25.9 C
Bengaluru
Wednesday, January 22, 2020

ಮಂಡಿಯ ಬಿಗಿತ ಶಮನಕ್ಕೆ ಯೋಗದ ಪರಿಹಾರ

Latest News

ಅಂತರ್‌ಜಿಲ್ಲಾ ಕಳವು ಆರೋಪಿಗಳಿಬ್ಬರ ಬಂಧನ

ಹರಪನಹಳ್ಳಿ: ಅಂತರ್ಜಿಲ್ಲಾ ಕಳವು ಆರೋಪಿಗಳಿಬ್ಬರನ್ನು ಬಂಸಿರುವ ಹರಪನಹಳ್ಳಿ ಪೊಲೀಸರು, ಅವರಿಂದ ಟಾಟಾ ಸುಮೋ ಸಮೇತ ಏಳು ಲಕ್ಷ ರೂ. ಬೆಲೆಯ ವಸ್ತುಗಳನ್ನು ವಶಕ್ಕೆ...

ಪಾಲಿಕೆ ಕಾಂಗ್ರೆಸ್ ಸದಸ್ಯರಿಗೆ ಚಿಂತನ ಮಂಥನ ಸಮಾವೇಶ ಇಂದು

ದಾವಣಗೆರೆ: ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಿಗೆ ಚಿಂತನ ಮಂಥನ ಸಮಾವೇಶ ಹಾಗೂ ಸನ್ಮಾನ ಕಾರ್ಯಕ್ರಮ ಜ. 23 ರಂದು ನಗರದ ತೊಗಟವೀರ ಕಲ್ಯಾಣ...

ಕಲೂತಿ ನಗರ ಶಾಲೆಯಲ್ಲಿ ತಗ್ಗು-ಗುಂಡಿಗಳ ದರ್ಬಾರ್

ತೇರದಾಳ: ಹತ್ತು ವರ್ಷವಾದರೂ ಸ್ಥಳೀಯ ಕಲೂತಿ ನಗರದಲ್ಲಿರುವ ಸರ್ಕಾರಿ ಎಲ್‌ಪಿಎಸ್ ಶಾಲೆ ಆವರಣ ಸಮತಟ್ಟ ಮಾಡದ ಕಾರಣ ಮಂಗಳವಾರ ಅಕ್ಕನ ಜತೆಗೆ ಶಾಲೆಗೆ...

ಬಸ್​ನಿಲ್ದಾಣದಲ್ಲಿ ಸಿಕ್ಕಿದ್ದ ನಾಲ್ಕು ವಾರಸ್ದಾರರಿಲ್ಲದ ಬ್ಯಾಗ್​ಗಳನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಪರಿಶೀಲಿಸಿದ ಪೊಲೀಸರಿಗೆ ಸಿಕ್ಕಿದ್ದೇನು ಗೊತ್ತಾ?

ಚಿಕ್ಕಬಳ್ಳಾಪುರ: ಇಂದು ನಗರದ ಕೆಎಸ್​​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ವಾರಸ್ದಾರರಿಲ್ಲದ ನಾಲ್ಕು ಬ್ಯಾಗ್​ಗಳು ಪತ್ತೆಯಾಗಿದ್ದವು. ಪ್ರಯಾಣಿಕರು ಕುಳಿತುಕೊಳ್ಳುವ ಕಲ್ಲುಬೆಂಚಿನ ಕೆಳಗೆ ಬ್ಯಾಗ್​ಗಳನ್ನು ಇಡಲಾಗಿತ್ತು. ಒಂದೊಂದು ಬ್ಯಾಗ್​ಗಳೂ ಒಂದೊಂದು...

ಸಮುದಾಯ ಅಭಿವೃದ್ಧಿ ಹೊಂದಲಿ

ಮಹಾಲಿಂಗಪುರ: ಬಸವಣ್ಣನವರ ಮಾರ್ಗದರ್ಶನದಂತೆ ನಡೆದು, ನಿಷ್ಠೆಯಿಂದ ಕಾಯಕ ಮಾಡಿ ದಾಸೋಹ ನಡೆಸಿದ ಶಿವಶರಣ ಮೇದಾರ ಕೇತೇಶ್ವರ ಸರ್ವ ಜನಾಂಗದ ಶರಣ ಆಗಿದ್ದಾರೆ ಎಂದು...

ನನ್ನ ಮಂಡಿಯ ಬಿಗಿತ ಹೆಚ್ಚಾಗಿದೆ. ಆರ್ಥರೈಟಿಸ್ ಬಂದಿದೆಯೇ ಎಂಬ ಅನುಮಾನವಿದೆ. ಯಾವ ಆಸನ ಮಾಡಿದರೆ ಬಿಗಿತ ಶಮನವಾಗುತ್ತದೆ?

| ವೈಷ್ಣವಿ 45 ವರ್ಷ, ತೀರ್ಥಹಳ್ಳಿ

ಮಂಡಿಗಳಲ್ಲಿನ ಬಿಗಿತ ಕಡಿಮೆಯಾದರೆ ರಕ್ತಸಂಚಾರ ಸುಗಮವಾಗಿ ನೋವು ಶಮನವಾಗುತ್ತದೆ. ಆರ್ಥರೈಟಿಸ್ ಬಂದಿದೆಯೇ ಎಂದು ಚಿಂತಿಸುತ್ತಾ ಕೂರುವ ಬದಲು ನೋವಿನಿಂದ ಮುಕ್ತಿ ಪಡೆಯಲು ಕೆಲ ಆಸನ ಅಭ್ಯಾಸ ಮಾಡುವುದು ಉತ್ತಮ.

ಒಂದು ಯೋಗ ಮ್ಯಾಟನ್ನು ಹಾಸಿ ಒಂದು ಜಮಖಾನವನ್ನು ಚಿತ್ರದಲ್ಲಿರುವಂತೆ ಮಡಚಿ ಇಟ್ಟುಕೊಳ್ಳಿ. ಮಣಿಕಟ್ಟುಗಳು ಜಮಖಾನದ ಮೇಲೆ ಬರುವಂತೆ ಇರಿಸಿ ಕಾಲುಗಳನ್ನು ಹಿಂದಕ್ಕೆ ಹಾಕಿ ಅರ್ಧ ಕುಳಿತುಕೊಳ್ಳಿ. ಒಂದು ದಿಂಬನ್ನು ತೊಡೆ ಮತ್ತು ಮೀನಖಂಡಗಳ ನಡುವೆ ಇಟ್ಟು ದಿಂಬಿನ ಮೇಲೆ ಪೂರ್ಣವಾಗಿ ಕುಳಿತುಕೊಳ್ಳಿ. ಪೃಷ್ಠಭಾಗವನ್ನು ದಿಂಬಿಗೆ ಒತ್ತಿ ಬೆನ್ನನ್ನು ನೇರಗೊಳಿಸಿ. 3ರಿಂದ 5 ನಿಮಿಷಗಳ ಕಾಲ ಸ್ಥಿತಿಯಲ್ಲಿರಿ. ನಂತರ ನಿಧಾನವಾಗಿ ಎದ್ದು ನಿಂತುಕೊಳ್ಳಿ. ದಿಂಬು ಮತ್ತು ಜಮಖಾನದ ಸಹಾಯದಿಂದ ಮಂಡಿಗಳು ನಿಧಾನವಾಗಿ ಮಡಚಲು ಸುಲಭವಾಗುವುದು. ಮಂಡಿಗಳಲ್ಲಿನ ಬಿಗಿತ ಕಡಿಮೆಯಾಗುವುದು. ಆರ್ಥರೈಟಿಸ್ ನಿವಾರಣೆಗೆ ಉತ್ತಮ ಆಸನ.

ಇನ್ನೊಂದು ವಿಧಾನ ಗಮನಿಸೋಣ. ಕಾಲುಗಳನ್ನು ಚಾಚಿ ನೆಲದ ಮೇಲೆ ಕುಳಿತುಕೊಳ್ಳಿ. ಅಗತ್ಯಕ್ಕೆ ತಕ್ಕಂತೆ ಬೆಲ್ಟ್ ಗಳು, ದಿಂಬುಗಳನ್ನು ಇಟ್ಟುಕೊಳ್ಳಿ. ಐದು ಕೆ.ಜಿ. ತೂಕದ ಒಂದು ಡಿಸ್ಕ್ ಜೊತೆಗಿರಲಿ. ಮೊಣಕಾಲುಗಳು ಕಮಾನಿನ ಆಕಾರದಲ್ಲಿ ಬಾಗಿದ್ದರೆ ಪಾದಗಳ ನಡುವೆ ಇಟ್ಟಿಗೆ ಅಥವಾ ಬಟ್ಟೆಯನ್ನು ಗಟ್ಟಿಯಾಗಿ ಮಡಿಸಿ ಇಡಿ. 2-4 ಬೆಲ್ಟ್ ಗಳನ್ನು ಕಾಲಿಗೆ ಸುತ್ತಿ. ಮಂಡಿಯಿಂದ ಮೇಲ್ಭಾಗಕ್ಕೆ ತೊಡೆಗಳಿಗೆ 2 ಬೆಲ್ಟ್, ಮಂಡಿಯಿಂದ ಕೆಳಭಾಗಕ್ಕೆ ಎರಡು ಬೆಲ್ಟ್ ಹಾಕಿ ಸ್ವಲ್ಪ ಮಟ್ಟಿಗೆ ಬಿಗಿಗೊಳಿಸಿ. ಪಾದಗಳ ಕೆಳಗೆ ಒಂದು ದಿಂಬನ್ನು ಇರಿಸಿ. ತೊಡೆಗಳ ಮೇಲೆ 5 ಕೆ.ಜಿ. ತೂಕದ ಡಿಸ್ಕನ್ನು ಇಡಿ. ಐದು ನಿಮಿಷಗಳ ಕಾಲ ಸ್ಥಿತಿಯಲ್ಲಿರಿ. ಡಿಸ್ಕ್ ಮತ್ತು ಬೆಲ್ಟನ್ನು ತೆಗೆದು ಮಂಡಿಗಳ ಕೆಳಗೆ ದಿಂಬನ್ನಿಟ್ಟು ವಿಶ್ರಮಿಸಿ. ಕಾಲುಗಳ ಹಿಂಭಾಗ, ಮಂಡಿಯ ಹಿಂಭಾಗ ಹಿಗ್ಗುತ್ತದೆ. ಆರ್ಥರೈಟಿಸ್ ಶಮನಕ್ಕೆ ಇದು ಉತ್ತಮ ಆಸನ.

ಭಾರದ್ವಾಜಾಸನ ಮಾಡಬೇಕು. ನೆಲದ ಮೇಲೆ ಕೂರಲಾಗದು. ಸರಳ ವಿಧಾನ ತಿಳಿಸಿ.

| ಮಂಜುನಾಥ ಡೊಳ್ಳಿನಕೊಪ್ಪ ಬೀದರ

ಸ್ಟೀಲ್ ಕುರ್ಚಿ ಮೇಲೆ ಬಲಕ್ಕೆ ತಿರುಗಿ ಕುಳಿತುಕೊಳ್ಳಿ. ಒರಗುವ ಭಾಗವನ್ನು ಎರಡೂ ಕೈಗಳಿಂದ ಹಿಡಿದುಕೊಳ್ಳಿ. ಬೆನ್ನು ನೇರವಾಗಿರಲಿ. ಎದೆಯ ಭಾಗ ಎತ್ತಿರಲಿ. ಒಮ್ಮೆ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಉಸಿರು ಬಿಡುತ್ತಾ ಮುಂಡಭಾಗವನ್ನು ಬಲಕ್ಕೆ ತಿರುಗಿಸಿ. ಉಸಿರಾಟ ಸಹಜವಾಗಿರಲಿ. ಒಂದು ನಿಮಿಷ ಸ್ಥಿತಿಯಲ್ಲಿರಿ. ನಿಧಾನವಾಗಿ ಮೊದಲ ಸ್ಥಿತಿಗೆ ಬನ್ನಿ. ಎಡಪಾರ್ಶ್ವಕ್ಕೂ ಪುನರಾವರ್ತಿಸಿ. ಇದರಿಂದ ಬೆನ್ನುಹುರಿಯ ನೋವು ಕಡಿಮೆಯಾಗುತ್ತದೆ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...