ಓಬವ್ವ ತತ್ವಾದರ್ಶ ಮಹಿಳೆಯರಿಗೆ ಸೂರ್ತಿ

Onake Obavva Jayanti

ಯಲಬುರ್ಗಾ: ಶೌರ್ಯ, ಸಾಹಸಗಳಿಂದ ದೇಶಪ್ರೇಮ ಮೆರೆದ ವೀರವನಿತೆ ಒನಕೆ ಓಬವ್ವ ಚರಿತ್ರೆ ಇತಿಹಾಸ ಪುಟದಲ್ಲಿ ಎಂದಿಗೂ ಅಜರಾಮರ ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.

ಪಟ್ಟಣದ ಬೇವೂರು ರಸ್ತೆಯ ಒನಕೆ ಓಬವ್ವ ವೃತ್ತದಲ್ಲಿ ತಾಲೂಕಾಡಳಿತ ಹಾಗೂ ಪಪಂನಿಂದ ಸೋಮವಾರ ಓಬವ್ವ ಜಯಂತಿ ನಿಮಿತ್ತ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಭಾರತ ಇತಿಹಾಸದಲ್ಲಿ ಓಬವ್ವ ಸಾಹಸ ಮರೆಯುವಂತಿಲ್ಲ. ಅವರ ಹೋರಾಟ ಪ್ರತಿ ಮಹಿಳೆಗೂ ಸೂರ್ತಿದಾಯಕ. ಇಂಥ ಶ್ರೇಷ್ಠ, ದಿಟ್ಟ ಮಹಿಳೆ ತತ್ವಾದರ್ಶ ಇಂದಿನ ಮಹಿಳೆಯರು ಬದುಕಿನಲ್ಲಿ ಅನುಕರಿಸಬೇಕು ಎಂದರು.

ಕೊಪ್ಪಳದ ಉಪನ್ಯಾಸಕ ಶಿವನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಒನಕೆ ಓಬವ್ವ ಯಾವುದೇ ವಿದ್ಯೆ, ತರಬೇತಿ ಪಡೆದವರಲ್ಲ. ಅವರೊಬ್ಬ ಸಾಮಾನ್ಯ ಮಹಿಳೆಯಾಗಿದ್ದರು. ಚಿತ್ರದುರ್ಗ ಕೋಟೆ ಮೇಲೆ ಹೈದರಲಿ ಸೈನ್ಯ ದಂಡೆತ್ತಿ ಬಂದಾಗ ಒನಕೆಯಿಂದ ಸೈನಿಕರನ್ನು ಸಂಹಾರ ಮಾಡಿ, ಕೋಟೆ ರಕ್ಷಿಸುವಲ್ಲಿ ಇವರ ಪಾತ್ರ ಹಿರಿದಾಗಿದೆ ಎಂದರು.

ತಾಪಂ ಇಒ ಸಂತೋಷ ಪಾಟೀಲ್, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಛಲವಾದಿ ಸಮಾಜದ ತಾಲೂಕು ಅಧ್ಯಕ್ಷ ಅಂದಪ್ಪ ಹಾಳಕೇರಿ, ಪಪಂ ಸದಸ್ಯರಾದ ಅಮರೇಶ ಹುಬ್ಬಳ್ಳಿ, ರೇವಣಪ್ಪ ಹಿರೇಕುರುಬರ, ಕಳಕಪ್ಪ ತಳವಾರ್, ತಾಲೂಕು ಮಟ್ಟದ ಅಕಾರಿಗಳಾದ ಸೋಮಶೇಖರಗೌಡ ಪಾಟೀಲ್, ಬಿ.ಮಲ್ಲಿಕಾರ್ಜುನ, ನಿಂಗನಗೌಡ ಪಾಟೀಲ್, ಶ್ರೀಧರ ತಳವಾರ್, ಶಿವಶಂಕರ ಕರಡಕಲ್, ಶಶಿಧರ ಸಕ್ರಿ, ಬಸವರಾಜ ಗೋಗೇರಿ, ವೀರಭದ್ರಪ್ಪ ಅಂಗಡಿ, ಸಂಜಯ ಚಿತ್ರಗಾರ, ಪ್ರಮುಖರಾದ ಸಿದ್ದಪ್ಪ ಕಟ್ಟಿಮನಿ, ಛತ್ರಪ್ಪ ಛಲವಾದಿ, ಶಂಕರ ಜಕ್ಕಲಿ, ಶಂಕರ ಕಟ್ಟಿ, ಈರಮ್ಮ ಛಲವಾದಿ, ವಿಜಯ ಜಕ್ಕಲಿ, ಶಶಿಧರ ಹೊಸಮನಿ, ಗಣೇಶ ಕುಡಗುಂಟಿ ಇತರರಿದ್ದರು.

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…