ಯಲಬುರ್ಗಾ: ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಿಂದ ಪಟ್ಟಣದ ತಹಸಿಲ್ ಕಚೇರಿ ಅನುಕೂಲಕ್ಕಾಗಿ ಕಂಪನಿಯ ಸಿಎಸ್‌ಆರ್ ಫಂಡ್‌ನಲ್ಲಿ ಒಟ್ಟು 6 ಕಂಪ್ಯೂಟರ್, 5 ಸ್ಕ್ಯಾನರ್, ಎರಡು ಜೆರಾಕ್ಸ್ ಮಷಿನ್‌ಗಳನ್ನು ತಹಸೀಲ್ದಾರ್ ಬಸವರಾಜ ತೆನ್ನಳ್ಳಿಗೆ ಕಂಪನಿ ವ್ಯವಸ್ಥಾಪಕ ಮುಕುಂದ ಶರದ ಹೇಜಿಬ್ ಸೋಮವಾರ ಹಸ್ತಾಂತರಿಸಿದರು.
ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಮಾತನಾಡಿ, ಪವರ್‌ಗ್ರಿಡ್ ಕಂಪನಿ ನೀಡಿದ ಉಪಕರಣಗಳು ಕಚೇರಿಯ ಹಳೆಯ ದಾಖಲೆಗಳು, ಕಡತಗಳನ್ನು ಗಣಕೀಕರಣಗೊಳಿಸಲು ಅನುಕೂಲವಾಗಲಿವೆ ಹಾಗೂ ಸಾರ್ವಜನಿಕರ ಸೇವೆಗಾಗಿ ತಾಲೂಕಾಡಳಿತಕ್ಕೆ ಪವರ್‌ಗ್ರಿಡ್ ಕಂಪನಿಯು ತನ್ನ ಸಿಎಸ್‌ಆರ್ ಅನುದಾನದಲ್ಲಿ ಕಚೇರಿಗೆ ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣಗಳನ್ನು ದೇಣಿಗೆ ನೀಡಿದ್ದು ತುಂಬಾ ಸಹಕಾರಿಯಾಗಲಿದೆ. ಇದಲ್ಲದೆ ತಾಲೂಕಿನಲ್ಲಿ ದೊಡ್ಡ ದೊಡ್ಡ ಕಂಪನಿಗಳು ಕೂಡ ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ಅವಶ್ಯ ಸಾಮಗ್ರಿಗಳನ್ನು ನೀಡುತ್ತಿವೆ. ಇದರಿಂದ ಕಚೇರಿ ಕೆಲಸ ಕಾರ್ಯಗಳಿಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭ ಕಂಪನಿಯ ಪ್ರಧಾನ ವ್ಯವಸ್ಥಾಪಕರಾದ ಜಿ.ಚಂದನ್, ಹರೀಶಕುಮಾರ, ಗ್ರೇಡ್ 2 ತಹಸೀಲ್ದಾರ್ ವಿ.ಎಚ್. ಹೊರಪೇಟಿ, ಕಂದಾಯ ನಿರೀಕ್ಷಕ ಹಸನ್‌ಸಾಬ್, ನೌಕರರಾದ ರೆಹಮಾನ್, ದಾದಾಪೀರ, ಹನುಮಗೌಡ ಪಾಟೀಲ್ ಇತರರಿದ್ದರು.