More

  ನಿನಗ ತಾಕತ್ ಇದ್ರ ನನ್ನ ಜೊತೆ ಯುದ್ಧಕ ಬಾ ಡೈರೆಕ್ಟ್: ಪರೋಕ್ಷವಾಗಿ ಜಾರಕಿಹೊಳಿಗೆ ಯತ್ನಾಳ್ ಸವಾಲ್​

  ಬೆಳಗಾವಿ: ಹಿಂದೂ ಎಂಬುದರ ಕುರಿತು ಇತ್ತೀಚೆಗೆ ಅವಹೇಳನಕಾರಿಯಾಗಿ ಮಾತನಾಡಿ ವಿವಾದಕ್ಕೀಡಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಕಟ್ಟರ್ ಹಿಂದೂವಾದಿ ಎಂದು ಕರೆಯಲ್ಪಡುವ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್​ ಸವಾಲೆಸೆದು ತೊಡೆ ತಟ್ಟಿದ್ದಾರೆ. ಅವರು ಸತೀಶ್ ಜಾರಕಿಹೊಳಿ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ ಪರೋಕ್ಷವಾಗಿ ಕಿಡಿಕಾರಿದ್ದಾರೆ.

  ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಆಯೋಜಿಸಲಾದ ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಯತ್ನಾಳ್, ಜಾರಕಿಹೊಳಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದ್ದಾರೆ. ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಈ ದೇಶದ ಸಂವಿಧಾನ ಬರೆದರು. ಅವರು ಪಟ್ಟ ಕಷ್ಟ ಯಾರೂ ಅನುಭವಿಸಿಲ್ಲ. ಅಂಬೇಡ್ಕರ್​​ಗೆ ನಮ್ಮ ಸಮಾಜದವರು ಬಹಳ ಅನ್ಯಾಯ ಮಾಡಿದರು ಎಂದ ಅವರು, ಬುದ್ಧ, ಬಸವ, ಅಂಬೇಡ್ಕರ್ ನಾವೇ ಮಾಡಿದ್ದೋ ಮಾರಾಯ. ನೀ ಫೋಟೋ ಹಾಕೊಂಡ್ರೆ ಆಯ್ತೇನೋ ಎಂದು ಸತೀಶ್ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.

  ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ, ಸಾಯುವಾಗ ಹಿಂದೂ ಧರ್ಮದಲ್ಲಿ ಇರುವುದಿಲ್ಲ ಅಂತ ಅಂಬೇಡ್ಕರ್ ಹೇಳಿದ್ದರು. ಅವರು 1956ರಲ್ಲಿ ನಾಗ್ಪುರದಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡುತ್ತಾರೆ ವಿನಹ ತಪ್ಪಿಯೂ ಇಸ್ಲಾಂ, ಮುಸ್ಲಿಂ, ಸಿಖ್ ಧರ್ಮಕ್ಕೆ ಹೋಗಲಿಲ್ಲ. ನಾನು ಅಂಬೇಡ್ಕರ್ ಪುಸ್ತಕ ಓದಿದ್ದೇನೆ, ವಿಧಾನಸಭೆಯಲ್ಲಿ ಮಾತನಾಡಿದ್ದೇನೆ, ತಾಕತ್ ಇದ್ರ ನೀನೂ ಮಾತನಾಡಬೇಕಾಗಿತ್ತು ಎಂದು ಯತ್ನಾಳ್ ಹೇಳಿದರು.

  ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳಿಂದ ಮೊಘಲರು ಬಂದರೂ ಏನೂ ಆಗಿಲ್ಲ. ಇನ್ನೂ ನೀ ಏನ್ ಮಾಡ್ತಿಯೋ, ಮುಗ್ಧ ಜನರನ್ನು ಇಟ್ಕೋಂಡ ನೀ ಏನ್ ಕಿಸಿತಿಯೋ? ನಿನಗ ತಾಕತ್ ಇದ್ರ ನನ್ನ ಜೊತೆ ಯುದ್ಧಕ ಬಾ ಡೈರೆಕ್ಟ್ ಎಂಬುದಾಗಿ ಜಾರಕಿಹೊಳಿಗೆ ಯತ್ನಾಳ್ ಸವಾಲೆಸೆದಿದ್ದಾರೆ. ಮಾತ್ರವಲ್ಲ, ಅಧಿಕಾರದಲ್ಲಿದ್ದ ಸಿಎಂ ಏನೂ ಮಾಡಲು ಆಗಿಲ್ಲ, ನೀನೇನು ಮಾಡುತ್ತಿ ಎಂಬುದಾಗಿಯೂ ಯತ್ನಾಳ್ ಹೇಳಿದ್ದಾರೆ.

  ಮೋದಿ-ಯೋಗಿ ಬಿಟ್ಟರೆ ಇನ್ಯಾರು?; 25 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಖರ ಹಿಂದೂವಾದಿಗಳೇ ಅಭ್ಯರ್ಥಿಗಳು!

  ಮಟನ್ ತರಲು ಹೋದವ ಮರಳಿ ಬರಲೇ ಇಲ್ಲ!; ಬೈಕ್​ಸಮೇತ ಎಳೆದೊಯ್ದ ಮಿನಿಲಾರಿ..

  ಭೀಕರ ಅಪಘಾತ: 30ಕ್ಕೂ ಅಧಿಕ ಪ್ರಯಾಣಿಕರಿದ್ದ ಬಸ್ ಪಲ್ಟಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts