More

    ಕ್ರೀಡಾಭಿವೃದ್ಧಿಗೆ ಯೋಗ ಕ್ರೀಡೆ ಸಹಕಾರಿ : ಎಂ. ಎಂ. ಹವಳದ

    ವಿಜಯವಾಣಿ ಸುದ್ದಿಜಾಲ ಗದಗ
    ಭಾರತವು ಶಿಕ್ಷಣ, ತಂತ್ರಾನ, ಆರೋಗ್ಯ ಮತ್ತು ಇನ್ನಿತರೆ ೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿರುವಂತೆ, ಕ್ರೀಡಾ ೇತ್ರದಲ್ಲೂ ಅಭಿವೃದ್ಧಿ ಸಾಧಿಸಬೇಕಾಗಿರುವುದು ಅಗತ್ಯವಾಗಿದೆ. ಜಗತಸಿದ್ಧ ಒಲಿಂಪಿಕ್​ ಕ್ರೀಡೆಗಳಲ್ಲಿ ಜಯಗಳಿಸಿದ ರಾಷ್ಟ್ರಗಳು ಪಡೆದ ಪದಕಗಳ ಪಟ್ಟಿ ವೀಸಿದರೆ ಭಾರತದ ಹೆಸರು ಕೊನೆಯಂಚಿನಲ್ಲಿರುವುದು ವಿಷಾಧನೀಯ ಎಂದು ಜಿಲ್ಲಾ ದೈಹಿಕ ಶಿಕ್ಷಣಾ-ಧಿಕಾರಿ ಎಂ. ಎಂ. ಹವಳದ ಹೇಳಿದರು.
    ಸಿದ್ಧಲಿಂಗ ನಗರದ ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜರುಗಿದ ರಾಷ್ಟ್ರೀಯ ಯೋಗ ಒಲಿಂಪಿಯಾಡ್​2023 ಸ್ಪರ್ಧೆಗೆ ಜಿಲ್ಲಾ ತಂಡದ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾ ಅಭಿವೃದ್ಧಿಗಾಗಿ ಕ್ರೀಡಾ ಸಾಮಗ್ರಿಗಳ ಉತ್ಪಾದನೆ, ತರಬೇತಿ ಕಾರ್ಯಕ್ರಮಗಳನ್ನು ಮಾಡಿದರೆ ಸಾಲದು. ಕ್ರೀಡಾ ಪಟುಗಳಲ್ಲಿ ಕ್ರೀಡಾಸಕ್ತಿ, ದೈಹಿಕ ಮತ್ತು ಮಾನಸಿಕ ಸದೃಢತೆ, ಮನೋಬಲ ಹೆಚ್ಚಿಸುವ ಕಾರ್ಯಗಳನ್ನು ಮಾಡಬೇಕು. ಈ ಕಾರ್ಯಗಳ ಯಶಸ್ಸಿಗೆ ಯೋಗ ಕ್ರೀಡೆ ಭದ್ರ ಬುನಾದಿ ಸ್ವರೂಪದಲ್ಲಿದೆ. ಯೋಗದಲ್ಲಿನ ಆಸನ, ಪ್ರಾಣಾಯಾಮ, ಧ್ಯಾನ, ಕ್ರಿಯದಿಗಳು ಕ್ರೀಡಾಪಟುಗಳಲ್ಲಿ ಹೆಚ್ಚಿನ ಆಸಕ್ತಿ, ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ ಎಂದು ಹವಳದ ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಯ ಎಸ್​. ಎನ್​. ಗಿಡ್ಡಕೆಂಚಣ್ಣವರ ಮಾತನಾಡಿ, ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಆಸಕ್ತಿ, ತಾಳ್ಮೆ ಸಹನೆ, ಸಹಕಾರ, ಯತ್ನ, ಪ್ರಯತ್ನ, ಗುಣಸ್ವಭಾವಗಳನ್ನು ರೂಢಿಸಿಕೊಳ್ಳಬೇಕು. ಕೇವಲ ಕ್ರೀಡೆಯಲ್ಲಿ ನಾನು ಗೆಲ್ಲುತ್ತೇನೆಂದು ಹೇಳಿ ಮನದಲ್ಲಿ ಯತ್ನಿಸಿದರೆ ಸಾಲದು, ನಿರಂತರ ಪ್ರಯತ್ನ ಮಾಡಬೇಕು ಎಂದರು. ಬಸವ ಯೋಗ ಕೇಂದ್ರದ ಕಾರ್ಯದಶಿರ್ ಕೆ. ಎಸ್​. ಪಲ್ಲೆದ ಯೋಗ ಕ್ರೀಡೆ ಕುರಿತು ಪ್ರಾಸ್ತಾವಿಕ ಮಾತನಾಡಿದರು.
    ಎಂ. ಎಸ್​. ಕುಚಬಾಳ, ಜಯಶ್ರೀ ಅಣ್ಣಿಗೇರಿ, ಚೇತನ ಚುಂಚಾ, ಎಸ್​. ಎಚ್​. ಹಿರೇಮಠ, ಎಸ್​. ಎಂ. ಬುರಡಿ, ಸುನಂದಾ ಜ್ಯಾನೋಪಂತರ, ಪ್ರಕಾಶ ಮದ್ದಿನ, ಸುಧಾ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts