ ಪ್ರೇರಣೆ ನೀಡುತ್ತವೆ. ಇಂಥ ನೆಲದಲ್ಲಿ ಕಾಲಿಟ್ಟಾಗ ದಿವ್ಯ ಅನುಭೂತಿ ಆಗುತ್ತದೆ ಎಂದು ಮೋದಿ ಹೇಳಿದರು. ಯೋಗವು ತಮಗೆ ಸಂಬಂಧಿಸಿದ ವಿಷಯ ಎಂದುಕೊಂಡು ಹಲವಾರು ದೇಶಗಳ ಜನರು ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಅತೀ ಕಡಿಮೆ ಸಮಯದಲ್ಲಿ ಯೋಗ ಜಗದ್ವಿಖ್ಯಾತಗೊಂಡಿರುವುದು ಭಾರತೀಯರಿಗೆ ಗೌರವ ತರುವ ಮಾತಾಗಿದೆ. ಯೋಗದ ಬಗ್ಗೆ ಪ್ರಚಾರ ಹೆಚ್ಚುತ್ತಿದ್ದು, ಇದರಿಂದಾಗಿ ಭಾರತದ ವರ್ಚಸ್ಸು ಇನ್ನಷ್ಟು ವೃದ್ಧಿಯಾಗಿದೆ ಎಂದು ಪ್ರಧಾನಿ ನುಡಿದರು.

ರಾಷ್ಟ್ರಪತಿಯಿಂದ ಯೋಗ

ಲ್ಯಾಟಿನ್ ಅಮೆರಿಕದ ಸುರಿ ನಾಮ್ಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಯೋಗಾಸನ ಮಾಡಿ ದರು. ಯೋಗಗುರು ಭರತ್ ಭೂಷಣ್ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಸುರಿನಾಮ್ ಆಧ್ಯಕ್ಷ ಡೇಸಿ ಬ್ಯೂಟೆರ್ಸೆ ಇದರಲ್ಲಿ ಪಾಲ್ಗೊಂಡಿದ್ದರು.

ವಿಶ್ವಸಂಸ್ಥೆಯಲ್ಲೂ ಯೋಗ

ವಿಶ್ವಸಂಸ್ಥೆಯಲ್ಲಿ ಬುಧವಾರ ಸಂಜೆ ನಡೆದ ಯೋಗ ದಿನಾಚರಣೆಯಲ್ಲಿ ಹಲವಾರು ಧಾರ್ವಿುಕ ಗುರುಗಳು, ಜನರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ಯೋಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಭಾಷಣದ ವೀಡಿಯೋ ಕ್ಲಿಪ್ಪಿಂಗ್ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭಾರತದ ಮಕ್ಕಳು ನಡೆಸಿಕೊಟ್ಟ ಯೋಗ ಕಾರ್ಯಕ್ರಮವನ್ನು ವೀಡಿಯೋದಲ್ಲಿ ಪ್ರದರ್ಶಿಸಲಾಯಿತು.

ಯೋಧರ ಆಚರಣೆ

ಭೂಮಿಯಿಂದ 15 ಸಾವಿರ ಅಡಿ ಎತ್ತರದಲ್ಲಿ ಹಾಗೂ ಸಮುದ್ರದ ಆಳದಲ್ಲಿ ಯೋಗಾಸನ ಮಾಡುವ ಮೂಲಕ ಭಾರತೀಯ ಸೈನಿಕರು ಯೋಗ ದಿನವನ್ನು ವಿಶೇಷವಾಗಿ ಆಚರಿಸಿದರು. ವಿಂಗ್ ಕಮಾಂಡರ್​ಗಳಾದ ಕೆಬಿಎಸ್ ಸಾಮ್ಯಲ್ ಮತ್ತು ಗಜಾನಂದ ಯಾದವ್​ರ ಈ ಸಾಧನೆ ಮೆಚ್ಚುಗೆ ಗಳಿಸಿದೆ.

ಗಿನ್ನೆಸ್ ದಾಖಲೆ ಸೃಷ್ಟಿಸಿದ ಯೋಗಾಭ್ಯಾಸ

ಕೋಟಾ: ರಾಜಸ್ಥಾನದ ಕೋಟಾದಲ್ಲಿ ಗುರುವಾರ ನಡೆದ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಗಿನ್ನೆಸ್ ವಿಶ್ವದಾಖಲೆ ಸೃಷ್ಟಿಸಿದೆ. ಯೋಗಗುರು ಬಾಬಾ ರಾಮದೇವ್ ಮಾರ್ಗದರ್ಶನದಲ್ಲಿ ಎರಡು ಲಕ್ಷ ಜನರು ಏಕಕಾಲಕ್ಕೆ ಯೋಗಾಸನ ಪ್ರದರ್ಶಿಸಿದರು. ಕಾರ್ಯಕ್ರಮದ ನಂತರ ಅಧಿಕಾರಿಗಳು ವಿಶ್ವದಾಖಲೆಯ ಪ್ರಮಾಣಪತ್ರ ನೀಡಿದರು. ಡ್ರೋಣ್ ಮೂಲಕ ಜನರ ಎಣಿಕೆಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಭಾಗವಹಿಸಿದ್ದರು.

 


ವೀಕ್ಷಕರಿಗೆ ನಿರಾಸೆ

ನವದೆಹಲಿ: ಡೆಹ್ರಾಡೂನ್​ನಲ್ಲಿ ನಡೆದ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇರಪ್ರಸಾರವನ್ನು ಪ್ರೆಸ್ ಇನ್​ಫಾಮೇಷನ್ ಬ್ಯೂರೊದ (ಪಿಐಬಿ) ಯೂಟ್ಯೂಬ್ ಮೂಲಕ ಸವಿಯಬಯಸಿದ್ದ ಸಹಸ್ರಾರು ಸಂಖ್ಯೆ ಆಸಕ್ತರಿಗೆ ತೀವ್ರ ನಿರಾಸೆಯಾಯಿತು. ಕಾರಣ, ಯೂಟ್ಯೂಬ್ ಬ್ಲಾಕ್ ಆಗಿದ್ದು, 8 ಗಂಟೆಯ ವೇಳೆಗೆ ಅದನ್ನು ಅನ್​ಬ್ಲಾಕ್ ಮಾಡಲಾಯಿತು. ಆದರೆ ಅದಾಗಲೇ ಯೋಗ ಕಾರ್ಯಕ್ರಮ ಮುಕ್ತಾಯಗೊಂಡಿತ್ತು. ಯೂಟ್ಯೂಬ್​ನ ಪಾಲುದಾರಿಕೆ ಒಪ್ಪಂದದ ಅಪ್​ಡೇಟ್ ಮಾಡುತ್ತಿದ್ದ ಕಾರಣ, ಹೀಗಾಯಿತು ಎಂದು ಪಿಐಬಿ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

ಯೋಗ ನಿರತ ನನ್

ತಿರುವನಂತಪುರ: ಯೋಗ ಒಂದು ಧರ್ಮಕ್ಕೆ ಸೀಮಿತವಾದದ್ದು ಎಂಬ ಬಗ್ಗೆ ಕೆಲವರು ಅಭಿಪ್ರಾಯ ಮೂಡಿಸುತ್ತಿರುವ ಈ ಹೊತ್ತಿನಲ್ಲಿ ಕೇರಳದ ಕ್ರೖೆಸ್ತ ಸಂನ್ಯಾಸಿನಿ (ನನ್) ಒಬ್ಬರು 30 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತ, ಸಾವಿರಾರು ಮಂದಿಗೆ ಯೋಗ ಕಲಿಸುತ್ತ ಮಾದರಿಯಾಗಿದ್ದಾರೆ. ಇವರ ಹೆಸರು ಇನ್​ಫ್ಯಾಂಟ್ ಟ್ರೆಸಾ. ವಯಸ್ಸು 67. 30 ವರ್ಷಗಳ ಹಿಂದೆ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಾಗ ಹಲವು ಟೀಕೆಗಳೂ ವ್ಯಕ್ತವಾದವು. ಆದರೆ ಯಾವುದನ್ನೂ ಲೆಕ್ಕಿಸದೆ ಯೋಗಾಧ್ಯಯನದಲ್ಲಿ ತ್ರೆಸ್ ತೊಡಗಿಸಿಕೊಂಡಿದ್ದಾರೆ. ‘ಹಲವಾರು ಕ್ರೖೆಸ್ತರಿಗೆ ಯೋಗದ ಬಗ್ಗೆ ತಪು್ಪಕಲ್ಪನೆ ಇದೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.


ಸಮನ್ವಯ ಸಾಧಿಸಲು ಯೋಗ

ಬೆಂಗಳೂರು: ಯೋಗವೆಂದರೆ ಶರೀರ, ಬುದ್ಧಿ, ಮನಸ್ಸು ಮತ್ತು ಆತ್ಮಗಳ ಸಮನ್ವಯ ಸಾಧಿಸಿ ನಮ್ಮೊಳಗಿನ ಅಂತಃಶಕ್ತಿಯನ್ನು ನಾವು ಕಂಡುಕೊಳ್ಳುವ ಪರಿಪೂರ್ಣ ವಿಧಾನ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯೆದುರು ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಗ ಎಂಬುದು ಸನಾತನ ಭಾರತೀಯ ಸಂಸ್ಕೃತಿಯ ಭಾಗ. ವಿಶ್ವದ ಎಲ್ಲ ಜನರಿಗೂ ಬೇಕಾದ ಅತ್ಯಮೂಲ್ಯ ಸಂಪತ್ತು ಯೋಗ. ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೊಷಿಸಲು ಪ್ರಧಾನಿ ನರೇಂದ್ರ ಮೋದಿಯವರ ಶ್ರಮ ಕಾರಣ. ಅವರ ಕಾರ್ಯವನ್ನು ನಾವೆಲ್ಲರೂ ಶ್ಲಾಘಿಸಬೇಕು ಎಂದರು. ಸುಗುಣ ಆಸ್ಪತ್ರೆಯ ವೈದ್ಯ ಡಾ. ಆರ್. ರವೀಂದ್ರ, ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಚಿ. ನಾ. ರಾಮು, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಂ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಮತ್ತಿತರರಿದ್ದರು.


ಬೆಂಗಳೂರಿನಲ್ಲಿ ಯೋಗಪಟುಗಳ ಕಲರವ

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಎಳೆಯ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ 10 ಸಾವಿರಕ್ಕೂ ಹೆಚ್ಚು ಮಂದಿ ಯೋಗ ದಿನದಲ್ಲಿ ಪಾಲ್ಗೊಂಡು ನಿಬ್ಬೆರಗಾಗುವಂತೆ ಯೋಗ ಪ್ರದರ್ಶಿಸಿದರು. ಫ್ರಾನ್ಸ್​ನ ಯೋಗಪಟು ಲೇ ಯೋಗಿ ಕುಡೋಸ್ ಪಾಲ್ಗೊಳ್ಳುವಿಕೆ ಯೋಗಪಟುಗಳಲ್ಲಿ ಹುಮ್ಮಸ್ಸು ಮೂಡಿಸಿದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಗೈರು ಎದ್ದು ಕಾಣುತ್ತಿತ್ತು. ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಈ ಯೋಗದಿನದಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ಯೋಗಾಭ್ಯಾಸ ಮಾಡಿ ಗಮನ ಸೆಳೆದರು! ಸಚಿವ ಬಂಡೆಪ್ಪ ಖಾಶೆಂಪುರ, ಸಭಾಪತಿ ಡಿ.ಎಚ್.ಶಂಕರ ಮೂರ್ತಿ, ಮೇಯರ್ ಸಂಪತ್​ರಾಜ್ ಅವರುಗಳು ಯೋಗ ದಿನಕ್ಕೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಶ್ವಾಸಗುರು ವಚನಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

 


ಯೋಗ ದಿನದಲ್ಲಿ ಫ್ರಾನ್ಸ್​ನ ಕುಡೋಸ್!

76 ವರ್ಷದ ಕಟ್ಟುಮಸ್ತಿನ ಯೋಗಪಟು ಕುಡೋಸ್ ಕಂಡು ಜನ ದಂಗಾದರು. ಹುಟ್ಟು ವಾಗಲೇ ವಿಚಿತ್ರ ಕಾಯಿಲೆಗೆ ತುತ್ತಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಫ್ರಾನ್ಸ್​ನ ಲೇ ಯೋಗಿ ಕುಡೋಸ್ ಅವರ ಯೋಗ ಪ್ರದರ್ಶನ ಗಮನ ಸೆಳೆಯಿತು. ಕುಡೋಸ್ ಒಂದು ದಶಕದಿಂದ ಊಟ, ನೀರು ತ್ಯಜಿಸಿ ಯೋಗವನ್ನೇ ಉಸಿರಾಗಿಸಿ ಕೊಂಡಿರುವುದು ವಿಶೇಷ.

ಸೂತ್ರ ನೇತಿ ಕ್ರಿಯೆ ಪ್ರದರ್ಶನ ದಾಖಲೆ

ಧರ್ಮಸ್ಥಳ: ಉಜಿರೆಯ ಎಸ್​ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಧರ್ಮಸ್ಥಳದಲ್ಲಿ ವಿಶ್ವಯೋಗ ದಿನಾಚರಣೆ ಸಂದರ್ಭ ಸೂತ್ರ ನೇತಿ ಕ್ರಿಯೆ ಪ್ರದರ್ಶಿಸಿದ್ದು, ಇದು ಗೋಲ್ಡನ್ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲಾಗಲಿದೆ. ಸೂತ್ರ ನೇತಿ ಒಟ್ಟು 5 ನಿಮಿಷದ ಪ್ರಕ್ರಿಯೆಯಾಗಿದ್ದು ಒಂದು ನಿಮಿಷದಲ್ಲಿ ಏಕಕಾಲದಲ್ಲಿ 368 ವಿದ್ಯಾರ್ಥಿಗಳು ಮೂಗಿನ ದ್ವಾರದ ಮೂಲಕ ರಬ್ಬರ್ ನಳಿಕೆಯನ್ನು ಹಾಕಿ ಬಾಯಿ ಮೂಲಕ ಹೊರ ತೆಗೆದಿದ್ದಾರೆ. ಏಕಕಾಲದಲ್ಲಿ 368 ವಿದ್ಯಾರ್ಥಿಗಳು ಸೂತ್ರ ನೇತಿ ಪ್ರದರ್ಶನ ನೀಡಿರುವುದು ಇದೇ ಪ್ರಥಮ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ತಿಳಿಸಿದ್ದಾರೆ. ಶಾಂತಿವನ ಟ್ರಸ್ಟ್ ಮೂಲಕ ಧರ್ಮಸ್ಥಳ ಸಹಿತ ಐದು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಸಾವಿರಾರು ಮಂದಿಯಿಂದ ಯೋಗ ಕಾರ್ಯಕ್ರಮ ನಡೆಯಿತು. ಧರ್ಮಸ್ಥಳದಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು.

ಶ್ರೀಕ್ಷೇತ್ರ ಧರ್ಮಸ್ಥಳದಿಂದ ಯೋಗರತ್ನ ರಾಷ್ಟ್ರಪ್ರಶಸ್ತಿ

5ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಯೋಗ ಸಾಧನೆ ಮಾಡಿದವರಿಗೆ ಯೋಗರತ್ನ ಪ್ರಶಸ್ತಿ ನೀಡಲಾಗುವುದು ಎಂದು ಯೋಗ ದಿನಾಚರಣೆ ಸಂದರ್ಭ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಘೊಷಿಸಿದರು. ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು, ಹೇಮಾವತಿ ವಿ. ಹೆಗ್ಗಡೆ, ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿವಿ ಪರಿಕ್ಷಾಂಗ ಕುಲಸಚಿವ ಡಾ.ಎಂ.ಕೆ ರಮೇಶ್ ಪಾಲ್ಗೊಂಡಿದ್ದರು.

ಸಿಎಂ ಶುಭಾಶಯ

ಮುಖ್ಯಮಂತ್ರಿ ಕುಮಾರಸ್ವಾಮಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಕರೆ ಮಾಡಿ ವಿಶ್ವ ಯೋಗ ದಿನಾಚರಣೆ ಶುಭಾಶಯ ತಿಳಿಸಿದರು.


ಮದುವೆ ಮಂಟಪದಲ್ಲಿ ವಧು-ವರದಿಂದ ಯೋಗ!

ಮಂಗಳೂರು: ಮಂಗಳೂರಿನಲ್ಲಿ ಗುರುವಾರ ಮದುವೆಯೊಂದರಲ್ಲಿ ಮದುಮಕ್ಕಳಿಬ್ಬರೂ ಯೋಗ ಮಾಡುವ ಮೂಲಕ ಗಮನ ಸೆಳೆದಿದ್ದಾರೆ! ಡಾ.ಸಂದೀಪ್ ಶಂಕರ್ -ಡಾ.ಅಪೂರ್ವ ವಿವಾಹ ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗುರುವಾರ ನಡೆದಿದ್ದು, ಸಮಾರಂಭಕ್ಕೆ ಸಂಬಂಧಿಕರ ನೆಲೆಯಲ್ಲಿ ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ ಆಹ್ವಾನಿತರಾಗಿದ್ದರು. ವಿಶ್ವ ಯೋಗ ದಿನ ಹಿನ್ನೆಲೆಯಲ್ಲಿ ನಗರದೆಲ್ಲೆಡೆ 10ಕ್ಕೂ ಅಧಿಕ ಯೋಗ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತರಬೇತಿ ನೀಡಿದ್ದ ಅವರು, ವಧು-ವರರಿಬ್ಬರಿಗೂ ಮಂಟಪದಲ್ಲಿಯೇ ಯೋಗ ಅಂಗವಾಗಿರುವ ಧ್ಯಾನ ಮಾಡಿಸಿದರು. ಮದುವೆ ಮಂಟಪದಲ್ಲಿಯೂ ಯೋಗ ಕಾರ್ಯಕ್ರಮವೊಂದು ನಡೆದದ್ದು ಮದುವೆಗೆ ಬಂದಿದ್ದ ಅತಿಥಿಗಳ ಮೆಚ್ಚುಗೆಗೂ ಪಾತ್ರವಾಯಿತು.


ಸೂರ್ಯನಮಸ್ಕಾರದಲ್ಲಿ ನಾಲ್ಕು ದಾಖಲೆ

ಉಮದಿ: ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಬಾಲಗಾಂವ ಕಾತ್ರಾಳದ ಗುರುದೇವಾಶ್ರಮದಲ್ಲಿ ಆಯೋಜಿಸಲಾದ ಐತಿಹಾಸಿಕ ಯೋಗ ಉತ್ಸವ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ 1.10 ಲಕ್ಷ ಜನರು ಪಾಲ್ಗೊಳ್ಳುವ ಮೂಲಕ ದಾಖಲೆ ನಿರ್ವಣವಾಗಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್, ಏಶಿಯನ್ ಬುಕ್, ದಿ ಹೈ ರೆಂಜ್ ಹಾಗೂ ದಿ ಮಾರಲೆಸ್ ಬುಕ್ ಆಫ್ ರೆಕಾರ್ಡ್ ಸೇರಿ ಒಟ್ಟು ನಾಲ್ಕು ದಾಖಲೆ ಸೃಷ್ಟಿಯಾಗಿವೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್​ಗೆ ದಾಖಲೆ ಕಳುಹಿಸಲಾಗಿದೆ. ಗುರುದೇವಾಶ್ರಮ, ಕಾತ್ರಾಳದ ಯೋಗ ಉತ್ಸವ ಸಮಿತಿ, ಆಕಳವಾಡಿ, ಬಾಲಗಾಂವ, ಬೋರ್ಗಿ, ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆ, ಸಾಂಗಲಿ ಜಿಲ್ಲಾ ಪರಿಷತ್ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಸಾನ್ನಿಧ್ಯ, ಗುರುದೇವಾಶ್ರಮದ ಅಮೃತಾನಂದ ಶ್ರೀಗಳು ನೇತೃತ್ವ ವಹಿಸಿದ್ದರು. ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ ಚಂದ್ರಕಾಂತ ಪಾಟೀಲ ಇದ್ದರು.


ಮೈಸೂರಿನಲ್ಲಿ ಯೋಗ ಪ್ರದರ್ಶನ

ಮೈಸೂರು ನಗರದ ಚಾಮುಂಡಿಬೆಟ್ಟದ ತಪ್ಪಲಿನ ರೇಸ್​ಕೋರ್ಸ್​ನಲ್ಲಿ ಗುರುವಾರ 50 ಸಾವಿರ ಯೋಗಪಟುಗಳಿಂದ 4ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಬೃಹತ್ ಯೋಗ ಪ್ರದರ್ಶನ ನಡೆಯಿತು. ನಗರದ ಶ್ರೀ ಹೊಸಮಠದ ಶ್ರೀ ನಟರಾಜ ಸಭಾ ಭವನದಲ್ಲಿ ವಿಜಯವಾಣಿ, ದಿಗ್ವಿಜಯ 24ಗಿ7 ನ್ಯೂಸ್ ವಾಹಿನಿ ಮತ್ತು ಶ್ರೀ ನಟರಾಜ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಆರೋಗ್ಯಕ್ಕಾಗಿ ಯೋಗ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇಳೆ ಶ್ರೀ ನಟರಾಜ ವಿದ್ಯಾಸಂಸ್ಥೆಯ ಮಕ್ಕಳು 10 ನಿಮಿಷ ನೃತ್ಯರೂಪಕದಲ್ಲಿ ಯೋಗ ಪ್ರದರ್ಶಿಸಿದರು.

 


ಶ್ರೀಶೈಲ ಜಗದ್ಗುರುಗಳಿಂದ ಯೋಗಾಭ್ಯಾಸ

ಸಿರಗುಪ್ಪ(ಬಳ್ಳಾರಿ): ಕಳೆದ ನಾಲ್ಕು ವರ್ಷಗಳಿಂದ ಯೋಗದಿನವನ್ನು ಇಡೀ ವಿಶ್ವವೇ ಅಚರಿಸುವ ಮೂಲಕ ಭಾರತದ ಕೀರ್ತಿ ಹಾಗೂ ಪುರಾತನ ಪದ್ಧತಿ ಜಗತ್ತಿಗೆ ಹೆಸರಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳು ತಿಳಿಸಿದರು. ನಗರದ ವೀರನಗೌಡ ನಿವಾಸದಲ್ಲಿ ಗುರುವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಶ್ರೀಶೈಲ ಜಗದ್ಗುರುಗಳು ವಿವಿಧ ಭಂಗಿಗಳಲ್ಲಿ ಯೋಗ ಅಭ್ಯಾಸವನ್ನು ಭಕ್ತರಿಗೆ ಪರಿಚಯಿಸಿ ಮಾತನಾಡಿದರು. ದೇಶದ ಪುರಾತನ ಇತಿಹಾಸದಲ್ಲಿ ಪತಂಜಲಿ ಮಹರ್ಷಿಗಳಿಂದ ಪರಿಚಿತಗೊಂಡ ಯೋಗ ಕೇವಲ ಭಾರತಕ್ಕೆ ಸೀಮಿತವಾಗದೆ ವಿಶ್ವಕ್ಕೆ ಕೊಟ್ಟಿರುವ ಕೊಡುಗೆ ಎಂದರು.

Leave a Reply

Your email address will not be published. Required fields are marked *

Back To Top