ಬಂಧಿಸಲು ಹೋಗಿದ್ದ ಪೇದೆ ಮೇಲೆ ಹಲ್ಲೆಗೆ ಯತ್ನ: ಆತ್ಮರಕ್ಷಣೆಗಾಗಿ ರೌಡಿ ಶೀಟರ್​ಗಳ ಮೇಲೆ ಫೈರಿಂಗ್​​

ಬೆಂಗಳೂರು: ಆರೋಪಿಯನ್ನು ಬಂಧಿಸುವ ವೇಳೆ ಪೇದೆ ಮೇಲೆ ಹಲ್ಲೆಗೆ ಮುಂದಾದ ರೌಡಿ ಶೀಟರ್​ಗಳ ಮೇಲೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಯಶವಂತಪುರ ಪೊಲೀಸ್​ ಠಾಣಾ ಇನ್ಸ್​​ಪೆಕ್ಟರ್ ಮುದ್ದರಾಜ್ ಅವರಿಂದ ​ರೌಡಿ ಶೀಟರ್​ಗಳಾದ ಪ್ರಶಾಂತ್​, ಗೌತಮ್​ ಹಾಗೂ ಸಲ್ಮಾನ್​ ಎಂಬುವವರ ಮೇಲೆ ಫೈರಿಂಗ್ ನಡೆದಿದೆ. ಈ ವೇಳೆ ರೌಡಿ ಪ್ರಶಾಂತ್​ ಕಾಲಿಗೆ ಗುಂಡೇಟಿ ಬಿದ್ದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ರಾತ್ರಿ 12.ಗಂಟೆ ವೇಳೆಗೆ ಆರೋಪಿಯನ್ನು ಬಂಧಿಸಲು ಹೋಗಿದ್ದಾಗ ಪೇದೆ ಶಿವಕುಮಾರ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ರೌಡಿಗಳು ಮುಂದಾಗಿದ್ದರು. ಇದರಿಂದ ಪೇದೆ ಶಿವಕುಮಾರ್​ಗೆ ಮಚ್ಚಿನೇಟು ಬಿದ್ದಿದ್ದು, ಅವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ.(ದಿಗ್ವಿಜಯ ನ್ಯೂಸ್​)