21.4 C
Bangalore
Thursday, November 14, 2019

ನೆಲದ ಮೇಲೆ ಕುಳಿತುಕೊಳ್ಳಲು ಕಲಿಯಿರಿ

Latest News

ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹೇಳಿಕೆಗೆ ಆಕ್ರೋಶ

ಗಂಗಾವತಿ: ಸಂವಿಧಾನ ರಚನೆ ಕುರಿತು ವಿವಾದಾತ್ಮಾಕ ಹೇಳಿಕೆ ನೀಡಿದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿವಿಧ...

ಕೂಲಿ ಲೈನ್ ವಾಸಿಗಳಿಗೆ ನಿವೇಶನ ಕಲ್ಪಿಸಿ

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಪರಿಶಿಷ್ಟ ಪಂಗಡ ಮತ್ತು ಜಾತಿಗೆ ಸೇರಿದ ಕಾಫಿ ತೋಟಗಳ ಲೈನ್​ವುನೆ, ಬಾಡಿಗೆ ಮನೆ ನಿವಾಸಿಗಳಿಗೆ ಮನೆ ನಿವೇಶನ ಹಾಗೂ...

ಶಾರದಾ ಪೀಠದಲ್ಲಿ ಲಕ್ಷ ದೀಪೋತ್ಸವ

ಶೃಂಗೇರಿ: ಕಾರ್ತಿಕ ಹುಣ್ಣಿಮೆ ಅಂಗವಾಗಿ ಮಂಗಳವಾರ ಶ್ರೀಮಠದಲ್ಲಿ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಸಾಂಪ್ರದಾಯಿಕ ಪೂಜೆ, ಶ್ರೀ ರುದ್ರಯಾಗದ ಪೂರ್ಣಾಹುತಿ ಮತ್ತಿತರೆ ಧಾರ್ವಿುಕ ಕಾರ್ಯಕ್ರಮಗಳು...

ಜನವರಿಗೆ ಸೊಲ್ಲಾಪುರದಲ್ಲಿ ಗುರು ಸಿದ್ಧರಾಮ ಜಯಂತಿ

ಅಜ್ಜಂಪುರ: ಜನವರಿಯಲ್ಲಿ ಸೊಲ್ಲಾಪುರದಲ್ಲಿ ನಡೆಯಲಿರುವ ಕರ್ಮಯೋಗಿ ಗುರು ಸಿದ್ಧರಾಮ ಶಿವಯೋಗಿಗಳ ಜಯಂತ್ಯುತ್ಸವಕ್ಕೆ ಸರ್ಕಾರ ಸಹಕಾರ ನೀಡಲಿದೆ ಎಂದು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ...

ಬಿಸಿಯೂಟ ನೌಕರರ ಧರಣಿ ಅಂತ್ಯ

ಮಂಡ್ಯ: ಮಂಡ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ಬಿಸಿಯೂಟದ ಟೆಂಡರನ್ನು ಇಸ್ಕಾನ್ ಸಂಸ್ಥೆಗೆ ಕೊಟ್ಟಿರುವುದನ್ನು ವಿರೋಧಿಸಿ ನಗರದಲ್ಲಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ...

ನೆಲದ ಮೇಲೆ ತುಂಬ ಹೊತ್ತು ಕುಳಿತುಕೊಳ್ಳುವುದು ಕಷ್ಟ. ಇದಕ್ಕೆ ಸಹಕಾರಿಯಾದ ಯೋಗವಿಧಾನಗಳ ಬಗ್ಗೆ ತಿಳಿಸಿ.

| ಇಂದಿರಾ ದಾವಣಗೆರೆ

ನಮ್ಮಲ್ಲಿ ಈಗ ಬಹುತೇಕರಿಗೆ ನೆಲದ ಮೇಲೆ ಕುಳಿತುಕೊಳ್ಳುವ ಸಂಸ್ಕಾರವೇ ಇಲ್ಲವಾಗಿದೆ. ಇದು ಬಹಳ ವಿಷಾದಕರ ಸಂಗತಿ. ಏಕೆಂದರೆ ಪ್ರತಿ ಮನೆ, ಕಚೇರಿ, ಸಾರ್ವಜನಿಕ ಸೇವಾಕೇಂದ್ರ ಇತ್ಯಾದಿಗಳಲ್ಲಿ ಕೂರಲು ಕುರ್ಚಿ, ಬೆಂಚು, ಸೋಫಾ ಇತ್ಯಾದಿ ನಾನಾ ರೀತಿಯ ಐಷಾರಾಮಿ ಪೀಠೋಪಕರಣಗಳು ಬಂದಿವೆ.

ಈ ಆಧುನಿಕ ಕಾಲದಲ್ಲಿ ನೆಲದ ಮೇಲೆ ಕುಳಿತುಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಚ್ಚಿನ ಸಭೆ, ಸಮಾರಂಭ ಇತ್ಯಾದಿ ಕಾರ್ಯಕ್ರಮಗಳಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದೇ ರೂಢಿಯಾಗಿದೆ. ಅದರಲ್ಲೂ ಸೊಂಟನೋವು, ಬೆನ್ನುನೋವು ಇದ್ದವರಿಗಂತೂ ನೆಲದಲ್ಲಿ ಕುಳಿತುಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಕಾಲುಗಳನ್ನು ನೇರವಾಗಿ ಚಾಚಿ ನೆಲದಲ್ಲಿ ಕುಳಿತುಕೊಳ್ಳುವುದೇ ಇದಕ್ಕೆ ಸರಳ ಪರಿಹಾರ.

ಬಾಲ್ಯದಲ್ಲಿಯೇ ನೆಲದಲ್ಲಿ ಕುಳಿತು ಊಟ ಮಾಡುವ ಪದ್ಧತಿ, ದೇವರ ಪ್ರಾರ್ಥನೆ, ಭಜನೆ ಇತ್ಯಾದಿಗಳನ್ನು ಮಾಡುತ್ತಿದ್ದರೆ ಈ ಸಮಸ್ಯೆ ಬರುವುದಿಲ್ಲ. ಆದರೂ ನಿಂತುಕೊಂಡು, ಮಲಗಿಕೊಂಡು ಕೆಲವು ಸರಳ ವ್ಯಾಯಾಮಗಳನ್ನು ಹಾಗೂ ಯೋಗಾಸನಗಳನ್ನು ಮಾಡುವುದರ ಮೂಲಕ ಇದನ್ನು ಸರಿಪಡಿಸಬಹುದು.

ಸರಳ ಯೋಗಾಸನಗಳ ಪಟ್ಟಿ: ವಿಶ್ರಾಂತಿ ಆಸನ, ತಾಡಾಸನ, ಅರ್ಧಚಕ್ರಾಸನ, ಉತ್ಕಟಾಸನ, ಪ್ರಸಾರಿತ ಪಾದೋತ್ಥಾಸಾನ, ಉತ್ಥಿತ ಏಕಪಾದಾಸನ, ಊರ್ಧ್ವಪ್ರಸಾರಿತ ಪಾದಾಸನ, ಮಕರಾಸನ, ಶಲಭಾಸನ ಇತ್ಯಾದಿ. ಮುದ್ರೆಗಳಲ್ಲಿ ಚಿನ್ಮುದ್ರೆ, ಪೃಥ್ವೀಮುದ್ರೆ, ಪ್ರಾಣಮುದ್ರೆ.

ವಿಶ್ರಾಂತಿ ಆಸನದ ವಿಧಾನ: ಬಟ್ಟೆ ಹಾಸಿದ ನೆಲದ ಮೇಲೆ ನಿಧಾನವಾಗಿ ಕಾಲುಗಳನ್ನು ನೇರವಾಗಿಸಿ ಕುಳಿತುಕೊಳ್ಳಿ. ಕೈಗಳನ್ನು ಹಿಂದೆ ಚಾಚಿ. ದೇಹದ ಎಲ್ಲಾ ಭಾರವು ಕೈಗಳಲ್ಲಿರಲಿ. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಾಮಾನ್ಯ ಉಸಿರಾಟ ನಡೆಸುತ್ತ ಚಲನೆಯ ರೂಪದಲ್ಲಿ ಕಾಲುಗಳನ್ನು ಅಲ್ಲಾಡಿಸುತ್ತಿರಿ. ಆಮೇಲೆ ಸುಮಾರು ಐದರಿಂದ ಹತ್ತು ನಿಮಿಷ ಅಭ್ಯಾಸ ನಡೆಸಿ ವಿಶ್ರಾಂತಿ ಪಡೆಯಿರಿ.

ಪ್ರಯೋಜನ: ಹೊಸ ಹುರುಪು, ಹೊಸ ಚೈತನ್ಯ ಉಂಟಾಗುತ್ತದೆ. ಕಾಲಿನ ನರಗಳ ಸೆಳೆತ ನಿವಾರಣೆ ಹಾಗೂ ಕಾಲಿಗೆ, ಸೊಂಟಕ್ಕೆ ಬಲ ಒದಗಿಬರುವುದು. ವಯಸ್ಸಾದವರು ಹಾಸಿಗೆಯಲ್ಲಿ ಇರುವವರು ಈ ಆಸನವನ್ನು ಗೋಡೆಗೆ ಒರಗಿ ಅಭ್ಯಾಸ ನಡೆಸಬಹುದು. ಮನಸ್ಸಿಗೆ ಮುದ ನೀಡುತ್ತದೆ. ಇದೊಂದು ಸರಳ ವಿಧಾನ. ಎಲ್ಲ ವಯೋಮಾನದವರೂ ಅಭ್ಯಾಸ ನಡೆಸಬಹುದು. ನೆಲದಲ್ಲಿ ಕುಳಿತುಕೊಳ್ಳಲು ಕಷ್ಟಪಡುವವರು ನಿತ್ಯ ಅಭ್ಯಾಸ ನಡೆಸಬೇಕು.

ನೀವೂ ಪ್ರಶ್ನೆ ಕೇಳಿ

ಯೋಗದ ಮೂಲಕ ಹಲವು ರೋಗಗಳಿಗೆ ಪರಿಹಾರವಿದೆ. ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಯೋಗ ಅಂಕಣಕಾರರು ಉತ್ತರ ನೀಡಲಿದ್ದಾರೆ. ಆಸಕ್ತರು ವಯಸ್ಸು, ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆ ಮೇರೆಗೆ ನಮ್ಮ ಯೋಗ ಅಂಕಣಕಾರರು ಸಲಹೆ, ಸೂಚನೆ ನೀಡಲಿದ್ದಾರೆ. ವಿಳಾಸ: ಸಂಪಾದಕರು, ಯೋಗಕ್ಷೇಮ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲ ಮಹಡಿ, ಐದನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18. ಇಮೇಲ್: [email protected]

- Advertisement -

Stay connected

278,453FansLike
559FollowersFollow
606,000SubscribersSubscribe

ವಿಡಿಯೋ ನ್ಯೂಸ್

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...

VIDEO| ಈ​ ವಿಡಿಯೋ...

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ...

VIDEO: ದುರ್ಗಾಪೂಜಾ ಥೀಮ್​...

ಕೋಲ್ಕತ: ತೃಣಮೂಲ ಕಾಂಗ್ರೆಸ್​ನಿಂದ ನೂತನವಾಗಿ ಆಯ್ಕೆಯಾದ ಸಂಸದೆಯರಾದ ನುಸ್ರತ್ ಜಹಾನ್​ ಹಾಗೂ ಮಿಮಿ ಚಕ್ರಬರ್ತಿ ದುರ್ಗಾಪೂಜಾ ಹಾಡಿಗೆ ಮನಮೋಹಕವಾಗಿ ನೃತ್ಯ ಮಾಡಿದ್ದು ವಿಡಿಯೋ ಭರ್ಜರಿ ವೈರಲ್​ ಆಗಿದೆ. ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ಈ...