25.1 C
Bangalore
Saturday, December 14, 2019

VIDEO| ಗ್ಲಾಮರ್​ ಲುಕ್​ನಿಂದ ಒಂದೇ ದಿನದಲ್ಲಿ ಫೇಮಸ್​ ಆದ ಚುನಾವಣಾ ಅಧಿಕಾರಿಯ ಫಾಲೋವರ್ಸ್​ ಸಂಖ್ಯೆ ಹೆಚ್ಚಳ!

Latest News

ಬೆಳಗಾವಿ: ಅಂಗನವಾಡಿ ಮಕ್ಕಳ ಆರೋಗ್ಯ ವಿಚಾರಿಸಿದ ಸಚಿವೆ

ಅಂಗನವಾಡಿ, ಮಕ್ಕಳ, ಆರೋಗ್ಯ, ವಿಚಾರಿಸಿದ, ಸಚಿವೆ, ಸಾಂಬಾರು, ಬಿದ್ದು, ಗಾಯಗೊಂಡ, ಪ್ರಕರಣ, ಸರ್ಕಾರದಿಂದಲೇ, ಖರ್ಚು, ಭರಿಸುವ, ಭರವಸೆ, ಬೆಳಗಾವಿ, Anganwadi, Child, Health,...

ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡಕ್ಕೆ ಭೂಮಿಪೂಜೆ

ಮುದ್ದೇಬಿಹಾಳ: ತಾಲೂಕಿನ ಇಂಗಳಗೇರಿ ಗ್ರಾಪಂನ ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಗ್ರಾಪಂ ಅಧ್ಯಕ್ಷ ರಾಜಶೇಖರ ಕರಡ್ಡಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.ಮಹಾತ್ಮ...

ಈರುಳ್ಳಿಯನ್ನು ಗಮನಿಸದ ಕೌನ್ಸಿಲರ್​ಗೆ ಹಿಗ್ಗಾಮುಗ್ಗಾ ಥಳಿಸಿದ ತರಕಾರಿ ಅಂಗಡಿ ಮಾಲೀಕರು; ಬೆಲೆ ಏರಿಕೆಯಿಂದ ಆಗುತ್ತಿರುವ ಅವಾಂತರಗಳು ಒಂದೆರಡಲ್ಲ…

ಚೆಮ್ಮದ್​: ಕೇರಳದ ತಿರೂರಂಗಡಿ ತಾಲೂಕಿನ ಚೆಮ್ಮಾಡ್​​ನಲ್ಲಿ ಕೆಲವು ತರಕಾರಿ ಅಂಗಡಿಗಳ ಮಾಲೀಕರು ಸ್ಥಳೀಯ ಕೌನ್ಸಿಲರ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೌನ್ಸಿಲರ್​ ಎಂ.ಎನ್. ಮೊಯ್ದೀನ್ ಅವರು ' ಹೊಡೆಯಬೇಡಿ,...

ಲಿಂಗಪೂಜೆಯಿಂದ ದೃಷ್ಟಿದೋಷ ನಿವಾರಣೆ

ವಿಜಯಪುರ: ಗುರು ಸಂಸ್ಕಾರ, ತತ್ವನಿಷ್ಟ ಹಾಗೂ ಸಂವೇದನಾಶೀಲನಾಗಿರಬೇಕು ಎಂದು ಸಿ.ಎಂ. ಹಿರೇಮಠ ಹೇಳಿದರು.ನಗರದ ಮಲ್ಲಿಕಾರ್ಜುನ ದೇವಸ್ಥಾನದ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ...

ಬೆಳಗಾವಿ: ಜಿಲ್ಲಾಸ್ಪತ್ರೆಗೆ ಕಡೋಲಿ ಗ್ರಾಮಸ್ಥರ ಮುತ್ತಿಗೆ

ಬೆಳಗಾವಿ: ತಾಲೂಕಿನ ಕಡೋಲಿ ಗ್ರಾಮದಲ್ಲಿ ಬಾಲಕಿಯ ಅತ್ಯಾಚಾರ ಪ್ರಕರಣ ಖಂಡಿಸಿ ನಗರದ ಜಿಲ್ಲಾಸ್ಪತ್ರೆಗೆ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಗ್ರಾಮದ ನೂರಾರು ಮಹಿಳೆಯರು ಶುಕ್ರವಾರ...

ನವದೆಹಲಿ: ಚುನಾವಣಾ ಅಧಿಕಾರಿಯಾಗಿ ಬಂದು ತಮ್ಮ ಸೌಂದರ್ಯದಿಂದಲೇ ಒಂದೇ ದಿನದಲ್ಲಿ ಅಸಂಖ್ಯಾತ ಜನರ ಮನದಲ್ಲಿ ಸ್ಥಾನ ಗಿಟ್ಟಿಸಿ ಸೆಲೆಬ್ರಿಟಿಯಾದ ಅಧಿಕಾರಿಯ ಕತೆ ಇದು…

ರೀನಾ ದ್ವಿವೇದಿ(32), ಇವರು ಉತ್ತರ ಪ್ರದೇಶದ ಪಿಡಬ್ಲ್ಯುಡಿ ಅಧಿಕಾರಿಯ ಕಿರಿಯ ಸಹಾಯಕಿ. ಮೇ 5ರಂದು ಲಖನೌದ ನಾಗ್ರಾಮ್‌ನಲ್ಲಿ ನಡೆದ 5ನೇ ಹಂತದ ಲೋಕಸಭೆ ಚುನಾವಣಾ ದಿನ ಹಳದಿ ಬಣ್ಣದ ಸೀರೆ ಧರಿಸಿ ಇವಿಯಂ ಹಿಡಿದು ಬಂದಿದ್ದರು. ಈ ವೇಳೆ ಪತ್ರಕರ್ತರೊಬ್ಬರು ತಮ್ಮ ಕ್ಯಾಮರಾ ಕಣ್ಣಲ್ಲಿ ರೀನಾರನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದೇ ತಡ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿ ಕಾಮೆಂಟ್​ ಸುರಿಮಳೆಯೇ ಹರಿದುಬಂತು. ಒಂದೇ ದಿನದಲ್ಲಿ ರೀನಾ​ ಫುಲ್​ ಫೇಮಸ್​​ ಆಗಿಬಿಟ್ಟರು.

ಇದೀಗ ರೀನಾ ಅವರು ಎಲ್ಲೆಡೆ ಗುರುತಿಸಿಕೊಂಡಿರುವುದರಿಂದ ಅವರು ವಾಟ್ಸಾಪ್ ಹಾಗೂ ಟಿಕ್ ಟಾಕ್ ಮೂಲಕವೂ ಮತ್ತಷ್ಟು ಜನಪ್ರಿಯತೆ ಗಳಿಸಿದ್ದಾರೆ. ರೀನಾ ಅವರಿಗೆ ಅತಿಥಿಯಾಗಿ ಬರಲು ದಿನಕ್ಕೆ ನೂರಾರು ಕರೆಗಳು ಬರುತ್ತಿವೆಯಂತೆ. ಅಲ್ಲದೆ, ಟಿಕ್​ಟಾಕ್ ಹಾಗೂ ಸಾಮಾಜಿಕ ಜಾಲತಾಣದ ಫಾಲೋವರ್ಸ್​ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ರೀನಾ ಅವರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

ನಾನು ಬಹುಬೇಗನೇ ವಿವಾಹ ಜೀವನಕ್ಕೆ ಕಾಲಿಟ್ಟೆ. ಆದರೆ, ಬಳಿಕ ನನ್ನ ವೃತ್ತಿ ಜೀವನವನ್ನು ನಾನೇ ಪಡೆದುಕೊಂಡೆ. ಇದೀಗ ಜನರು ನನ್ನನ್ನು ಇಷ್ಟಪಡುತ್ತಿದ್ದಾರೆ. ಪ್ರತಿಯೊಂದು ಕ್ಷಣವನ್ನು ನಾನು ಎಂಜಾಯ್​ ಮಾಡುತ್ತಿದ್ದೇನೆ. ನನ್ನನ್ನು ಗುರುತಿಸಲಿ ಎಂದು ಯಾರು ತಾನೇ ಇಷ್ಟಪಡುವುದಿಲ್ಲ? ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ರೀನಾ ತಿಳಿಸಿದ್ದಾರೆ.

ಇದೇ ನನ್ನ ಮೊದಲ ಚುನಾವಣೆಯಲ್ಲ. ಹಲವು ಚುನಾವಣೆಗಳಲ್ಲಿ ನಾನು ಕಾರ್ಯನಿರ್ವಹಿಸಿದ್ದೇನೆ. ಹಾಗೆಲ್ಲ ನನ್ನ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಈ ಬಾರಿ ನಾನು ಸೆಲೆಬ್ರಿಟಿಯಾಗಿಬಿಟ್ಟಿದ್ದೇನೆ ಎಂದು ರೀನಾ ಹರ್ಷ ವ್ಯಕ್ತಪಡಿಸಿದ್ದಾರೆ.

ರೀನಾ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಟ್ರೋಲ್​ ಹಾಗೂ ಮೀಮ್ಸ್​ಗಳು ಹರಿಬಂದಿತ್ತು. ಗ್ಯಾರಂಟಿ ರೀನಾ ಅವರು ಇರುವ ಬೂತ್​ನಲ್ಲಿ ನೂರಕ್ಕೆ ನೂರರಷ್ಟು ಮತದಾನ ಆಗುವುದರಲ್ಲಿ ಡೌಟೇ ಇಲ್ಲ ಎಂದೆಲ್ಲ ಕಮೆಂಟ್​​ಗಳನ್ನು ಮಾಡಿದ್ದರು. (ಏಜೆನ್ಸೀಸ್​)

https://www.youtube.com/watch?v=eLJVtkqgvDY

https://www.youtube.com/watch?v=cvOBJGSj1lM

Stay connected

278,755FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...

FACT CHECK| ಅಸ್ಸಾಂ ಪ್ರತಿಭಟನೆ ಹೆಸರಿನಲ್ಲಿ ವೈರಲ್​ ಆದ ಮಹಿಳಾ...

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರ ಅಂಕಿತವಾಗುವ ಮೂಲಕ ಮಸೂದೆ ಅಧಿಕೃತವಾಗಿ ಜಾರಿಯಾಗಿದೆ. ಆದರೆ, ಇದನ್ನು ವಿರೋಧಿಸಿ ಅಸ್ಸಾಂನಲ್ಲಿ...