25.1 C
Bangalore
Friday, December 6, 2019

ಶಾಲೇಲಿ ಕಡ್ಡಾಯವಾಗಲಿ ಯೋಗ, ಚೆಸ್

Latest News

ಚಿನ್ನಾಭರಣ ಪ್ರದರ್ಶನ, ಮಾರಾಟ

ವಿಜಯಪುರ: ಇಲ್ಲಿನ ಅಥಣಿ ರಸ್ತೆಯಲ್ಲಿರುವ ಲೀ ಗ್ರ್ಯೆಂಡಿ ಹೋಟೆಲ್‌ನಲ್ಲಿ ರಿಲಾಯನ್ಸ್ ಜ್ಯುವೆಲ್ಸ್ ವತಿಯಿಂದ ಡಿ. 6ರಿಂದ ನಾಲ್ಕು ದಿನಗಳ ಕಾಲ ಚಿನ್ನ ಮತ್ತು...

ವಿದ್ಯಾರ್ಥಿಗಳು ಸಮಾಜಮುಖಿ ಜೀವನ ನಡೆಸಿ

ಹುನಗುಂದ: ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸ್ವಾಸ್ಥೃ ಸಮಾಜ ಪರಿಕಲ್ಪನೆಯೊಂದಿಗೆ ಸಮಾಜಮುಖಿ ಜೀವನ ನಡೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಮನ್ವಯಾಧಿಕಾರಿ ಗುರುರಾಜ್...

ಯೋಗ ತರಬೇತಿಗೆ ಆಸ್ಟ್ರೇಲಿಯಾದಿಂದ ಆಹ್ವಾನ, ಬಳ್ಳಾರಿ ಸಾಧನಾ ಯೋಗ ಕೇಂದ್ರದ ರೂಪಾ ಮುರಳೀಧರ್ ಹೇಳಿಕೆ

ಬಳ್ಳಾರಿ: ಆಸ್ಟ್ರೇಲಿಯಾದ ಜನರಿಗೆ ಯೋಗ ಪದ್ಧತಿ ಬಗ್ಗೆ ತುಂಬಾ ಆಸಕ್ತಿ ಇದೆ. ಸೇವಾ ಆಸ್ಟ್ರೇಲಿಯಾ ಸಂಸ್ಥೆ ಮೂಲಕ ಆಸ್ಟ್ರೇಲಿಯಾದಲ್ಲಿ ಯೋಗ ತರಬೇತಿ ನೀಡಲು...

ಸೆನ್ಸೆಕ್ಸ್​ 334 ಅಂಶಕ್ಕೂ ಹೆಚ್ಚು ಕುಸಿತ: ನಿಫ್ಟಿ 12,000ಕ್ಕೂ ಕೆಳಕ್ಕೆ…

ಮುಂಬೈ: ಷೇರುಪೇಟೆಯ ವಾರಾಂತ್ಯದ ದಿನದ ವಹಿವಾಟಿನ ಕೊನೆಗೆ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 334 ಅಂಶ ಕುಸಿತ ಮತ್ತು ನ್ಯಾಷನಲ್...

ಬಳ್ಳಾರಿ ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ

ಬಳ್ಳಾರಿ: ನರೇಗಾ ರಾಷ್ಟ್ರೀಯ ಪ್ರಶಸ್ತಿ ಶಿಫಾರಸಿಗೆ ದೇಶದ ಒಂಬತ್ತು ಜಿಲ್ಲೆಗಳ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಬಳ್ಳಾರಿ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಶುಕ್ರವಾರ...

ದಾವಣಗೆರೆ: ಯೋಗ ಮತ್ತು ಚದುರಂಗ ಕ್ರೀಡೆಯನ್ನು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯಗೊಳಿಸಬೇಕು ಎಂದು ಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ ಆಶಿಸಿದರು.

ಸಪ್ತಶ್ರೀ ಸೆಂಟರ್ ಫಾರ್ ಯೋಗ ಅಂಡ್ ಸ್ಪಿರಿಚುಯೆಲ್ ಅವೇರ್‌ನೆಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ ಅಭಿನವ ರೇಣುಕ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಎರಡೂ ಕ್ರೀಡೆಗಳಿಂದ ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಬಹುದು. ಈ ಬಗ್ಗೆ ಸರ್ಕಾರವನ್ನು ಆಗ್ರಹಿಸಿದ್ದೇವೆ. ಇದು ಜಾರಿಯಾಗಬೇಕೆಂದರು.

ಉದ್ಯಮಿ ಎಂ. ಮಂಜುನಾಥ್ ಉದ್ಘಾಟಿಸಿದರು. ಸಪ್ತಶ್ರೀ ಯೋಗ ಕೇಂದ್ರದ ಅಧ್ಯಕ್ಷ ಶಂಕರ್ ಖಟಾವ್‌ಕರ್, ಉಪಾಧ್ಯಕ್ಷ ಬಿ.ರೇವಣಸಿದ್ದಪ್ಪ, ಸಂಸ್ಥಾಪಕ ಕೆ.ಜೈಮುನಿ, ಜಿಲ್ಲಾ ಯೋಗ ಒಕ್ಕೂಟದ ಪ್ರ.ಕಾರ್ಯದರ್ಶಿ ವಾಸುದೇವ ರಾಯ್ಕರ್, ಲಿಂಗರಾಜ್ ಇದ್ದರು. ಬಾಲಕಿಯರಾದ ಸೃಷ್ಟಿ, ನಮಿತಾ, ತನ್ಮಯಾ ಯೋಗ ನೃತ್ಯ ಮಾಡಿ ರಂಜಿಸಿದರು.

ಯೋಗ ಸ್ಪರ್ಧೆಯಲ್ಲಿ ಕರ್ನಾಟಕವಲ್ಲದೆ ಕೇರಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಮದ 250ಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸಿದ್ದಾರೆ.

ಸಾಗರದ ಸಂಧ್ಯಾಗೆ ಯೋಗ ನಂದಿಶ್ರೀ ಪ್ರಶಸ್ತಿ: ಸಾಗರದ ಎಂ.ಎಸ್.ಸಂಧ್ಯಾ ಅವರು ನಗರದಲ್ಲಿ ನಡೆದ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯ ಚಾಂಪಿಯನ್ ಆಫ್ ಚಾಂಪಿಯನ್ ಮೀಟ್‌ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಹರಿಹರ ಯೋಗ ನಂದಿಶ್ರೀ ಪ್ರಶಸ್ತಿಗೆ ಭಾಜನರಾದರು.

ಚಾಂಪಿಯನ್ ಆಫ್ ಚಾಂಪಿಯನ್ ಮೀಟ್‌ನಲ್ಲಿ ನಿಗದಿತ 10 ವಿಭಿನ್ನ ಆಸನ ಪ್ರದರ್ಶಿಸಿದ ಎಂ.ಎಸ್.ಸಂಧ್ಯಾ ಪ್ರಶಸ್ತಿಗೆ ಪಾತ್ರರಾದರು. ಸಾಗರದ ನಿರ್ಮಲಾ ಕೋಡಿಕರ್ ದ್ವಿತೀಯ, ಹಾವೇರಿಯ ಜಿ.ಕೆ.ಜಯಲಕ್ಷ್ಮಿತೃತೀಯ ಸ್ಥಾನ ಪಡೆದರು.

ವಿಜೇತರ ವಿವರ ಇಂತಿದೆ: 8 ವರ್ಷದ ಬಾಲಕರು-ಶಿರಗುಪ್ಪಿಯ ವರುಣ್ ಎಚ್.ಕುರಹಟ್ಟಿ, ನವೀನ್‌ಕುಮಾರ್ ಎಂ.ಮಜ್ಜಿಗೌಡ, ಕಡೂರಿನ ಕೆ.ಎಸ್.ಚಿನ್ಮಯ್. 8 ವರ್ಷದೊಳಗಿನ ಬಾಲಕಿಯರು: ಹರಿಹರದ ನಮಿತಾ ಎನ್.ಪ್ರಭು, ಹಾವೇರಿಯ ಜಿ.ಕೆ.ಜಯಲಕ್ಷ್ಮಿ, ಸಾಗರದ ಕೆ.ಎ.ಪ್ರಜ್ಞಾ ಹಾಗೂ ಶಿರಗುಪ್ಪಿಯ ರತ್ನಾ ಮಂಜುನಾಥ್ (ಟೈ).

9ರಿಂದ 13 ವರ್ಷದ ಬಾಲಕರು: ಸಾಗರದ ಆರ್.ಸಿ.ಶ್ರೇಯಸ್, ವಿ.ಎಸ್.ಹಿತೇಶ್ ಮತ್ತು ಬಿ.ಬಾಸ್ಕರ್ (ಟೈ), ಪುತ್ತೂರಿನ ಕೆ.ಜೆ.ನಿಶ್ಚಲ್. 14ರಿಂದ 17ವರ್ಷದ ಬಾಲಕರು-ಸಿರ್ಸಿಯ ಅಭಿಷೇಕ್ ಬಿ.ಹೆಗಡೆ, ಹಾವನೂರಿನ ಕಾರ್ತಿಕ್ ಎಂ.ಅರೇರ್, ಶಿಗ್ಗಾಂವ್‌ನ ಮಹೇಶ್ ಬಸವರಾಜ್, ಬಾಲಕಿಯರ ವಿಭಾಗ-ಸಾಗರದ ಬಿ.ಎಸ್.ಸೃಷ್ಟಿ ಮತ್ತು ದಾವಣಗೆರೆಯ ಸಾನಿಯಾ (ಟೈ), ಶಿರಗುಪ್ಪಿಯ ಪೂಜಾ ವೈ. ತಳವಾರ್, ದೊಡ್ಡಬಳ್ಳಾಪುರದ ಲಾವಣ್ಯ.

18ರಿಂದ 22 ವರ್ಷದ ಬಾಲಕಿಯರು: ಶಿರಗುಪ್ಪಿಯ ಯು.ಜ್ಯೋತಿ, ಮಹಾರಾಷ್ಟ್ರದ ಎ.ಎನ್.ಶ್ರೇಯಾ, ಶಿರಗುಪ್ಪಿಯ ಸವಿತಾ ನಿಂಗಪ್ಪ, 23ರಿಂದ 30 ವರ್ಷದ ಪುರುಷರು-ಸವದತ್ತಿಯ ಸಂಜು ವಿ.ಬೇಲಿಕುಪ್ಪಿ, ಬೆಂಗಳೂರಿನ ಪಿ.ಯು.ಗೌತಮ್, ಹಾವನೂರಿನ ಜಿ.ಹನುಮಂತಪ್ಪ, ಮಹಿಳೆಯರ ವಿಭಾಗ-ಪುಣೆಯ ಶಿವಾನಿ ಚಿಂದೋಡಿ, ಶಿವಮೊಗ್ಗದ ಎಸ್. ಶ್ವೇತಾ, ಶಿಗ್ಗಾಂವ್‌ನ ಅಶ್ವ್ವಿನಿ ಆರ್.ಗೌಡರ್.

31ರಿಂದ 40 ವರ್ಷದ ಪುರುಷರು: ಶಿವಮೊಗ್ಗದ ಸಿ.ನಿಶಾಂತ್, ಮೈಸೂರಿನ ಅವಿನಾಶ್, ಪುಣೆಯ ವಾಸುದೇವ್ ಪಂಡಿತ್ ಪಾಟೀಲ್, 41ರಿಂದ 50 ವರ್ಷದ ಪುರುಷರು-ಬೆಂಗಳೂರಿನ ಎಸ್.ಶಿವಾನಂದ್, ಕೆ.ಆರ್.ಪುರಂನ ರಾಜಶೇಖರ್, ಕೆ.ವಿ.ಮುರಳೀಧರ, 51ರಿಂದ 60 ವರ್ಷದ ಪುರುಷರಲ್ಲಿ ಪುಣೆಯ ಶಿವಾಜಿ, ಬೆಂಗಳೂರಿನ ಡಿ.ನಾಗರಾಜ್, ಶಿವಮೊಗ್ಗದ ಡಿ.ಕೆ.ಬಾಲಚಂದ್ರ.

ಯೋಗಾಪಟುಗಳಿಗೆ ಧನಸಹಾಯ: ಥೈಲಾಂಡ್‌ಗೆ ಆಯ್ಕೆಯಾಗುವ ಇಬ್ಬರು ಕ್ರೀಡಾಪಟುಗಳಿಗೆ ಕ್ರಮವಾಗಿ 30 ಸಾವಿರ, 15 ಸಾವಿರ ರೂ.ನೀಡಲಾಗುವುದು. ಇದಲ್ಲದೆ ಗುಂಪುವಾರು ಮೊದಲ ಮೂರು ಸ್ಥಾನಗಳಿಗೆ 10 ಸಾವಿರ, 8 ಸಾವಿರ ಹಾಗೂ 6 ಸಾವಿರ ರೂ. ನೀಡುವುದಾಗಿ ಚೆನ್ನೈನ ಯೋಗ ಶಿಕ್ಷಕ ಡಾ.ಎಸ್.ಆರ್ಮುಗಂ ವಾಗ್ದಾನ ಮಾಡಿದರು.

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...