ಬಿ.ರಂ.ಬೆಟ್ಟದ ಹುಂಡಿಯಲ್ಲಿ ರೂ.17.29ಲಕ್ಷ ಸಂಗ್ರಹ

ಯಳಂದೂರು: ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ಗುರುವಾರ ಹುಂಡಿಯ ಪರ್ಕಾವಣೆ ನಡೆಯಿತು.

ಇದರಲ್ಲಿ 15,91,295 ರೂ. ನೋಟಿನ ರೂಪದಲ್ಲಿ, 1,37,742ರೂ. ನಾಣ್ಯದ ರೂಪದಲ್ಲಿ ಒಟ್ಟು 17,29,037 ರೂ. ಸಂಗ್ರಹವಾಗಿದೆ. 2 ಚಿನ್ನದ ತಾಳಿಗಳು ಲಭಿಸಿವೆ ಎಂದು ದೇಗುಲದ ಕಾರ್ಯನಿರ್ವಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ಮಾಹಿತಿ ನೀಡಿದರು. ಇದು ಕಳೆದ ನಾಲ್ಕು ತಿಂಗಳ ನಂತರ ದೇಗುಲದಲ್ಲಿ ಸಂಗ್ರಹವಾದ ಹಣ.

ಈ ಸಂದರ್ಭದಲ್ಲಿ ತಹಸೀಲ್ದಾರ್ ಗೀತಾಹುಡೇದ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರು, ಕಾವೇರಿ ಗ್ರಾಮೀಣ ಬ್ಯಾಂಕಿನ ಸಿಬ್ಬಂದಿ, ಕಂದಾಯ ಇಲಾಖೆಯ ಅಧಿಕಾರಿ ಸೇರಿದಂತೆ ದೇಗುಲದ ಸಿಬ್ಬಂದಿ ಹಾಜರಿದ್ದರು.07