ಬಾಗಲಕೋಟೆ ಯೋಧ ಕಾಶ್ಮೀರದಲ್ಲಿ ಹುತಾತ್ಮ

ಬಾಗಲಕೋಟೆ/ಮುದ್ದೇಬಿಹಾಳ: ಜಮ್ಮು-ಕಾಶ್ಮೀರದಲ್ಲಿ ಬುಧವಾರ ಸಂಭವಿಸಿದ ಆರ್​ಡಿಎಕ್ಸ್ ಸ್ಪೋಟದಲ್ಲಿ ಬಾಗಲಕೋಟೆ ತಾಲೂಕಿನ ಇಲಾಳ ಗ್ರಾಮದ ಯೋಧ ಶ್ರೀಶೈಲ ರಾಯಪ್ಪ ಬಳಬಟ್ಟಿ (ತೋಳಮಟ್ಟಿ) (34) ಹುತಾತ್ಮರಾಗಿದ್ದಾರೆ.

ಸೇನೆ ಅಧಿಕಾರಿಗಳು ದೂರವಾಣಿ ಮೂಲಕ ಅವರ ಮನೆಗೆ ಮಾಹಿತಿ ನೀಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಳಬಟ್ಟಿ ಗ್ರಾಮದವರಾದ ಶ್ರೀಶೈಲ ಬಾಲ್ಯದಲ್ಲಿಯೇ ತಂದೆ ರಾಯಪ್ಪ ಅವರ ತಾಯಿ ತವರು ಮನೆಯಾದ ಇಲಾಳ ಗ್ರಾಮಕ್ಕೆ ಬಂದು ನೆಲೆಸಿದ್ದರು.

ಇಲ್ಲಿಯೇ ಪಿಯುಸಿ ಮುಗಿಸಿ, 2005 ಸೆಪ್ಟೆಂಬರ್​ನಲ್ಲಿ ಹೈದ್ರಾಬಾದ್​ನಲ್ಲಿ ಸೇನೆಗೆ ಸೇರಿದ್ದರು. ಉತ್ತರಾಖಂಡ, ರಾಜಸ್ಥಾನದಲ್ಲಿ ಸೇವೆ ಸಲ್ಲಿಸಿ, ಸದ್ಯ ಜಮ್ಮು-ಕಾಶ್ಮೀರದಲ್ಲಿ 12 ಮದ್ರಾಸ್ ರೆಜಿಮೆಂಟ್​ನಲ್ಲಿದ್ದರು. 2008ರಲ್ಲಿ ಅವರು ವಿವಾಹವಾಗಿದ್ದರು. ಅವರಿಗೆ ತಂದೆ, ತಾಯಿ, ಪತ್ನಿ, ಆರು ವರ್ಷದ ಪುತ್ರಿ, ನಾಲ್ಕು ವರ್ಷದ ಪುತ್ರ ಇದ್ದಾರೆ. ತರಬೇತಿ ವೇಳೆ ಆರ್​ಡಿಎಕ್ಸ್ ಸ್ಫೋಟ ಸಂಭವಿಸಿದೆ ಎಂದು ಸೇನೆ ಹೇಳಿದೆ. ಘಟನೆಯಲ್ಲಿ 7 ಯೋಧರು ಗಾಯಗೊಂಡಿದ್ದಾರೆ.

ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಹೋದರ ಶ್ರೀಶೈಲ ಬಳಬಟ್ಟಿ ಹುತಾತ್ಮರಾದ ಬಗ್ಗೆ ಸೇನಾಧಿಕಾರಿಗಳು ಬುಧವಾರ ಮಧ್ಯಾಹ್ನ 2 ಗಂಟೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

|ಶೇಖಪ್ಪ ಬಸಪ್ಪ ತೋಳಮಟ್ಟಿ ಹುತಾತ್ಮ ಯೋಧನ ಚಿಕ್ಕಪ್ಪನ ಮಗ

Leave a Reply

Your email address will not be published. Required fields are marked *