ವರ್ಷದ ಹಿನ್ನೋಟ|ಉದ್ಯಾನನಗರಿ ಸ್ಮಾರ್ಟ್​ ರಾಜಧಾನಿ

Latest News

ಮಹಾರಾಷ್ಟ್ರದಲ್ಲಿ ಹೊಸ ಮೈತ್ರಿ ಸರ್ಕಾರ ರಚನೆಯಾದರೆ ಬುಲೆಟ್​ ರೈಲಿಗೆ ಕುತ್ತು!?

ಮಂಬೈ: ದೇಶದ ಮೊದಲ ಮುಂಬೈ- ಗುಜರಾತ್​ ಬುಲೆಟ್​ ರೈಲು ಯೋಜನೆ ಆರಂಭವಾಗುವ ಮುಂಚೆಯೇ ನಿಂತು ಹೋಗುವ ಸೂಚನೆಗಳು ಕಾಣುತ್ತಿವೆ. ಮಹಾರಾಷ್ಟ್ರ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು...

ಹರಿಹರದಲ್ಲಿರುವ ರಾಮ, ಸೀತೆ ಲಕ್ಷ್ಮಣ ವಿಗ್ರಹದ ವೈರಲ್​ ಫೋಟೋ ಹಿಂದಿನ ಅಸಲಿ ಸತ್ಯ ಫ್ಯಾಕ್ಟ್​ಚೆಕ್​ನಲ್ಲಿ ಬಯಲು!

ನವದೆಹಲಿ: ಅಯೋಧ್ಯೆ ಭೂವಿವಾದ ಸಂಬಂಧ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದ ಬಳಿಕ ರಾಮ, ಲಕ್ಷ್ಮಣ ಮತ್ತು ಸೀತಾ ದೇವಿ ವಿಗ್ರಹಗಳಿರುವ ಎರಡು ಫೋಟೋಗಳು...

ಮೆಟ್ರೋ ನಗರಗಳ ಪೈಕಿ ಹೆಚ್ಚು ಚಟುವಟಿಕೆಗಳ ಮೂಲಕ ಸದಾ ಗಮನ ಸೆಳೆಯುವ ರಾಜಧಾನಿ ಬೆಂಗಳೂರು ಈ ವರ್ಷ ಹಲವು ಶ್ರೇಯಗಳಿಗೆ ಪಾತ್ರವಾಗಿದೆ. ಎಂದಿನಂತೆ ಜಾಗತಿಕವಾಗಿಯೂ ಸುದ್ದಿಯಲ್ಲಿತ್ತು. ಕೆಲ ವರ್ಷಗಳ ಬಳಿಕ ನಗರಕ್ಕೆ ನೀರೇ ಸಿಗದು ಎಂಬ ‘ಸುದ್ದಿ’ ಕೆಲ ದಿನಗಳವರೆಗೆ ತಲ್ಲಣ ಮೂಡಿಸಿದ್ದರೆ, ಅತಿ ಹೆಚ್ಚು ಸಂಬಳ, ಉದ್ಯೋಗ ನೀಡುವ ನಗರ ಎಂಬ ಮೆಚ್ಚುಗೆ ಪಡೆದು ಬೀಗುತ್ತ ಸ್ಮಾರ್ಟ್ ರಾಜಧಾನಿಯಾಗಲು ಸಜ್ಜಾಗಿದೆ. ನಗರದ ಪ್ರಮುಖ ವಿದ್ಯಮಾನಗಳ ನೋಟ ಇಲ್ಲಿದೆ.

ನಾಲ್ಕೂ ದಿಕ್ಕಿನತ್ತ ದಾಪುಗಾಲು

ನಮ್ಮ ಮೆಟ್ರೋ ಮೊದಲನೇ ಹಂತ ಸಂಪೂರ್ಣ ಸಂಚಾರ ಮುಕ್ತವಾಗಿ 2018ಕ್ಕೆ 1 ವರ್ಷ ಪೂರೈಸಿದೆ. ರಾಜಧಾನಿ ಸಂಚಾರ ನಾಡಿಯಾಗಿ ಬೆಳೆಯುತ್ತಿರುವ ಮೆಟ್ರೋ ನಿತ್ಯ ಸರಾಸರಿ 4 ಲಕ್ಷ ಜನರನ್ನು ಸೆಳೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ 2017-18ನೇ ಆರ್ಥಿಕ ವರ್ಷದಲ್ಲಿ ನಿಗಮ ಮೆಟ್ರೋ ಕಾರ್ಯಾಚರಣೆಯಲ್ಲಿ 73 ಕೋಟಿ ರೂ. ಲಾಭಗಳಿಸಿದೆ. ಕಳೆದೊಂದು ವರ್ಷದಲ್ಲಾದ ಪ್ರಮುಖ ಬೆಳವಣಿಗೆ, ಏಳುಬೀಳಿನ ವಿವರ ಇಲ್ಲಿದೆ.

2021 ಮಾರ್ಚ್​ಗೆ 2ನೇ ಹಂತ ಪೂರ್ಣ

ನಮ್ಮ ಮೆಟ್ರೋ 2ನೇ ಹಂತ ಸಂಪೂರ್ಣವಾಗಿ ಸಂಚಾರಮುಕ್ತಗೊಳ್ಳಲು 2021 ಮಾರ್ಚ್ ವರೆಗೆ ಕಾಯಬೇಕಾಗಿದೆ. ನಾಯಂಡಹಳ್ಳಿ- ಕೆಂಗೇರಿ, ನಾಗಸಂದ್ರ-ಬಿಐಇಸಿ ಹಾಗೂ ಯಲಚೇನಹಳ್ಳಿ-ನೈಸ್ ರಸ್ತೆ ಮೆಟ್ರೋ ಮಾರ್ಗ 2020ಕ್ಕೆ ಪೂರ್ಣಗೊಳ್ಳಲಿದೆ. ಆರ್.ವಿ.ರಸ್ತೆ- ಬೊಮ್ಮಸಂದ್ರ ಹಾಗೂ ಬೈಯಪ್ಪನಹಳ್ಳಿ- ವೈಟ್​ಫೀಲ್ಡ್ ಮಾರ್ಗ 2021ಕ್ಕೆ ಹಾಗೂ ಗೊಟ್ಟಿಗೆರೆ-ನಾಗವಾರ ಮಾರ್ಗ 2023ಕ್ಕೆ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ. ಯೋಜನೆಗೆ ಒಪ್ಪಿಗೆ ನೀಡುವ ಸಂದರ್ಭದಲ್ಲಿ 2020ರೊಳಗೆ 2ನೇ ಹಂತ ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್​ಸಿಎಲ್​ಗೆ ಸರ್ಕಾರ ನೀಡಿತ್ತು.

ಟ್ರಿನಿಟಿ ಬಳಿ ಬೀಮ್ ಬಿರುಕು

ಟ್ರಿನಿಟಿ ಮೆಟ್ರೋ ನಿಲ್ದಾಣದ ಸಮೀಪ ಮೆಟ್ರೋ ಮಾರ್ಗದ ಅಡ್ಡತೊಲೆಯಲ್ಲಿ ಡಿಸೆಂಬರ್ ಎರಡನೇ ವಾರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ನಮ್ಮ ಮೆಟ್ರೋ ಸುರಕ್ಷತೆಯ ಬಗ್ಗೆ ಪ್ರಶ್ನೆ ತಂದಿಟ್ಟಂತಹ ಘಟನೆ ಇದು. ತಕ್ಷಣದಲ್ಲೇ ಈ ಭಾಗದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಿ, ಕಾಮಗಾರಿಯನ್ನು ನಿಗಮ ಪ್ರಾರಂಭಿಸಿತ್ತು. ಮೆಟ್ರೋ ಕಾಮಗಾರಿ ಗುಣಮಟ್ಟತೆಯ ಬಗ್ಗೆ ಅಧಿವೇಶನದಲ್ಲೂ ಚರ್ಚೆ ನಡೆಯಿತು. ದುರಸ್ತಿ ಕಾಮಗಾರಿಗಾಗಿ ಡಿ.28 ರಿಂದ ಡಿ.30ರವರೆಗೆ ಮೆಟ್ರೋ ಸ್ಥಗಿತಗೊಳಿಸಲಾಗಿತ್ತು.

ಟ್ರಿಪ್ ಸಂಖ್ಯೆ 171ಕ್ಕೆ ಏರಿಕೆ

ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ. ಹೀಗಾಗಿ 2018 ವರ್ಷಾರಂಭದಲ್ಲೇ ಮೆಟ್ರೋ ರೈಲುಗಳ ಸಂಚಾರದ ಪ್ರಮಾಣವನ್ನು ನಿಗಮ ಏರಿಸಿತ್ತು. ಬೈಯಪ್ಪನಹಳ್ಳಿ- ನಾಯಂಡಹಳ್ಳಿ ಮಾರ್ಗದಲ್ಲಿ ದಿನಕ್ಕಿದ್ದ 157 ಟ್ರಿಪ್​ಗಳನ್ನು ಜ.2ರಿಂದ 171ಕ್ಕೆ ಏರಿಸಲಾಗಿತ್ತು. ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲೂ ಟ್ರಿಪ್ ಸಂಖ್ಯೆ 120ರಿಂದ 123ಕ್ಕೆ ಏರಿಕೆಯಾಗಿದೆ.

6 ಬೋಗಿ ರೈಲು ಸೇರ್ಪಡೆ

2,004 ಜನರು ಏಕಕಾಲದಲ್ಲಿ ಪ್ರಯಾಣಿಸಬಹುದಾದ ಮೊದಲ 6 ಬೋಗಿ ರೈಲು ಸಂಚಾರ 2018ರ ಪ್ರಮುಖ ಬೆಳವಣಿಗೆ. ಜೂ.22ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲನೇ 6 ಬೋಗಿ ರೈಲಿಗೆ ಹಸಿರು ನಿಶಾನೆ ನೀಡಿದ್ದರು. ನಂತರ ಕ್ರಮವಾಗಿ ಅ.4 ಮತ್ತು ನ.22ರಂದು ಮತ್ತೆರಡು 6 ಬೋಗಿ ರೈಲಿಗೆ ಚಾಲನೆ ನೀಡಲಾಯಿತು. ಜನವರಿಯಲ್ಲಿ ನಾಗಸಂದ್ರ-ಯಲಚೇನಹಳ್ಳಿ ಮಾರ್ಗಕ್ಕೂ ಮೊದಲ 6 ಬೋಗಿ ರೈಲು ಸೇರ್ಪಡೆಯಾಗಲಿದೆ. ಏರ್​ಪೋರ್ಟ್ ಮೆಟ್ರೋ ವಿನ್ಯಾಸ ಬದಲು

ಬೈಯಪ್ಪನಹಳ್ಳಿ- ವೈಟ್​ಫೀಲ್ಡ್ ನಡುವೆ 2021ಕ್ಕೆ ಮೆಟ್ರೋ ಮಾರ್ಗ ಉದ್ಘಾಟನೆಯಾಗಲಿದೆ. ಬೈಯಪ್ಪನಹಳ್ಳಿಯಿಂದ 2ನೇ ನಿಲ್ದಾಣವಾಗಿ ಕೆ.ಆರ್.ಪುರ ಮೆಟ್ರೋ ನಿಲ್ದಾಣ ನಿರ್ಮಾಣ ವಾಗಲಿದೆ. ಸಿಲ್ಕ್​ಬೋರ್ಡ್ ಮೆಟ್ರೋ ಮಾರ್ಗಕ್ಕೂ ಕೆ.ಆರ್.ಪುರ ಮೆಟ್ರೋ ನಿಲ್ದಾಣ ಇಂಟರ್​ಚೇಂಜ್ ನಿಲ್ದಾಣವಾಗಿರಲಿದೆ. ಈ ಹಿನ್ನೆಲೆಯಲ್ಲಿ ಕೆ.ಆರ್. ಪುರದಿಂದ ಹೆಬ್ಬಾಳ ಮೂಲಕ ಏರ್​ಪೋರ್ಟ್ ಮೆಟ್ರೋ ಮಾರ್ಗ ಪ್ರಾರಂಭಿಸಲು ನಿಗಮ ಯೋಜನೆ ರೂಪಿಸಿದೆ.

ರೀಚ್6 ವಿನ್ಯಾಸದ ಬದಲಾವಣೆ

ನಮ್ಮ ಮೆಟ್ರೋ 2ನೇ ಹಂತದಲ್ಲಿ ಅಂದಾಜು 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ಗೊಟ್ಟಿಗೆರೆ -ನಾಗವಾರ(ರೀಚ್ 6) ಮೆಟ್ರೋ ಮಾರ್ಗ ನಿರ್ವಣವಾಗಲಿದೆ. ಇಲ್ಲಿ 13 ಕಿ.ಮೀ. ಸುರಂಗ ಮಾರ್ಗ ನಿರ್ವಣಕ್ಕೆ ನಿಗಮ ನಿರ್ಧರಿಸಿತ್ತು. ಆದರೆ ಕಾಮಗಾರಿ ವೆಚ್ಚ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಕೇವಲ ವೆಲ್ಲಾರ ಜಂಕ್ಷನ್​ನಿಂದ ಟ್ಯಾನರಿ ರಸ್ತೆಯವರೆಗೆ ಅಂದಾಜು 2,235 ಕೋಟಿ ರೂ.ವೆಚ್ಚದಲ್ಲಿ 5.63 ಕಿ.ಮೀ. ಸುರಂಗ ಮಾರ್ಗ ನಿರ್ವಿುಸಲಿದೆ.

73 ಕೋಟಿ ರೂ.ಲಾಭ

ನಮ್ಮ ಮೆಟ್ರೋ ಮೊದಲನೇ ಹಂತ ಸಂಚಾರ ಮುಕ್ತವಾದ ಒಂದೇ ವರ್ಷದಲ್ಲಿ ಬಿಎಂಆರ್​ಸಿಎಲ್ ಕಾರ್ಯಾಚರಣೆ ಲಾಭಗಳಿಸಿದೆ. 2017-18ನೇ ಸಾಲಿನಲ್ಲಿ ಟಿಕೆಟ್ ಮಾರಾಟದಿಂದ 281 ಕೋಟಿ ರೂ., ಇತರೆ ಆದಾಯ ಮೂಲಗಳಿಂದ ಒಟ್ಟು 56.21 ಕೋಟಿ ರೂ. ಸೇರಿ ಒಟ್ಟು 337.21 ಕೋಟಿ ಆದಾಯಗಳಿಸಿದೆ. ಕಾರ್ಯಾಚರಣೆ, ಸಿಬ್ಬಂದಿ ವೇತನ, ನಿರ್ವಹಣೆ ಖರ್ಚು 264.10 ಕೋಟಿ ಆಗಿದ್ದು, ನಿಗಮಕ್ಕೆ 73.11 ಕೋಟಿ ರೂ.ಲಾಭ ಬಂದಿದೆ.

ನಮ್ಮ ಮೆಟ್ರೋ 3ನೇ ಹಂತದ ಘೋಷಣೆ

ಮೆಟ್ರೋ 1 ಮತ್ತು 2ನೇ ಹಂತವನ್ನು ಸಂರ್ಪಸುವಂತೆ ವೃತ್ತಾಕಾರದಲ್ಲಿ ನಮ್ಮ ಮೆಟ್ರೋ 3ನೇ ಹಂತ ಜಾರಿಯಾಗಲಿದೆ. ಜೆ.ಪಿ.ನಗರದಿಂದ ಹೆಬ್ಬಾಳ ಮೂಲಕ ಕೆ.ಆರ್.ಪುರದವರೆಗೆ 42.75 ಕಿ.ಮೀ., ಟೋಲ್​ಗೇಟ್​ನಿಂದ ಕಡಬಗೆರೆವರೆಗೆ 12.5 ಕಿ.ಮೀ., ಗೊಟ್ಟಿಗೆರೆಯಿಂದ ಬಸವಪುರದವರೆಗೆ 3.07 ಕಿ.ಮೀ., ಆರ್.ಕೆ.ಹೆಗಡೆ ನಗರದಿಂದ ಏರೋಸ್ಪೇಸ್ ಪಾರ್ಕ್ ವರೆಗೆ 18.95 ಕಿ.ಮೀ., ಕೋಗಿಲು ಕ್ರಾಸ್​ನಿಂದ ರಾಜಾನುಕುಂಟೆವರೆಗೆ 10.6 ಕಿ.ಮೀ.ಇಬ್ಬಲೂರು- ಕಾರ್ವೆಲ್​ರಾಮ್ರೆಗೆ 6.67 ಕಿ.ಮೀ., ಸೇರಿ 95 ಕಿ.ಮೀ. ಮಾರ್ಗಗಳ ಕಾರ್ಯಸಾಧ್ಯತಾ ಅಧ್ಯಯನ ಪ್ರಗತಿಯಲ್ಲಿದೆ.

ಹಳ್ಳಿಗಳಿಗೆ ಹರಿದ ಕಾವೇರಿ

ರಾಜಧಾನಿಗೆ ಜೀವಜಲ ಒದಗಿಸುತ್ತಿರುವ ಜಲಮಂಡಳಿ 110 ಹಳ್ಳಿಗಳಿಗೆ ಕುಡಿಯುವ ನೀರು, ಒಳಚರಂಡಿ ಸಂಪರ್ಕವನ್ನು ಕಲ್ಪಿಸುವ ಮಹತ್ಕಾರ್ಯಕ್ಕೆ ಮುಂದಾಗಿದೆ. ಹಳೆಯದಾಗಿರುವ ಪೈಪ್​ಲೈನ್​ಗಳನ್ನು ನಗರದ ಹಲವು ಭಾಗಗಳಲ್ಲಿ ಮಂಡಳಿ ಬದಲಾಯಿಸುತ್ತಿದೆ. ಜೈಕಾದಿಂದ ಕಾವೇರಿ 5ನೇ ಹಂತದ ಯೋಜನೆಗೆ ಅನುದಾನ ದೊರೆತ ಕಾರಣ 2019ರ ಮಧ್ಯದಲ್ಲಿ ಕಾಮಗಾರಿ ಆರಂಭಿಸುವ ಸಿದ್ಧತೆಯಲ್ಲಿದೆ.

29 ಗ್ರಾಮಗಳಿಗೆ ನೀರು ಪೂರೈಕೆ ಆರಂಭ

ಕುಡಿಯುವ ನೀರು ಸಂಪರ್ಕ ಒದಗಿಸಲು ಕೊಳವೆ ಮಾರ್ಗಗಳ ಅಳವಡಿಕೆಗೆ ಮುಂದಾಗಿರುವ ಜಲಮಂಡಳಿ ಪೈಪ್​ಲೈನ್ ಕಾಮಗಾರಿ ಪೂರ್ಣಗೊಂಡ ಕಡೆಗಳಲ್ಲಿ ನೀರು ಪೂರೈಕೆ ಆರಂಭಿಸಿದೆ. ಅಬ್ಬಿಗೆರೆ, ಮೇಡರಹಳ್ಳಿ, ಶೆಟ್ಟಿಹಳ್ಳಿ, ಹೆಮ್ಮಿಗೆಪುರ, ಉತ್ತರಹಳ್ಳಿ, ರಾಮಗೊಂಡನಹಳ್ಳಿ, ಎಲೇನಹಳ್ಳಿ, ದೊಡ್ಡಕಲ್ಲಸಂದ್ರ , ರಘುವನಹಳ್ಳಿ, ಗೊಲ್ಲಹಳ್ಳಿ, ತಿಪ್ಪಸಂದ್ರ, ಹೇರೋಹಳ್ಳಿ, ರಾಚೇನಹಳಿ, ವಲ್ಲಭನಗರ, ಸೊಣ್ಣೇನಹಳ್ಳಿ, ಹೊರಮಾವು, ಸಿದ್ದಾಪುರ, ದಾಸರಹಳ್ಳಿ, ಚಳ್ಳಕೆರೆ, ಕೂಡ್ಲು, ನಾಗನಾಥಪುರ, ಪರಪ್ಪನ ಅಗ್ರಹಾರ, ಗಾಣಕಲ್ಲು, ತುಬರಹಳ್ಳಿ, ಸಿದ್ದಾಪುರ, ಅಟ್ಟೂರು, ಬೇಗೂರು, ಹರಳೂರುಗಳಿಗೆ ನೀರು ಪೂರೈಕೆ ಆರಂಭಿಸಿದೆ.

ವಾಟರ್ ಲೀಡರ್ ಗರಿ

ವಿಶ್ವಸಂಸ್ಥೆ ಸಹಯೋಗದಲ್ಲಿ ಫ್ರಾನ್ಸ್​ನಲ್ಲಿ ಹಮ್ಮಿಕೊಂಡಿದ್ದ ನೀರು ಸಂರಕ್ಷಣೆ ಕುರಿತಾದ ಜಾಗತಿಕ ಸಮ್ಮೇಳನದಲ್ಲಿ ಜಲಮಂಡಳಿಗೆ ವಾಟರ್ ಲೀಡರ್ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಬೆಂಗಳೂರಿನಂಥ ಮಹಾನಗರಗಳಲ್ಲಿ ಸವಾಲುಗಳನ್ನು ಮೆಟ್ಟಿ ನೀರು ಪೂರೈಸುವುದು, ಸೋರಿಕೆ ತಡೆಗಟ್ಟುವುದು, ನೀರು ಉಳಿತಾಯ ಸೇರಿ ಇತರ ವಿಚಾರಗಳಲ್ಲಿ ಮಂಡಳಿ ಕಾರ್ಯವೈಖರಿಯನ್ನು ಗಮನಿಸಿ ಪ್ರಶಸ್ತಿ ಸಂದಿದೆ.

ಕೇಪ್​ಟೌನ್​ನಂತಾಗಲಿದೆ ಬೆಂಗಳೂರು

ಬಿಬಿಸಿ 2018ರಲ್ಲಿ ಪ್ರಕಟಿಸಿದ ವರದಿ ಬೆಂಗಳೂರಿಗರನ್ನು ಬೆಚ್ಚಿಬೀಳಿಸಿತ್ತು. ಕುಡಿಯುವ ನೀರಿನ ಅಭಾವ ಹೊಂದುವ ವಿಶ್ವದ 11 ನಗರಗಳ ಪಟ್ಟಿಯಲ್ಲಿ ಬೆಂಗಳೂರನ್ನು ಹೆಸರಿಸಿತ್ತು. ದಕ್ಷಿಣ ಆಫ್ರಿಕಾದ ಕೇಪ್​ಟೌನ್ ನೀರು ಇಲ್ಲದ ಮೊದಲ ನಗರವಾಗಿದ್ದು, ಬೆಂಗಳೂರು ಕೂಡ ಅದೇ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಎಚ್ಚರಿಸಿತ್ತು. ಬ್ರೆಜಿಲ್​ನ ಸಾವೊ ಪಾವ್ಲೊ, ಬೀಜಿಂಗ್, ಈಜಿಪ್ತನ ಕೈರೊ ನಗರ, ಇಂಡೋನೇಷ್ಯಾದ ಜಕಾರ್ತ, ಇಸ್ತಾನ್​ಬುಲ್, ಮೆಕ್ಸಿಕೊ ನಗರ, ಲಂಡನ್, ಟೋಕಿಯೋ, ಮಿಯಾಮಿ ನಗರಗಳು ಈ ಪಟ್ಟಿಯಲ್ಲಿ ಸ್ಥಾನಪಡೆದಿವೆ.

110 ಹಳ್ಳಿಗಳಿಗೆ ಪೈಪ್​ಲೈನ್

110 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಜಲಮಂಡಳಿ ಈಗಾಗಲೇ ತೊಡಗಿದೆ. 1,500 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕೊಳವೆಮಾರ್ಗ ಮತ್ತು 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಪೈಪ್​ಲೈನ್ ಅಳವಡಿಕೆಗೆ ಮುಂದಾಗಿದೆ. ಎರಡೂ ಯೋಜನೆಗಳನ್ನು 2019ರ ಮಧ್ಯದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಉದ್ಯೋಗ ನಗರಿ ಹೆಮ್ಮೆ

ಸಿಲಿಕಾನ್ ಸಿಟಿ, ಜ್ಞಾನ ನಗರಿ ಎಂಬ ಬಿರುದು ಹೊಂದಿರುವ ಬೆಂಗಳೂರಿಗೆ ಇದೀಗ ‘ಉದ್ಯೋಗ ನಗರಿ’ಎಂಬ ಮತ್ತೊಂದು ಗರಿ ಸಿಕ್ಕಿದೆ. ಏಕೆಂದರೆ, ಇಡೀ ದೇಶದಲ್ಲಿ ಹೆಚ್ಚು ಉದ್ಯೋಗ ನೀಡುತ್ತಿರುವ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ನಡೆಸಿದ ‘ಇಂಡಿಯಾ ಸ್ಕಿಲ್ -2019’ ಸಮೀಕ್ಷೆಯಲ್ಲಿ ಇದು ದೃಢಪಟ್ಟಿದೆ. ಪೀಪಲ್ ಸ್ಟ್ರಾಂಗ್ ಮತ್ತು ಸಿಐಐ ಹಾಗೂ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಎಐಸಿಟಿಇ ಈ ಸಮೀಕ್ಷೆ ನಡೆಸಿತ್ತು. ಉದ್ಯೋಗಾವಕಾಶದಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದರೆ, ಆನಂತರದ ಸ್ಥಾನಗಳನ್ನು ಚೆನ್ನೈ, ಗುಂಟೂರು, ಲಖನೌ, ಮುಂಬೈ, ನವದೆಹಲಿ, ನಾಸಿಕ್, ಪುಣೆ ಮತ್ತು ವಿಶಾಖಪಟ್ಟಣ ನಗರಗಳು ಪಡೆದಿವೆ.

ಹೊಸ ವಿವಿ ಕಾರ್ಯಾರಂಭ: ಬೆಂಗಳೂರು ವಿಶ್ವವಿದ್ಯಾಲಯದ ವಿಭಜನೆಯಿಂದ ಉಗಮವಾದ ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳು 2018ನೇ ಸೆಪ್ಟಂಬರ್​ನಿಂದ ಶೈಕ್ಷಣಿಕ ಚಟುವಟಿಕೆ ಆರಂಭ ಮಾಡಿವೆ.

ಭರಪೂರ ಅನುದಾನ

ಮೂಲಸೌಕರ್ಯ ಕೊರತೆ ಮಧ್ಯೆಯೂ ನಗರದ ಅಭಿವೃದ್ಧಿಗೆ ಸಂಕಲ್ಪ ಹೊತ್ತಿರುವ ಬಿಬಿಎಂಪಿ 2018ರಲ್ಲಿ ಅನೇಕ ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕೆಲ ಒಳ್ಳೆಯ ವಿಚಾರಗಳಿಂದ ಸುದ್ದಿಯಾಗಿರುವ ಪಾಲಿಕೆ, ಇನ್ನೂ ಕೆಲವು ವಿಚಾರಗಳಲ್ಲಿ ಎಂದಿನಂತೆ ಜನರ ಶಾಪಕ್ಕೆ ಗುರಿಯಾಗಿದೆ. ಉಪಮೇಯರ್ ರಮೀಳಾ ಉಮಾಶಂಕರ್ ಮತ್ತು ಸಗಾಯ್ಪುರ ವಾರ್ಡ್​ನ ಸದಸ್ಯ ಏಳು ಮಲೈ ನಿಧನರಾಗಿದ್ದು ಕಹಿಯ ವಿಚಾರವಾದರೆ, ಮತ್ತೊಂದೆಡೆ ಸರ್ಕಾರ ವರ್ಷದ ಕೊನೆಯಲ್ಲಿ ಬಿಬಿಎಂಪಿಗೆ ಅಗತ್ಯವಾಗಿರುವ 9049.95 ಕೋಟಿ ರೂ. ಅನುದಾನ ಒದಗಿಸಲು ಒಪ್ಪಿಗೆ ಸೂಚಿಸಿದೆ.

ಸಮಗ್ರ ಅಭಿವೃದ್ಧಿ

ಬೆಂಗಳೂರು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 9049.95 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ವೈಟ್ ಟಾಪಿಂಗ್- 1299 ಕೋಟಿ ರೂ., ಕೆರೆಗಳ ಅಭಿವೃದ್ಧಿ- 335 ಕೋಟಿ ರೂ.,ರಸ್ತೆಗಳ ಅಭಿವೃದ್ಧಿ 2481.19 ಕೋಟಿ ರೂ., ಗ್ರೇಡ್ ಸಪರೇಟರ್ ನಿರ್ವಣ- 1154.10 ಕೋಟಿ ರೂ., ಬೃಹತ್ ನೀರುಗಾಲುವೆ ಅಭಿವೃದ್ಧಿ – 1576.91 ಕೋಟಿ ರೂ, ಪಾದಚಾರಿ ಮಾರ್ಗಗಳ ಅಭಿವೃದ್ಧಿ 170.30 ಕೋಟಿ ರೂ.,110 ಹಳ್ಳಿಗಳ ರಸ್ತೆಗಳ ಅಭಿವೃದ್ಧಿ 422 ಕೋಟಿ ರೂ., ಐಟಿಪಿಎಲ್ ಪರ್ಯಾಯ ಸಂಪರ್ಕ ಕಲ್ಪಿಸುವ 14 ರಸ್ತೆಗಳ ಅಭಿವೃದ್ಧಿ 80ಕೋಟಿ ರೂ., ಎನ್​ಎಎಲ್-ವಿಂಡ್ ಟನಲ್ ರಸ್ತೆ ನಿರ್ಮಾಣ 65 ಕೋಟಿ ರೂ., ಘನತಾಜ್ಯ ನಿರ್ವಹಣೆ 993 ಕೋಟಿ ರೂ., ಕಟ್ಟಡಗಳ ಮತ್ತು ಆಸ್ಪತ್ರೆಗಳ 367.45ಕೋಟಿ ರೂ., ರಕ್ಷಣಾ ಇಲಾಖೆಯಿಂದ ಪಡೆದುಕೊಳ್ಳಬೇಕಿರುವ ಜಮೀನಿನಲ್ಲಿ ಯೋಜನೆ ಅನುಷ್ಠಾನಕ್ಕೆ 106 ಕೋಟಿ ರೂ. ಮೀಸಲಿಟ್ಟಿದೆ,

ಸಾವು ತಂದ ನೋವು…

್ಝಪಮೇಯರ್ ಆಗಿ ಆಯ್ಕೆಯಾದ ಒಂದೇ ವಾರದಲ್ಲಿ ಆರ್. ರಮೀಳಾ ಉಮಾಶಂಕರ್ ನಿಧನ ್ಝುೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವಿ. ಏಳುಮಲೈ ನಿಧನ ್ಝನರೇಟರ್ ವ್ಯವಸ್ಥೆಯಿಲ್ಲದೆ ಶ್ರೀರಾಮಪುರ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡ ಮಗು ್ಝೕದಿನಾಯಿ ದಾಳಿಗೆ ಪ್ರವೀಣ್ ಎಂಬ ಬಾಲಕ ಸಾವು, ಅಧಿಕಾರಿಗಳ ಬಂಧನ ್ಝುಳೆಗೆ ಮನೆಯೊಂದರ ಕಾಂಪೌಂಡ್ ಕುಸಿದು ಮಾಲತೇಶ್ (30) ಸಾವು.

ಸ್ಮಾರ್ಟ್​ಸಿಟಿ ಯೋಜನೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಯೋಜನೆಯಂತೆ ಒಟ್ಟು 1,742 ಕೋಟಿ ರೂ. ಮೊತ್ತದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ 500 ಕೋಟಿ ರೂ. ನೀಡಿದರೆ, ಉಳಿದ 1,242 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನೀಡಲಿದೆ. ಈ ಯೋಜನೆಯಡಿ 23 ರಸ್ತೆಗಳನ್ನು ಟೆಂಡರ್ ಶ್ಯೂರ್ ರಸ್ತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಗಾಂಧಿನಗರ, ಶಿವಾಜಿನಗರ, ಮಲ್ಲೇಶ್ವರ ಮತ್ತು ಚಾಮರಾಜಪೇಟೆಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಯೋಜಿಸಲಾಗಿದೆ. ಈ ರಸ್ತೆಗಳು ಸ್ಮಾರ್ಟ್​ಕಾರ್ಡ್ ಬಳಸುವ ಸೈಕಲ್ ನಿಲುಗಡೆ ಸ್ಥಳ, ಇ-ಆಟೋ ನಿಲುಗಡೆ, ಇ-ಶೌಚಗೃಹ, ಕುಡಿಯುವ ನೀರಿನ ಘಟಕ ಮತ್ತು ಎಟಿಎಂ, ಸೆನ್ಸರ್ ಆಧರಿತ ಡಸ್ಟ್​ಬಿನ್, ಸುಸಜ್ಜಿತ ಪಾದಚಾರಿ ಮಾರ್ಗದಡಿ ಒಎಫ್​ಸಿ, ನೀರಿನ ಪೈಪ್, ವಿದ್ಯುತ್ ತಂತಿಗಳ ಅಳವಡಿಕೆಗೆ ವ್ಯವಸ್ಥೆಗಳನ್ನು ಹೊಂದಿರುತ್ತವೆ.

ಐತಿಹಾಸಿಕ ಕರಗ ಮಹೋತ್ಸವ

ಈ ಬಾರಿ ಕರಗ ಮಹೋತ್ಸವ ಅಚ್ಚರಿಯೊಂದಕ್ಕೆ ಕಾರಣವಾಯಿತು. ನಿಗದಿಯಂತೆ ಅರ್ಚಕ ಎನ್.ಮನು ಕರಗವನ್ನು ಹೊರಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅರ್ಚಕ ಜ್ಞಾನೇಂದ್ರ ಕರಗ ಹೊರಬೇಕಾಯಿತು. ರಾತ್ರಿಯಿಡೀ ಅರ್ಚಕ ಮನು ಅವರೇ ಕರಗ ಹೊತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ಮರುದಿನ ಮಧ್ಯಾಹ್ನದ ಹೊತ್ತಿಗೆ ಜ್ಞಾನೇಂದ್ರ ಕರಗವನ್ನು ಹೊತ್ತಿರುವುದು ಬೆಳಕಿಗೆ ಬಂದಿತ್ತು.

ವಿಜಯವಾಣಿ ಟೀಂ: ಕೀರ್ತಿನಾರಾಯಣ ಸಿ. ಅಭಿಲಾಷ್ ಪಿಲಿಕೂಡ್ಲು, ಅಭಯ್ ಮನಗೂಳಿ

ವಿನ್ಯಾಸ: ಗೋದಾವರಿ ಡಿ.ಎಸ್. ನಿರ್ವಹಣೆ: ರಮೇಶ್ ಮೈಸೂರು

- Advertisement -

Stay connected

278,668FansLike
576FollowersFollow
611,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...