ಹಸಿವಿನಿಂದ ತತ್ತರಿಸಿರುವ ಯೆಮೆನ್​ಗೆ ಸೌದಿ ಅರೇಬಿಯಾ, ಯುಎಇಯಿಂದ 500 ಮಿಲಿಯನ್​ ಡಾಲರ್​ ನೆರವು

ಸೌದಿ: ಯೆಮೆನ್ ​ ಹುತಿ ಬಂಡಾಯಕೋರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಸೌದಿ ಅರೇಬಿಯಾ, ಯುಎಇ ಮಿಲಿಟರಿ ಒಕ್ಕೂಟ, ಹಸಿವಿನಿಂದ ತತ್ತರಿಸಿರುವ ಯೆಮೆನ್​ಗೆ 500 ಮಿಲಿಯನ್​ ಡಾಲರ್​ ನೆರವು ನೀಡುವುದಾಗಿ ಘೋಷಿಸಿದೆ.

ಯೆಮೆನ್​ನಲ್ಲಿನ ಸುಮಾರು 10 ಮಿಲಿಯನ್​ ಜನರಿಗೆ ಆಹಾರ ಬಿಕ್ಕಟ್ಟು ಪರಿಸ್ಥಿತಿ ಉಂಟಾಗಿದೆ. ಅದಕ್ಕಾಗಿ ಸೌದಿ ಅರೇಬಿಯಾ ಮತ್ತು ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ) ಗಳು ತಲಾ 250 ಮಿಲಿಯನ್​ ಡಾಲರ್​ಗಳನ್ನು ನೀಡಲಿವೆ ಎಂದು ಸಲ್ಮಾನ್​ ಕಿಂಗ್​ ಮಾನವೀಯ ನೆರವು ಹಾಗೂ ಪರಿಹಾರ ಕೇಂದ್ರದ ಮೇಲ್ವಿಚಾರಕ ಅಬ್ದುಲ್ಲಾ ರಬೀಹಾ​ ತಿಳಿಸಿದ್ದಾರೆ.

ಪರಿಹಾರ ಹಣವನ್ನು ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ನೆರವು ಕೇಂದ್ರಗಳ ಮೂಲಕ ನೀಡಲಾಗುವುದು ಎಂದು ಹೇಳಿದ್ದಾರೆ.

2015ರಲ್ಲಿ ಹುತಿ ಬಂಡಾಯಕೋರರು ಯೆಮೆನ್​ ರಾಜಧಾನಿ ಸಾನಾವನ್ನು ವಶ ಪಡಿಸಿಕೊಂಡ ಬಳಿಕ ಯೆಮೆನ್​ ಅಧ್ಯಕ್ಷನ ಸಹಾಯಕ್ಕೆ ಸೌದಿ ಅರೇಬಿಯಾ, ಯುಎಇಗಳು ನಿಂತಿದ್ದವು.