ನಿಪ್ಪಾಣಿ: ನಗರದಲ್ಲಿ ಹಿರೇಕೋಡಿಯ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಖಂಡಿಸಿ ಬುಧವಾರ ಸಮಸ್ತ ಜೈನ ಸಮುದಾಯ ಹಾಗೂ ವಿಶ್ವ ಹಿಂದು ಪರಿಷತ್ ವತಿಯಿಂದ ಮೌನ ಮೆರವಣಿಗೆ ನಡೆಸಿ ತಹಸೀಲ್ದಾರ್ ವಿಜಯ ಕಡಕೋಳ ಅವರಿಗೆ ಮನವಿ ನೀಡಲಾಯಿತು.
ಕೊಲ್ಲಾಪುರದ ಲಕ್ಷ್ಮೀಸೇನ ಮಹಾರಾಜರು ಮಾತನಾಡಿ, ಇತ್ತೀಚೆಗೆ ಸಂತರ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ. ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಮಾನವೀಯತೆಗೆ ಬಳಿದ ಕಳಂಕ. ಕೊಲೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜತೆಗೆ ಮುನಿಗಳಿಗೆ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ವಿಎಚ್‌ಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಲಿಂಗ ಸಮಾಧಿ ಮಠದ ಪ್ರಾಣಲಿಂಗ ಸ್ವಾಮೀಜಿ, ಅರುಣಾನಂದ ತೀರ್ಥ ಸ್ವಾಮೀಜಿ, ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ನಗರದ ಗಾಂಧಿ ಚೌಕ್‌ನಿಂದ ಆರಂಭಗೊಂಡ ಮೌನ ಮೆರವಣಿಗೆಯು ಕೋಠಿವಾಲೆ ಕಾರ್ನರ್, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಹಳೆಯ ಪಿ.ಬಿ. ರಸ್ತೆ, ನಗರಸಭೆ ಮೂಲಕ ತಹಸೀಲ್ದಾರ್ ಕಚೇರಿ ತಲುಪಿ, ತಹಸೀಲ್ದಾರ್‌ರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ರಾಜು ಗುಂದೇಶಾ, ಅರುಣ ಖೋಡಬೋಲೆ, ವಿಲಾಸ ಉಪಾಧ್ಯೆ, ರವೀಂದ್ರ ಶ್ರೀಪನ್ನವರ, ಪ್ರಶಾಂತ ಗುಂಡೆ, ಆಕಾಶ ಶೆಟ್ಟಿ, ಆಶಿಸ ಖೋಡಬೋಲೆ, ಮಿಲಿಂದ ಮೆಹ್ತಾ, ಪ್ರಕಾಶ ಶಹಾ, ಸತೀಶ ವಖಾರಿಯಾ, ರಾಜೇಂದ್ರ ಕಂಗಳೆ, ರಿತೇಶ ಶಹಾ, ಸೂರಜ ರಾಥೋಡ, ಡಾ.ರಾಜೇಶ ಬನವನೆ, ರಾಜೇಶ ಅವಟೆ, ಪ್ರತೀಕ ಶಹಾ, ರಾಜು ಮೆಹ್ತಾ, ಶಶಿಕುಮಾರ ಗೋರವಾಡೆ, ಸೋನಾಲಿ ಉಪಾಧ್ಯೆ, ಸೋನಲ ಕೊಠಡಿಯಾ, ಕಾಂಚನ ಬಿರನಾಳೆ ಇತರರಿದ್ದರು.