ಗುಳೇದಗುಡ್ಡ: ನಾನು ಭಾರತೀಯತೆ ವಿರೋಧಿಸುವ ಮುಸ್ಲಿಮರ ವಿರೋಧಿಯೇ ಹೊರತು ಭಾರತೀಯತೆ ಗೌರವಿಸುವ ಮುಸ್ಲಿಂರ ವಿರೋಧಿಯಲ್ಲ ಎಂದು ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳು ಹೇಳಿದರು.
ಪಟ್ಟಣದ ಸಮಸ್ತ ಹಿಂದೂ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ನಮ್ಮ ಧರ್ಮದಲ್ಲಿ ಒಗ್ಗಟ್ಟು ಇಲ್ಲ. ಜಾತಿ, ಮತ ತೊರೆದು ನಾವೆಲ್ಲ ಹಿಂದು, ಭಾರತೀಯ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಮತಕ್ಕಾಗಿ ಹೆದರಿ ರಾಜಕೀಯ ಮಾಡಬಾರದು. ಚುನಾವಣೆ ಬಂದರೆ ಮನೆಮನೆಗೆ ಹೋಗಿ ಮತ ಹಾಕಿ ಎಂದು ಕೈ, ಕಾಲು ಹಿಡಿಯುವವರ ನಡುವೆ, ಈ ಕೋಮಿನವರು ನನಗೆ ಮತ ಹಾಕಲೇ ಬೇಡಿಎಂದು ಹೇಳುವ ರಾಜ್ಯದ ಏಕೈಕ ರಾಜಕಾರಣಿ ಎಂದರೆ ಅದು ಯತ್ನಾಳರು. ನಾವು ಶಿವಾಜಿ ಮಹಾರಾಜರನ್ನು ನೋಡಿಲ್ಲ. ಆದರೆ ಆ ನಿಟ್ಟಿನಲ್ಲಿ ಕೆಲಸ ಮಾಡುವ ಯತ್ನಾಳ ಅವರು ಶಿವಾಜಿಯ ಪ್ರತಿರೂಪ ಎಂದರು.
ಗುರುಸಿದ್ದ ಪಟ್ಟದಾರ್ಯ ಶ್ರೀಗಳು ಸಾನ್ನಿಧ್ಯವಹಿಸಿ ಮಾತನಾಡಿ, ಶಿವಾಜಿ ಮಹಾರಾಜರು ತಂದೆತಾಯಿ, ಗುರುಗಳ ಮೇಲೆ ಅಪಾರವಾದ ಗೌರವವನ್ನು ಹೊಂದಿದ ವ್ಯಕ್ತಿ. ಹಿಂದೂ ಸಮಾಜವನ್ನು ಸಂಘಟಿಸಿ ಉಳಿಸಿದ ಮಹಾನ ಶಕ್ತಿವಂತ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸೈನಿಕ ಶ್ರೀಧರ ಚಂದರಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಬಿಜೆಪಿ ಮುಖಂಡರಾದ ಸಂಪತ್ತಕುಮಾರ ರಾಠಿ, ಕಮಲಕಿಶೋರ ಮಾಲಪಾಣಿ, ಸಂಜೀವ ಕಾರಕೂನ, ವಸಂತಸಾ ದೊಂಗಡೆ, ಬಿಜೆಪಿ ನಗರಘಟಕದ ಅಧ್ಯಕ್ಷ ಪ್ರಶಾಂತ ಜವಳಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭುವನೇಶ ಪೂಜಾರ, ಪುರಸಭೆ ಸದಸ್ಯ ಸಂತೋಷ ನಾಯನೇಗಲಿ, ವಿಠ್ಠಲ ಪತ್ತಾರ, ಬಸವರಾಜ ಕುಂಬಾರ, ಶ್ರೀಕಾಂತ ಭಾವಿ, ಸಿದ್ದು ನಾಯನೇಗಲಿ, ಶ್ರೀಶೈಲ ಕುಂಬಾರ, ಶಿವು ಬಾದೋಡಗಿ, ಪ್ರಭು ಕಳ್ಳಿಗುಡ್ಡ, ರಂಗನಾಥ ವಾಲಿಕಾರ, ರಾಮು ಮಿಣಜಗಿ, ಬಾಳು ನಿರಂಜನ, ಶಿವು ತುಪ್ಪದ, ಪ್ರವೀಣ ದೇವಗಿರಿಕರ, ಮಹೇಶ ಸೂಳಿಬಾವಿ, ಪ್ರಥಮೇಶ ವಾಘಮೋಡೆ, ಜ್ಞಾನೇಶ್ವರ ಬೊಂಬಲೇಕರ ಮತ್ತಿತರರಿದ್ದರು.