ಯಲಬುರ್ಗಾ: ಸಂಗೀತ ಜೀವನದ ಅವಿಭಾಜ್ಯ ಅಂಗ. ಅದಕ್ಕೆ ಸೋಲದ ಮನಸ್ಸುಗಳಿಲ್ಲ ಎಂದು ತಾಪಂ ಮಾಜಿ ಸದಸ್ಯ ಶಂಕ್ರಗೌಡ ಕನಕನಗೌಡ ಪೊಲೀಸ್ ಪಾಟೀಲ್ ಹೇಳಿದರು.
ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದಲ್ಲಿ ಲಿಂಗನಬಂಡಿಯ ಗಾನಯೋಗಿ ಸಂಗೀತ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪಂ.ಪುಟ್ಟರಾಜ ಗವಾಯಿಗಳ 14ನೇ ಪುಣ್ಯಸ್ಮರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಗಾನಸುಧೆ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಮತ್ತು ಸಂಗೀತ ಬದುಕಿನ ಭಾಗವಾಗಿವೆ. ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಸಂಗೀತ ಒಲಿಯುತ್ತದೆ. ಜಂಜಾಟದ ಜೀವನದಲ್ಲಿ ಸಂಗೀತವನ್ನು ಆಲಿಸಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಂಗೀತವನ್ನು ಉಳಿಸಿ ಬೆಳೆಸುವ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಮಾನಸಿಕ ಆರೋಗ್ಯ ಸದೃಢವಾಗಲು ಸಂಗೀತ ಔಷಧವಿದ್ದಂತೆ ಎಂದರು.
ಕೋನಾಪೂರಮಠದ ಕಲ್ಲಯ್ಯಜ್ಜನವರು, ಸಿದ್ದಯ್ಯಜ್ಜ ಹಿರೇಮಠ, ಭೀಮಜ್ಜ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಸಂಗೀತ ಕಲಾ ಸಂಘದ ಅಧ್ಯಕ್ಷ ತಿಮ್ಮಣ್ಣ ಚನ್ನದಾಸರ, ಗ್ರಾಪಂ ಸದಸ್ಯ ಶರಣಪ್ಪ ನಾಯಕ, ಪ್ರಮುಖರಾದ ಶಂಕ್ರಗೌಡ ಮಾಲಿಪಾಟೀಲ್, ಕನಕಪ್ಪ ದಾಸರ, ಶರಣಪ್ಪ ನಾಯಕ, ಶಂಕ್ರಪ್ಪ ಪೂಜಾರ, ಭೀಮಣ್ಣ ನಾಯಕ, ಸಂಗೀತ ಕಲಾವಿದರಾದ ವಿಶ್ವನಾಥ ಹಿರೇಮಠ, ಅಶ್ವಿನಿ ಹಿರೇವಂಕಲಕುಂಟಾ, ದುರಗಪ್ಪ ಪೂಜಾರ, ಹನುಮಂತಕುಮಾರ ಗವಾಯಿ, ರಾಚಯ್ಯಸ್ವಾಮಿ ಹಿರೇಮಠ, ಪಂಪಾಪತಿ ಗವಾಯಿ, ಹೊಳಿಯಪ್ಪ ಗುರಕಾರ, ದೇವರಾಜ ಎರಿಕಿಹಾಳ, ಶರಣಬಸವ ಲಿಂಗನಬಂಡಿ, ಪುಟ್ಟರಾಜ ರ‌್ಯಾವಣಕಿ, ಚನ್ನಯ್ಯ ಮಠದ, ಕೆ.ರಾಮು, ಶರಣಪ್ಪ ಭಜಂತ್ರಿ, ಶೇಷಗಿರಿ ಸೋನಾರ, ಪ್ರತಾಪಕುಮಾರ ಹಿರೇಮಠ, ಸದಾನಂದ ಶಾಸ್ತ್ರಿ ಹಿರೇಮಠ ಇತರರಿದ್ದರು.