Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ವ್ಯಕ್ತಿಯೊಬ್ಬರ ಬರ್ಬರ ಹತ್ಯೆ

Saturday, 09.06.2018, 5:46 PM       No Comments

ಯಲಬುರ್ಗಾ: ಕುದುರಿಮೋತಿ ಗ್ರಾಮದ ಹೊರ ಹೊಲಯದಲ್ಲಿ ಚಿಲ್ಕಮುಖಿ ಗ್ರಾಮದ ಹನುಮಂತಪ್ಪ ದಳಪತಿ(45) ಎಂಬುವವರನ್ನು ಶನಿವಾರ ಬರ್ಬರವಾಗಿ ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳು ಬೇರೆಡೆ ಕೊಲೆ ಮಾಡಿ ಶವವನ್ನು ಗ್ರಾಮದ ರಸ್ತೆಯಲ್ಲಿ ಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೇವೂರು ಠಾಣೆ ಪೊಲೀಸರು ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.

—-
ತಾವರಗೇರಾದಲ್ಲಿ ಆಟೋರಿಕ್ಷಾ ಪಲ್ಟಿ, 7 ಜನರಿಗೆ ಗಾಯ

ತಾವರಗೇರಾ:   ಪಟ್ಟಣದ ಸಮೀಪದ ಜುಮಲಾಪುರದಲ್ಲಿ ಸಿಂಧನೂರಿನ ಆಟೋರಿಕ್ಷಾ ಪಲ್ಟಿಯಾಗಿ ಏಳು ಜನ ತೀವ್ರಗಾಯಗೊಂಡ ಘಟನೆ ಶನಿವಾರ ನಡೆದಿದೆ. ಸಿಂಧನೂರಿನಿಂದ ತಾವರಗೇರಾ- ಮುದೇನೂರ ಮಾರ್ಗವಾಗಿ ಇಲಕಲ್ಲಗೆ ಹೋಗುತ್ತಿದ್ದ ಆಟೋರಿಕ್ಷಾ ಜುಮಲಾಪುರ ಸರ್ಕಾರಿ ಪ್ರೌಢ ಶಾಲೆಯ ಹತ್ತಿರದ ರಸ್ತೆಯ ತಿರುವಿನಲ್ಲಿ ವೇಗವಾಗಿ ಬಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕುಷ್ಟಗಿ ತಾಲೂಕಿನ ಜೆ.ರಾಂಪುರ ಗ್ರಾಮದ ನಾಲ್ಕು ಜನ, ಮ್ಯಾದರಡೊಕ್ಕಿ ಗ್ರಾಮದ ಇಬ್ಬರು ರಿಕ್ಷಾದಲ್ಲಿ ಜುಮಲಾಪುರದಿಂದ ಹತ್ತಿದ್ದರು. ಇವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕೆಲವರ ಕೈಕಾಲುಗಳು ಮುರಿದಿವೆ ಅವರನ್ನು ಕೊಪ್ಪಳ, ಇಲಕಲ್ಲ, ಬಾಗಲಕೋಟೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಲಾಗಿದೆ. ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top