ಯಲಬುರ್ಗಾ: ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಿದಾಗ ಕಲೆ ಹೊರಹೊಮ್ಮಲು ಸಾಧ್ಯ ಎಂದು ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಎಫ್.ಎಂ. ಕಳ್ಳಿ ಹೇಳಿದರು.
ತಾಲೂಕಿನ ದಮ್ಮೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ವಜ್ರಬಂಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಮಾತನಾಡಿದರು.
ಸರ್ಕಾರ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳ್ಳಲು ವಿಶಿಷ್ಟ ಯೋಜನೆ ರೂಪಿಸಿದೆ. ಇದು ಅವರ ಭವಿಷ್ಯಕ್ಕೆ ಸಹಕಾರಿಗಲಿದೆ. ಕಲಿಕಾ ಹಂತದಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವುದರಿಂದ ವಿದ್ಯಾರ್ಥಿಗಳಲ್ಲಿನ ವಿಶಿಷ್ಟ ಕಲೆ ಅನಾವರಣಗೊಳ್ಳಲು ಸಾಧ್ಯ ಎಂದರು.
ಮಕ್ಕಳು ಭುವನೇಶ್ವರಿ, ರಾಮ, ಅಕ್ಕಮಹಾದೇವಿ, ರಾಯಣ್ಣ ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳ ಛದ್ಮವೇಷ ಧರಿಸಿ ಕಲೆ ಪ್ರದರ್ಶಿಸಿದರು.
ಗ್ರಾಪಂ ಅಧ್ಯಕ್ಷೆ ಹೊಳಿಯಮ್ಮ ಹಳ್ಳಿಕೇರಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಭೀಮಣ್ಣ ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜೆ.ದಾನಿ, ಮುಖ್ಯಶಿಕ್ಷಕ ಕನಕಪ್ಪ ಕಂಬಳಿ, ಗ್ರಾಪಂ ಸದಸ್ಯ ಭೀಮಣ್ಣ ಜರಕುಂಟಿ, ನೂತನ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಸಿದ್ದಲಿಂಗಪ್ಪ ಶ್ಯಾಗೋಟಿ, ಮೈಬೂಬ ಬಾದಶಹ, ಕಳಕಮಲ್ಲಪ್ಪ ಅಂತೂರ, ಸಂಗಯ್ಯ ಹಿರೇಮಠ, ಪರಮೇಶ್ವರಯ್ಯ ಚಿಂತಾಮಣಿ, ನಿಂಗಮ್ಮ ಶೇಗುಣಸಿ, ದೇವಪ್ಪ ಮುಗಳಿ, ಶಿಕ್ಷಕರಾದ ಲಕ್ಷ್ಮಣ ಛಲವಾದಿ, ವಿ.ಎಚ್.ಶಿವರಡ್ಡಿ, ನಾಗರಾಜ ನಡುಲಕೇರಿ, ವಿಜಯಲಕ್ಷ್ಮೀ ದೇಸಾಯಿ, ಹನುಮೇಶ ಹಿರೇಮನಿ, ರಾಯನಗೌಡ್ರ ಇತರರಿದ್ದರು.